ಚನ್ನರಾಯಪಟ್ಟಣ: ಕಾಡಾನೆ, ಚಿರತೆ ದಾಳಿ ಜತೆ ಈಗ ಕಾಡು ಹಂದಿ ಕಾಟ
ಚನ್ನರಾಯಪಟ್ಟಣ: ಜಿಲ್ಲೆಯಲ್ಲಿ ಕಾಡಾನೆ ದಾಳಿ, ಚಿರತೆ ದಾಳಿ ಬೆನ್ನಲ್ಲೇ ಇದೀಗ ಕಾಡು ಹಂದಿಯ ಕಾಟ ಕೂಡ ಪಟ್ಟಣದಲ್ಲಿ ಪ್ರಾರಂಭವಾಗಿದೆ.
ಪಟ್ಟಣದ ಕಾವೇರಿ ನೀರಾವರಿ ನಿಗಮದ ಹೇಮಾವತಿ ವಸತಿ ಸಮಚ್ಛಯದ ಮನೆಯೊಳಗೆ ನುಗ್ಗಿದ ಕಾಡು ಹಂದಿಯು ಪಾತ್ರೆ ತೊಳೆಯುತ್ತಿದ್ದ ಗೃಹಿಣಿಯ ಮೇಲೆ ದಾಳಿ ನಡೆಸಿ ಆಕೆಯ ಭುಜವನ್ನು ಕಚ್ಚಿದೆ. ಇದನ್ನು ತಡೆಯಲು ಹೋದ ಆಕೆಯ ಸಹೋದರನಿಗೆ ಮೈಯಲ್ಲೆಲ್ಲಾ ಕಚ್ಚಿ ಗಾಯಗೊಳಿಸಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕಾವೇರಿ ನೀರಾವರಿ ನಿಗಮದ ವಸತಿ ಸಮಚ್ಛಯದಲ್ಲಿ ವಾಸವಾಗಿರುವ ದ್ವಿತೀಯ ದರ್ಜೆ ಸಹಾಯಕ ನಂಜಯ್ಯ ಅವರ ಮನೆಗೆ ಏಕಾಏಕಿ ನುಗ್ಗಿದ ಕಾಡು ಹಂದಿಯೊಂದು ನಂಜಯ್ಯ ಅವರ ಪತ್ನಿ ಪ್ರಭಾ ಅವರ ಮೇಲೆ ದಾಳಿ ಮಾಡಿ ಭುಜ ಹಾಗೂ ಕೈಯನ್ನು ಕಚ್ಚಿ ಭುಜಕ್ಕೆ ಕಚ್ಚಿದೆ. ಹೀಗಾಗಿ ಭುಜದಿಂದ ಮಾಂಸ ಕಿತ್ತು ಬಂದಿದೆ. ಇದನ್ನು ಕಂಡ ಆಕೆಯ ಸಹೋದರ ರವಿಚಂದ್ರ ಅದನ್ನು ತಡೆಯಲು ಬಂದಾಗ ಆತನ ತೊಡೆಗೆ ಕೋರೆಯಿಂದ ಚುಚ್ಚಿ ಗಾಯಗೊಳಿಸಿದೆ. ಅಲ್ಲದೇ ಆತನ ಮುಖ, ಕೈ ಹಾಗೂ ಭುಜಕ್ಕೆ ಬಾಯಿ ಹಾಕಿ ಮಾಂಸವನ್ನು ಕಿತ್ತು ಹಾಕಿದೆ. ಅಕ್ಕಪಕ್ಕದವರು ಬಂದು ಹಂದಿಯನ್ನು ಓಡಿಸಿದ್ದಾರೆ. ಪ್ರಭಾ ಅವರಿಗೆ ಪಟ್ಟಣದ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗಿದ್ದು, ರವಿಚಂದ್ರ ಅವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

