ಬೇಡಿಕೆಗಳ ಈಡೇರಿಕೆಗೆ ಅಂಗವಿಕಲರ ಆಗ್ರಹ
ಕ.ಪ್ರ.ವಾರ್ತೆ ಹಾಸನ ಜ. 27
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ (ಎಂಆರ್ಡಬ್ಲ್ಯೂ) ಮತ್ತು ಗ್ರಾಮೀಣ ಪುನರ್ವಸತಿ (ವಿಆರ್ಡಬ್ಲ್ಯೂ) ಕಾರ್ಯಕರ್ತರ ರಾಜ್ಯ ಒಕ್ಕೂಟದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಅವಕಾಶ ವಂಚಿತ ಅಂಗವಿಕಲರ ಪುನರ್ವಸತಿಗಾಗಿ ಅಂಗವಿಕಲರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ರಾಜ್ಯದ 176 ತಾಲೂಕಿಗೆ ಅರ್ಹ ಪದವೀಧರ ಅಂಗವಿಕಲರನ್ನು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನಾಗಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯಿಂದ ನೇಮಕವಾಗಿರುವಂತಹ ಕಾರ್ಯಕರ್ತರಿಗೆ ಪದವಿ ಉತ್ತೀರ್ಣ ಆದವರು ಮಾಸಿಕ ರು. 4 ಸಾವಿರ ಗೌರವ ಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಯ್ಕೆ ಸಮಿತಿಯಿಂದ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಆರ್ಹ ಅಂಗವಿಕಲರನ್ನು 5628 ಗ್ರಾಪಂ ಗಳಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ರು. 1500ಗಳ ಗೌರವಧನದ ಆಧಾರದ ಮೇಲೆ ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಅಂಗವಿಕಲರ ಪುನರ್ವಸತಿಗಾಗಿ ಆಯ್ಕೆ ಮಾಡಿದ್ದು, ಇವರು ಕಳೆದ 6 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ನಿರ್ದೇಶನಾಲಯವು ಇದುವರೆಗೂ ಯಾವುದೇ ರೀತಿ ಆಗಿರುವಂತಹ ತರಬೇತಿ ಮಾರ್ಗದರ್ಶನದ ಮಾಹಿತಿಯನ್ನು ನೀಡಿಲ್ಲ ಎಂದು ಆರೋಪಿಸಿದರು.
ದೂರು: ಕನಿಷ್ಠ ವೇತನ, ಕಾಯಂ ಗೊಳಿಸುವುದು, ವಿಮಾ ಸೌಲಭ್ಯದ ಮಾಹಿತಿಯನ್ನಾಗಿ ನೀಡಿರುವುದಿಲ್ಲ, ರಾಜ್ಯ ಸರ್ಕಾರವು ಅಂಗವಿಕಲರ ಪುನರ್ವಸತಿಗಾಗಿ ಕೈಗೊಂಡ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಾರ್ಯಕ್ರಮವನ್ನು ತಿರುಚುವ ವ್ಯವಸ್ಥಿತ ಪಿತೂರಿಯ ಧೋರಣೆಯು ಖಂಡನೀಯವಾಗಿದೆ ಎಂದು ದೂರಿದರು.
ಅಂಗವಿಕಲರ ಸೇವೆ: ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ, ಮನೆ ಮನೆಗೆ ಹೋಗಿ ಅಂಗವಿಲರ ಸಮೀಕ್ಷೆ ನಡೆಸುವುದು. ಗುರುತಿಸಲ್ಪಟ್ಟ ಅಂಗವಿಕರ ವೈಯಕ್ತಿಕ ವಿವರಗಳನ್ನು ನಿಗಧಿತ ಯೋಜನೆಯಲ್ಲಿ ಪ್ರತ್ಯೇಕ ಕಡತಗಳನ್ನು ನಿರ್ವಹಿಸುವುದು. ಮೊಟ್ಟಮೊದಲಿಗೆ ಗುರುತಿನ ಚೀಟಿ ಇಲ್ಲದಂತಹ ಅಂಗವಿಕಲರಪಟ್ಟಿ ಮಾಡಿ ಅವರಿಗೆ ವೈದ್ಯರಿಂದ ಗುರಿತಿನ ಚೀಟಿ ನೀಡುವಂತೆ ವ್ಯವಸ್ಥೆ ಮಾಡುವುದು, ಅಂಗವಿಕಲರ ಬಗ್ಗೆ ಅರಿವು ಮೂಡಿಸುವಂತಹ ಶಿಬಿರಗಳನ್ನು ಸ್ಥಳೀಯರ ಸಹಾಯದಿಂದ ನಿರ್ವಹಿಸುವುದು, ಮನೆ ಮನೆಗೆ ಭೇಟಿ ನೀಡಿ ಅಂಗವಿಕಲತೆಯ ಬಗ್ಗೆ ಮೊದಲು ಕುಟುಂಬದ ಸದಸ್ಯರಲ್ಲಿ ಅದರಲ್ಲೂ ತಾಯಂದಿರಲ್ಲಿ ಅರಿವು ಮೂಡಿಸುವುದು.
ಅಗತ್ಯಕ್ಕೆ ತಕ್ಕಂತೆ ಅಂಗವಿಕಲರಿಗೆ ಸಾಧನ- ಸಲಕರಣೆಗಳನ್ನು ಪೂರೈಸುವುದು, ಮಾಶಾಸನ ರಿಯಾಯಿತಿ ದರದ ಬಸ್ ಪಾಸ್, ಅಂಧತ್ವ ಉಚಿತ ಪಾಸ್, ರೇಲ್ವೆ ಪಾಸ್, ಆಧಾರ ಸಾಲ, ಸ್ವಯಂ ಉದ್ಯೋಗ, ಕಂಪ್ಯೂಟರ್ ತರಬೇತಿ, ಟೈಲರಿಂಗ್ ತರಬೇತಿ ವಿದ್ಯಾರ್ಥಿ ವೇತನ, ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಶಾಲೆಗೆ ಸೇರಿಸುವುದು, ಬುದ್ಧಿಮಾಂದ್ಯರಿಗೆ ವಿಮಾ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆಯಲ್ಲಿ ಸಹಾಯ ಕೊಡಿಸುವುದು, ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಕೊಡಿಸುವುದು, ಅಂಗವಿಕಲರ ಸ್ವಸಹಾಯ ಗುಂಪುಗಳನ್ನು ರಚಿಸಲು ಕ್ರಮ ಕೈಗೊಳ್ಳುವುದು ಮತ್ತು ಸಾಲ ಕೊಡಿಸುವುದು ಮತ್ತು ಅಂಗವಿಕಲರಿಗೆ ಅರಿವು ಮೂಡಿಸಿ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಗುಂಪು ರಚಿಸಲು ಸಹಕರಿಸುವುದು. ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಇಟ್ಟು ಅವುಗಳ ಪ್ರಯೋಜನಾ ಪಡೆಯುವುದ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಾಗೂ ಸರ್ಕಾರದ ನಾನಾ ಜನಪರ ಕಾರ್ಯಕ್ರಮಗಳನ್ನು ಮತ್ತು ಸವಲತ್ತುಗಳನ್ನು ಅಂಗವಿಕಲರ ಮನೆ ಬಾಗಿಲಿಗೆ ತಲುಪಿಸಿ ಅಂಗವಿಕಲರಿಗೆ ಸರ್ವತೋಮುಖ ಅಭಿವೃದ್ಧಿಗೆ ಹಗಲು- ಇರುಳು ಶ್ರಮವಹಿಸಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರ ಪುನರ್ವಸತಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಆರ್ ಡಬ್ಲ್ಯೂ ಮತ್ತು ವಿ ಆರ್ಡಬ್ಲ್ಯೂ ಅವರಿಗೆ ಕನಿಷ್ಠ ವೇತನ ಸೇವಾ ಭದ್ರತೆ, ಆರೋಗ್ಯ ವಿಮೆ ಭವಿಷ್ಯ ನಿಧಿಯನ್ನು ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಘಟನಾ ಸಂಚಾಲಕ ಕೆ.ಬಿ. ಹರೀಶ್, ಜಿಲ್ಲಾಧ್ಯಕ್ಷ ಪ್ರಸನ್ನ, ಚಂದ್ರಶೇಖರ್, ಸುಬ್ರಮಣ್ಯ, ಗೀತಾ, ಜಾಕಿರ್, ಬಿ.ವಿ. ಹರೀಶ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

