ಹಾಸನ

ಪೊಲೀಸರಿಂದ ರಸ್ತೆ ಸುರಕ್ಷತಾ ಸಪ್ತಾಹ

Published On :

ರಾಮನಾಥಪುರ: ರಾಮನಾಥಪುರದಲ್ಲಿ ಇತ್ತೀಚೆಗೆ ಕೊಣನೂರು ಆರಕ್ಷಕ ಠಾಣೆಯ ಪೊಲೀಸರಿಂದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  
ಈ ಸಂದರ್ಭದಲ್ಲಿ  ಪಿ.ಎಸ್.ಐ. ರಾಜು ಮಾತನಾಡಿ, ಕಳೆದ ವರ್ಷ ಜಿಲ್ಲಾದ್ಯಂತ 438 ಅಪಘಾತಗಳು ಸಂಭವಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾರ್ಗದರ್ಶನದಂತೆ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಈ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಪೊಲೀಸ್ ಇಲಾಖೆ ವತಿಯಿಂದ ನಡೆಸಿ ನಾಗರಿಕರಿಗೆ ಸೂಕ್ತ ಮಾಹಿತಿ ಮತ್ತು ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಅಪಘಾತ ತಡೆಗಟ್ಟಲು ಸಾಧ್ಯ: ವಾಹನಗಳ ಚಾಲನೆಯಲ್ಲಿರುವಾಗ ಮೊಬೈಲ್ ಫೋನ್ ಬಳಕೆ, ಅತಿಯಾದ ವೇಗ, ತಿರುವುಗಳಲ್ಲಿ ಓವರ್ಟೇಕ್ ಮಾಡುವ ಯತ್ನ, ಪಟ್ಟಣ ಶಾಲೆ, ಇತ್ಯಾದಿಗಳ ಕಡೆ ನಿಗದಿತ ವೇಗಕ್ಕಿಂತ ಅತಿ ಹೆಚ್ಚು ವೇಗದ ಚಾಲನೆ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಚಾಲನೆ, ಈ ರೀತಿಯ ಚಾಲನೆಯಲ್ಲಿ ಮುಂಜಾಗ್ರತೆ ವಹಿಸದೆ ನಿರ್ಲಕ್ಷ್ಯ ತೋರಿ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ ಎಂದು ಹೇಳಿದರು. ನಾಗರಿಕರು ಚಾಲನಾ ನಿಯಮಗಳನ್ನು ಅನುಸರಿಸುವುದರಿಂದ ಹೆಚ್ಚಿನ ಅಪಘಾತ ತಡೆಗಟ್ಟಲು ಸಾಧ್ಯ ಎಂದರು.
ಸಹಕಾರ ನೀಡುತ್ತಿಲ್ಲ: ರಾಮನಾಥಪುರದ ಬಸ್ ಸ್ಟ್ಯಾಂಡ್ ಆವರಣ, ಶಾಲಾ ಆವರಣ ಇತ್ಯಾದಿಗಳ ಕಡೆ ಅನಧಿಕೃತ ಅಂಗಡಿಗಳು ತಲೆ ಎತ್ತಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ವಾಹನಗಳ ನಿಲುಗಡೆ ಅವ್ಯವಸ್ಥೆ ಈ ವಿಚಾರವಾಗಿ ಇಲ್ಲಿನ ಗ್ರಾಮ ಪಂಚಾಯ್ತಿ  ಅಧಿಕಾರಿಗಳಲ್ಲಿ ಸಾಕಷ್ಟು ಬಾರಿ ಮಾತನಾಡಿದ್ದರೂ ಕೂಡ ಈ ಅಧಿಕಾರಿಗಳು ಪೊಲೀಸ್ ಇಲಾಖೆಯವರಿಗೆ ಸರಿಯಾದ ಸಹಕಾರ ನೀಡುತ್ತಿಲ್ಲ ಎಂದರು.  ಹಾಗಾಗಿ ಇಲ್ಲಿನ ಸಾರ್ವಜನಿಕರ ದೂರುಗಳಿಗೆ ಪೊಲೀಸ್ ಇಲಾಖೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಮುಂದಾದರೂ ಸ್ಥಳೀಯ ಗ್ರಾಮ ಪಂಚಾಯ್ತಿಯವರು ಈ ವಿಚಾರವಾಗಿ ಸಹಕರಿಸಿದಲ್ಲಿ ಸರಿಯಾದ ಕ್ರಮ ಕೈಗೊಂಡು ಉತ್ತಮ  ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವುದರೊಂದಿಗೆ ರಸ್ತೆ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.  ಎಎಸ್ಐ ಸುಬ್ಬರಾಜೇ ಅರಸ್, ಸಿಬ್ಬಂದಿಗಳಾದ  ಭಾನುಪ್ರಕಾಶ್, ರಾಜಣ್ಣ, ಮನು, ವೆಂಕಟೇಶ್, ಬಸವರಾಜು, ಸುಧಾಕರ್, ಲೋಕೇಶ್, ಸ್ಥಳೀಯರಾದ ಬೂದನೂರು ಅಣ್ಣೇಗೌಡ, ಎ. ಕುಮಾರ್, ಗೂಡ್ಸ್ ಮತ್ತು ಪ್ರಯಾಣಿಕ ಆಟೋ ಚಾಲಕರ ಸಂಘ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.