ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಜಗದೀಶ್
ಬೇಲೂರು: ನಮ್ಮ ಸಂವಿಧಾನದಲ್ಲಿ ಕಾನೂನಿನ ಆಡಳಿತ ವ್ಯವಸ್ಥೆ ಅಳವಡಿಕೊಂಡಿದ್ದು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷ ತಹಸೀಲ್ದಾರ್. ಬಿ.ಎ. ಜಗದೀಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಪ್ರಜೆ ಯಾವುದೇ ಕಾನೂನನ್ನು ಉಲ್ಲಂಘಿಸಿದರೆ ಅದು ಸಂವಿಧಾನ ವಿರೋಧ ಮಾಡಿದಂತೆ. ನಾವೆಲ್ಲರೂ ನಮ್ಮವರೇ ರಚನೆ ಮಾಡಿದ ಹಾಗೂ ಒಪ್ಪಿಕೊಂಡ ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ. ಅದ್ದರಿಂದ ನಾವೆಲ್ಲರೂ ಕಾನೂನನ್ನು ಗೌರವಿಸಿ ಸಂವಿಧಾನತ್ಮಾಕವಾಗಿ ನಡೆದುಕೊಳ್ಳಬೇಕು ಎಂದರು.
ಶಾಸಕ ವೈ.ಎನ್.ರುದ್ರೇಶಗೌಡ, ಜಿಪಂ ಸದಸ್ಯರಾದ ಜಿ.ಟಿ.ಇಂದಿರಾಧರ್ಮಪ್ಪ, ಹೇಮಾವತಿ ಮಂಜುನಾಥ್, ಜಯಶೀಲಾ ಜಯಶಂಕರ್, ಬಿ.ಡಿ.ಚಂದ್ರೇಗೌಡ, ಅಮಿತ್ ಶೇಟ್ಟಿ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಮ್ಮ ಮಹದೇವಯ್ಯ, ಸದಸ್ಯರು ಸಮಿತ್ರರುದ್ರಯ್ಯ, ಶೋಭಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಬಿ.ಸುಂದ್ರೆಶ್, ರಂಗಸ್ವಾಮಿ, ಇಓ ಬಸವರಾಜು, ಕೆ.ಐಯಣ್ಣನವರ್, ಪೊಲೀಸ್ ವೃತ್ತ ನೀರಿಕ್ಷಕ ಕೆ.ಎಲ್.ಗಣೇಶ್, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

