ಹಾಸನ

ನಾಳೆ ರಾಜ್ಯಮಟ್ಟದ ಕಾರ್ಯಾಗಾರ

Published On :

ಹಾಸನ: ಬೆಂಗಳೂರಿನ ಸಹಕಾರ ಮಹಾಮಂಡಳ ನಿಯಮಿತ, ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಸಹಕಾರ ಇಲಾಖೆ ಆಶ್ರಯದಲ್ಲಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷ, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಜ.28ರಂದು ಬೆಳಗ್ಗೆ 10ಕ್ಕೆ ನಗರದ ಎಚ್.ಡಿ. ದೇವೇಗೌಡ ರೈತ ಸಭಾ ಭವನದಲ್ಲಿ ಒಂದು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ನಡೆಯಲಿದೆ. ಶಾಸಕ ಎಚ್.ಡಿ. ರೇವಣ್ಣ ಕಾರ್ಯಾಗಾರದ ಉದ್ಘಾಟಿಸುವರು. ಮಾಜಿ ಸಹಕಾರ ಸಚಿವ ಹಾಗೂ ಶಾಸಕ  ಜಿ.ಟಿ.ದೇವೇಗೌಡ, ಶಾಸಕರಾದ ಪಟೇಲ್ ಶಿವರಾಂ, ಎಚ್.ಎಸ್.ಪ್ರಕಾಶ್, ಸಿ.ಎನ್.ಬಾಲಕೃಷ್ಣ, ಬ್ಯಾಂಕ್ನ ನಿರ್ದೇಶಕ ಆರ್.ಟಿ.ದ್ಯಾವೇಗೌಡ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾರ್ಲೆ ಇಂದ್ರೇಶ್ ಅಧ್ಯಕ್ಷತೆ ವಹಿಸುವರು.
ಇಂದಿನಿಂದ ಪ್ರಾಣಾಯಾಮ ಶಿಬಿರ
ಹಾಸನ: ನಗರದ ರಂಗೋಲಿ ಹಳ್ಳದ ಬ್ರಹ್ಮಕುಮಾರಿ ಆಶ್ರಮ ರಸ್ತೆಯಲ್ಲಿರುವ ವ್ಯಕ್ತಿತ್ವ ವಿಕಾಸ ಕೇಂದ್ರದಲ್ಲಿ ಜ.27 ರಿಂದ 13 ದಿನಗಳ ಕಾಲ ಧ್ಯಾನ, ಯೋಗ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಾಸ ತರಬೇತಿ ಶಿಬಿರ ಆರಂಭವಾಗಲಿದೆ ಎಂದು ವ್ಯಕ್ತಿತ್ವ ವಿಕಾಸ ಕೇಂದ್ರದ ಮುಖ್ಯಸ್ಥ ಸುರೇಶ್ ಗುರೂಜಿ ತಿಳಿಸಿದ್ದಾರೆ. ಸಂಜೆ 6-30ಕ್ಕೆ   ಶಿಬಿರದ ಪರಿಚಯ ಕಾರ್ಯಕ್ರಮವಿದ್ದು, ಯೋಗ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಾಸ ತರಬೇತಿಯು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದು, ಗುಣಮಟ್ಟದ ತರಬೇತಿಗಾಗಿ ಶಿಬಿರಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.9448156105ಗೆ ಸಂಪರ್ಕಿಸಲು ಕೋರಲಾಗಿದೆ.
ಶೌಚಾಲಯ ರಹಿತ  ಕುಟುಂಬ ಸಮೀಕ್ಷೆ
ಹಾಸನ: ಜಿಲ್ಲಾಧಿಕಾರಿ ಆದೇಶದನ್ವಯ ಹಾಸನ ನಗರ ಪ್ರದೇಶಗಳಲ್ಲಿರುವ ಗುಡಿಸಲು ವಾಸಿಗಳು, ವಸತಿ ರಹಿತರು, ನಿವೇಶನ ರಹಿತರು ಹಾಗೂ ಶೌಚಾಲಯ ರಹಿತ ಕುಟುಂಬಗಳ ಸಮಗ್ರ ಸಮೀಕ್ಷೆ ಕಾರ್ಯವನ್ನು ನಡೆಸಲಾಗುತ್ತಿದೆ. ಈ ಸಮೀಕ್ಷಾ ಕಾರ್ಯ ಮಾಹಿತಿಯನ್ನು ಕಲೆಹಾಕುವ ದೃಷ್ಟಿಯಿಂದ ಮಾಡಲಾಗುತ್ತಿದ್ದು, ಈ ಸಮೀಕ್ಷಾ ಕಾರ್ಯಕ್ಕೆ ಆಗಮಿಸುವ ನಗರಸಭಾ ಸಿಬ್ಬಂದಿಗೆ ಸಹಕರಿಸುವಂತೆ ಹಾಸನ ನಗರಸಭಾ ಪೌರಾಯುಕ್ತರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.