ಹಾಸನ

ಮಾರುಕಟ್ಟೆಗಾಗಿ ರೈತರ ಪ್ರತಿಭಟನೆ

Published On :

ಚನ್ನರಾಯಪಟ್ಟಣ: ಪ್ರತೀ ವಾರದಂತೆ ಪಟ್ಟಣದ ಸಂತೆ ಮೈದಾನದಲ್ಲಿ ಶನಿವಾರ ಸಂತೆ ನಡೆಯುತ್ತಿದ್ದಾಗ  ಬೆಳ್ಳಂಬೆಳಗ್ಗೆ ರೈತರು ಬೆಳೆದ ತರಕಾರಿಗಳನ್ನು ತಂದು ರಸ್ತೆಯ ಬದಿಯಲ್ಲೇ ವ್ಯಾಪಾರ ನಡೆಸುತ್ತಿದ್ದರು. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ವಾಹನ ಸವಾರರು ತೀವ್ರ ಆಕ್ಷೇಪ ವಕ್ತಪಡಿಸಿದರು. ಆಗ ವಾಹನ ಸವಾರರಿಗೂ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ವಾಹನ ಸವಾರರು ರಸ್ತೆಯ ಮಧ್ಯದಲ್ಲಿ ಟೊಮೆಟೊ ಚೀಲಗಳನ್ನು ಇಟ್ಟಿರುವುದನ್ನು ಕಂಡು ತೆರವು ಗೊಳಿಸುವಂತೆ ಹೇಳಿದರು. ಆದರೆ ರೈತರು ತೆರವುಗೊಳಿಸುವುದಿಲ್ಲ ಎಂದರು. ಇದರಿಂದ ಕುಪಿತನಾದ ವಾಹನ ಸವಾರನೊಬ್ಬ ರೈತರ ಮೇಲೆ ಹಲ್ಲೆ ನಡೆಸಿದ.
ಪರಿಸ್ಥಿತಿ ಹತೋಟಿಗೆ: ನಂತರ ರೈತರು ತಾವು ತಂದಿದ್ದ ಟೊಮೆಟೊ ರಸ್ತೆಗೆ ಸುರಿದು, ತರಕಾರಿಗಳನ್ನು ತಂದು ಮಾರಲು ಪ್ರತ್ಯೇಕ ಮಾರುಕಟ್ಟೆ ಮಾಡಿಕೊಡುವಂತೆ ಒತ್ತಾಯಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಭೆ: ಶಾಸಕರು ಕೂಡಲೇ ತಾಲೂಕು ಕಚೇರಿಯಲ್ಲಿ ರೈತರು ಮತ್ತು ಎಪಿಎಂಸಿ ಅಧಿಕಾರಿಗಳ ಸಭೆ ನಡೆಸಿದರು.
  ಸಭೆಯಲ್ಲಿ ರೈತರು ಪ್ರತಿನಿತ್ಯ ಸುಮಾರು ಒಂದು ಸಾವಿರದಿಂದ ಮೂರು ಸಾವಿರ ಕೆಜಿವರೆಗೆ ವರೆಗೆ ಟೊಮೊಟೊ ಇತ್ಯಾದಿ ತರಕಾರಿಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ರೈತರು ತರುತ್ತಾರೆ. ಆದರೆ ನಮಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಸತ್ತೀಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಮಾರುಕಟ್ಟೆಯಿಂದ ಬೇರೆ ಬೇರೆ ಊರು ಹಾಗೂ ರಾಜ್ಯಗಳಿಗೆ ಟೊಮೆಟೊಗಳನ್ನು ಸಾಗಾಣಿಕೆ ಮಾಡುತ್ತಿದ್ದು ಪಟ್ಟಣದಲ್ಲಿ ಸೂಕ್ತ ಸ್ಥಳ ಇಲ್ಲ ಎಂದು ಕುಮಾರ್ ತಿಳಿಸಿದರು.
ಪ್ರತಿಭಟನೆ ಹಿಂದಕ್ಕೆ: ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಎಪಿಎಂಸಿಯಲ್ಲಿ ಸಭೆ ಕರೆದು ಸಭೆಯಲ್ಲಿ ಕೂಡಲೆ ಸ್ಥಳಾವಕಾಶ ಮಾಡಿ ಕೊಡುವುದಾಗಿ ಚರ್ಚಿಸಲಾಗುವುದು. ಪ್ರತ್ಯೇಕ ಟೊಮೆಟೊ ಮಾರುಕಟ್ಟೆ ಮಾಡಲು ಆರು ತಿಂಗಳ ಕಾಲ ಕಾಲಾವಕಾಶ ಕೊಡಬೇಕು.
    ಎಪಿಎಂಸಿಯಲ್ಲಿ ರು. 50 ಲಕ್ಷ ಮೊತ್ತದ ಟೆಂಡರ್ ಕರೆದಿದ್ದು, ಇದರ ಪೈಕಿ 20 ಲಕ್ಷ ರು.ಗಳಲ್ಲಿ ಮಾರುಕಟ್ಟೆ ಪ್ರಾಂಗಣ ನಿರ್ಮಿಸಲಾಗುವುದು ಎಂದರು. ನಂತರ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜ್, ಪೊಲೀಸ್ ಇನ್ಸ್ಪೆಕ್ಟರ್    ಶೈಲೇಂದ್ರಕುಮಾರ್, ಎಸ್ ಐ ರಾಜು, ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಶಂಕರ್ ಕುಂಠೆ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.