ತೋಟಗಾರಿಕೆ ಬೆಳೆಯಿಂದ ಬಲವರ್ಧನೆ
ಹಾಸನ: ಇರುವಷ್ಟು ಭೂಮಿಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಶಿಕ್ಷಣ, ಆರೋಗ್ಯ, ಆರ್ಥಿಕ ಬಲ ಪಡೆಯುವ ಮೂಲಕ ಜೀವನದಲ್ಲಿ ಬದಲಾವಣೆ ಹೊಂದಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ತೋಟಗಾರಿಕೆ ಇಲಾಖೆ, ಜಿಪಂ, ಹೇಮಾವತಿ ತೋಟಗಾರಿಕೆ ಸಂಘ ಹಾಗೂ ಆತ್ಮ ಯೋಜನೆಯ ಸಂಯುಕ್ತಾಶ್ರಯದಲ್ಲಿ ನಗರದ ಸಿಲ್ವರ್ ಜ್ಯುಬ್ಲಿ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ತೋಟಗಾರಿಕೆ ನೀತಿಯಿಂದ ಸಾಕಷ್ಟು ಮಾರ್ಪಾಡುಗಳು ಆಗಿವೆ. ಪ್ರತಿಯೊಂದು ಗಿಡ ಮೂಲಿಕೆಗಳಲ್ಲಿ ಔಷಧದ ಅಂಶಗಳು ಇದ್ದೇ ಇರುತ್ತವೆ. ಅದನ್ನು ಎಲ್ಲರೂ ಅರಿಯಬೇಕು ಎಂದರು.
ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಜೀವಿನಿ ವನದಂತಹ ಯೋಜನೆ ಮಾಡುವ ಮೂಲಕ ಹಣವಿಲ್ಲದೆ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವಂತಹ ವ್ಯವಸ್ಥೆ ಆದಾಗಿದ್ದು, ಆ ರೀತಿಯ ವ್ಯವಸ್ಥೆ ಎಲ್ಲಾ ಕಡೆ ಆಗಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಪರಿಸರವನ್ನು ಕಾಪಾಡಿಕೊಳ್ಳಬೇಕು. ಜತೆಗೆ ಆಹಾರ ಪದ್ಧತಿಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಮಾರುಕಟ್ಟೆಯನ್ನು ಹಿಡಿದರೆ ತೋಟಗಾರಿಕೆಯು ಬಹಳ ಅನುಕೂಲವಾಗಲಿದೆ ಎಂದರು.
ಗಾಜಿನ ಮನೆ: ಹೇಮಾವತಿ ತೋಟಗಾರಿಕೆ ಸಂಘದವರು ಇಲ್ಲಿ ಗಾಜಿನ ಮನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ. ಗಾಜಿನ ಮನೆ ನಿರ್ಮಿಸಲು ಅಭ್ಯಂತರವಿಲ್ಲ. ಆದರೆ ಅದಕ್ಕೆ ಯಾರೂ ಕಲ್ಲು ಹೊಡೆಯದಿದ್ದರೆ ಸಾಕು. ಗಾಜಿನ ಮನೆಗೆ ಕಲ್ಲು ಹೊಡೆದರೆ ಆ ಕಲ್ಲು ತೂರಿದವರಿಗೆ ಬೀಳುವ ರೀತಿಯಲ್ಲಿ ಗಾಜಿನ ಮನೆ ನಿರ್ಮಿಸೋಣ ಎಂದು ಹಾಸ್ಯ ಮಾಡಿದರು.
ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಎಸ್ಪಿ ರವಿ ಚನ್ನಣ್ಣನವರ್, ಜಿಪಂ ಸಿಇಒ ಉಪೇಂದ್ರ ಪ್ರತಾಪ್ ಸಿಂಗ್, ಎಸಿ ಶರತ್, ಬೆಂಗಳೂರಿನ ಅಪರ ತೋಟಗಾರಿಕೆ ಇಲಾಕೆ ಅಧಿಕಾರಿ ಅಶ್ವಥ್ಕುಮಾರ್, ಹೇಮಾವತಿ ತೋಟಗಾರಿಕೆ ಸಂಘದ ಸುಜಾತ ನಾರಾಯಣ್, ನಿರ್ದೇಶಕ ಹೆಮ್ಮಿಗೆ ಮೋಹನ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

