ವಿಶ್ವದ ಶ್ರೇಷ್ಠ ಕಾದಂಬರಿ ಕನ್ನಡಕ್ಕೆ ಅನುವಾದಗೊಳ್ಳಲಿ: ಡಾ.ಮಳಲಿ ವಸಂತಕುಮಾರ್
ಹಾಸನ: ವಿಶ್ವದ ಶ್ರೇಷ್ಠ ಕಾದಂಬರಿಯನ್ನು ಕನ್ನಡ ಭಾಷೆಗೆ ಅನುವಾದ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹಿರಿಯ ಸಾಹಿತಿ ಡಾ.ಮಳಲಿ ವಸಂತ ಕುಮಾರ್ ತಿಳಿಸಿದ್ದಾರೆ. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನ್ಯಾಷನಲ್ ಬುಕ್ ಟ್ರಸ್ಟ್, ಫಿರ್ದೊಸ್ ಮಹಿಳಾ ಸಮಾಜದ ವತಿಯಿಂದ ಕೊಟ್ರೇಶ್ ಉಪ್ಪಾರ್ ಅವರ 'ಅವಳ ಮುಖಗಳು' ಕೃತಿ ಬಿಡುಗಡೆ ಹಾಗೂ ಮಹಿಳಾ ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವದ ಎಲ್ಲಾ ಭಾಷೆಯ ಕಾದಂಬರಿಗಳನ್ನು ಕನ್ನಡ ಭಾಷೆಗೆ ಅನುವಾದವಾಗುವುದರ ಜತೆಗೆ ನಮ್ಮ ಕನ್ನಡ ಭಾಷೆಯ ಕಾದಂಬರಿಗಳು ಬೇರೆ ಭಾಷೆಗೆ ಅನುವಾದವಾಗಬೇಕಾದ ಅವಶ್ಯಕತೆ ಇದೆ. ಒಂದು ಒಳ್ಳೆಯ ಸಾಹಿತ್ಯವನ್ನು ವಿಮರ್ಶೆ ಮಾಡಬೇಕಾದ ಅವಶ್ಯಕತೆ ಇದ್ದು, ಯುವಕರು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು. ವಚನ ಸಾಹಿತ್ಯ ಇಂದು ಅವನತಿಯ ಹಾದಿ ಹಿಡಿಯುತ್ತಿದ್ದು, ವಚನ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. ಸಾಹಿತಿ ಜಿ.ಎಸ್.ಭಟ್ ಮಾತನಾಡಿ, ವಿಮರ್ಶೆ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಕಲೆಗೂ ಇದು ಸಂಬಂಧಪಟ್ಟಿದೆ. ಕನ್ನಡ ಭಾಷೆಯಲ್ಲಿ ಸಾಕಷ್ಟು ಉತ್ತಮ ಪುಸ್ತಕಗಳು ಇದ್ದು, ಪುಸ್ತಕಗಳನ್ನು ಓದುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ. ಮಾಧ್ಯಮ ಕ್ಷೇತ್ರದಿಂದ ಇಂದು ಪುಸ್ತಕ ಓದುವರ ಸಂಖ್ಯೆ ಹಾಗೂ ಸಾಹಿತ್ಯಕ್ಕೆ ಕ್ಷೇತ್ರಕ್ಕೆ ಪೆಟ್ಟು ಬಿದ್ದಂತ್ತಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎನ್.ರೂಪ್ರಾಜ್ ಚಂದನ್ ಮಾತನಾಡಿದರು, ಗೋರೂರು ಅನಂತರಾಜು, ಕೊಟ್ರೇಶ್ ಉಪ್ಪಾರ್, ಅಕ್ತಾರ್ ಜಾನ್, ಎಚ್.ಎಂ.ನೂರಿ, ಡಾ.ಕೆ.ಜಿ.ಕವಿತಾ, ಡಾ. ನಿರ್ವಾಣೀಗೌಡ, ಡಾ.ಶಶಿಕುಮಾರ್, ಎಚ್.ಎನ್. ಸಾವಿತ್ರಿ, ಎಂ.ಎ. ಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

