ಮಟ್ಕಾ: 7 ಮಂದಿ ಬಂಧನ
ಹಾಸನ: ಜಿಲ್ಲೆಯ ನಾನಾ ಕಡೆ ಮಟ್ಕಾ ಜೂಜಾಡುತ್ತಿದ್ದ 7 ಜನರನ್ನು ಬಂಧಿಸಿದ್ದು, ರು. 16,410 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಾಸನದ ಮಟನ್ ಮಾರ್ಕೆಟ್ ವೃತ್ತದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ರು. 1 ಗೆ ರು. 80 ಕೊಡುವುದಾಗಿ ಮಟ್ಕಾ ಜೂಜಾಡುತ್ತಿದ್ದಾಗ ಪೆನ್ಷನ್ ಠಾಣೆಯ ಪಿಎಸ್ಐ ಮೋಹನ್ ಕುಮಾರ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಟ್ಕಾ ಜೂಜಾಡುತ್ತಿದ್ದ ದಿವಾಕರ (40) ಎಂಬುವರನ್ನು ಬಂಧಿಸಿ, ಪಣಕ್ಕಿಟ್ಟಿದ್ದ ಸುಮಾರು ರು. 130 ನಗದನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹಾಸನ ನಗರದ ಕಟ್ಟಿನಕೆರೆ ಮಾರ್ಕೆಟ್ನಲ್ಲಿರುವ ಶೌಚಾಲಯದ ಬಳಿ ಮಟ್ಕಾ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ 1 ರು.ಗೆ 80 ರು.ಕೊಡುವುದಾಗಿ ಮಟ್ಕಾ ಬರೆಯುತ್ತಿದ್ದ ಅರುಣ್ ಕುಮಾರ (21) ಎಂಬಾತನ್ನು ಬಂಧಿಸಿ, 1,990 ರು.ನಗದನ್ನು ವಶಪಡಿಸಿಕೊಂಳ್ಳಲಾಗಿದೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಹಾಸನ ನಗರದ ವಾತ್ಸಲ್ಯ ಆಸ್ಪತ್ರೆ ಎದುರು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಡುತ್ತಿದ್ದಾಗ ಹಾಸನ ನಗರ ಠಾಣೆಯ ಪಿಎಸ್ಐ ಶ್ರೀಧರ್ರ್ವರಿಗೆ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ 1ರು. 80 ರು. ಕೊಡುವುದಾಗಿ ಮಟ್ಕಾ ಬರೆಯುತ್ತಿದ್ದ ಮಂಜೇಗೌಡ (45) ನ್ನು ಬಂಧಿಸಿ, ರು. 5,865 ರು. ನಗದನ್ನು ವಶಪಡಿಸಿಕೊಂಡಿದ್ದು, ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹಾಸನ ನಗರದ ತಣ್ಣೀರುಹಳ್ಳ ಹಾಲುವಾಗಿಲು ರಸ್ತೆಯಲ್ಲಿರುವ ರಂಗಣ್ಣ ನವರ ಜೋಳದ ಗೋಡೌನ್ನಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ಹಾಸನ ನಗರ ಠಾಣೆಯ ಪಿಎಸ್ಐ ಶ್ರೀಧರ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಜೂಜಾಡುತ್ತಿದ್ದ ಪ್ರವೀಣ (37), ಅಮಿದ್ (31), ಸುರೇಶ (36) ಮತ್ತು ಎಚ್.ಬಿ. ನಟರಾಜ ಎಂಬುರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 8425 ರು. ನಗದನ್ನು ವಶಪಡಿಸಿಕೊಂಡಿದ್ದು, ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ಮಾರಾಟ: ಬಂಧನ
ಹಾಸನ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಂದ 5,012 ರು.ಬೆಲೆಯ ನಗದವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ವಾಸಿ ಗವಿಗೌಡ (27) ತಮ್ಮ ಹೋಟೆಲ್ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಗವಿಗೌಡ ನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಟ್ಟಕ್ಕಿಟ್ಟಿದ್ದ ಸುಮಾರು 5,012 ರು. ಬೆಲೆಯ 180 ಎಂಎಲ್ನ ಓರಿಜಿನಲ್ ಚಾಯ್ಸ್ ಡೆಲಕ್ಸ್ ವಿಸ್ಕಿಯ 48 ಬಾಟಲಿಗಳು, ರಮ್ 13 ಬಾಟಲಿಗಳು, ಕಿಂಗಗ್ಫಿಶರ್ 24 ಬೀಯರ್ಬಾಟಲಿಗಳು ಮತ್ತು ಡಂಸಿಡೆವಲ್ ನಂ. 01 ಸೆಲಬ್ರೇಷನ್ ಡಿಲೆಕ್ ಹಾಗೂ ಇತ್ಯಾದಿ ಮಾದರಿ ಬಾಟಲಿಗಳನ್ನು ವಶಪಡಿಸಿಕೊಂಡು, ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮ ವಾಸಿ ರಾಮೇಗೌಡ ರವರ ಪುತ್ರಿ ಸುಗುಣಾ(23) ಮನೆಯಿಂದ ನಾಗಮಂಗಲ ತಾಲ್ಲೂಕು, ಬೆಳ್ಳೂರು ಕ್ರಾಸ್ನಲ್ಲಿರುವ ಐಶು ಬ್ಯೂಟಿ ಪಾರ್ಲರ್ಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಚಹರೆ: 5.7 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಸಿರುತ್ತಾರೆ. ತಾಯಿ ಜಯಲಕ್ಷ್ಮಿ ಅವರು ಹಿರೀಸಾವೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

