ಹಾಸನ

'ಅಂತರ್ಜಾತಿ ವಿವಾಹದಿಂದ ಜಾತಿ ಪದ್ಧತಿ ಹೋಗಲ್ಲ'

Published On :

ಹಾಸನ: ಅಂತರ್ಜಾತಿ ವಿವಾಹಗಳಿಂದ, ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಮಾತ್ರವೇ ಜಾತಿ ಪದ್ದತಿ ನಿವಾರಣೆ ಆಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಅಭಿಪ್ರಾಯಪಟ್ಟರು.
ಸಮತಾ ಸೈನಿಕ ದಳ, ದಲಿತ ಸಾಹಿತ್ಯ ಪರಿಷತ್, ಆಡುವಳ್ಳಿ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಹಾಸನದ ಆಡುವಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಮೌಲ್ಯಗಳು ಮತ್ತು ಆಶಯಗಳು ಕುರಿತ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು.
ಕರೆ: ಅಂತರ್ಜಾತಿ ವಿವಾಹಗಳಿಂದ ಜಾತಿ ನಿರ್ಮೂಲನೆ ಆಗುತ್ತದೆ ಎನ್ನುವುದು ಬಾಲಿಶತನದ್ದು. ಶಿಕ್ಷಣ ಪಡೆದುಕೊಂಡು ಕಂದಾಚಾರ, ಮೂಢನಂಬಿಕೆಗಳನ್ನು ತೊಲಗಿಸುವುದರಿಂದ ಮಾತ್ರವೇ ಜಾತಿಯತೆ ಅಸಮಾನತೆ, ಅಸ್ಪೃಶ್ಯತೆ ತೊಲಗಿಸಬಹುದು. ಈ ನಿಟ್ಟಿನಲ್ಲಿ ಶಿಕ್ಷಿತರಾಗಬೇಕೆಂದು ಅವರು ಕರೆ ನೀಡಿದರು.
ವಿಷಾದ: ಪ್ರತಿಯೊಬ್ಬರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹಾಸನದಲ್ಲಿ ಪ್ರಶ್ನಿಸುವ ವ್ಯಕ್ತಿಗಳಿದ್ದಾರೆ ಕಲಿಯುವ ವಿಚಾರವನ್ನು ಪ್ರಶ್ನಿಸದೇ ಹೋದಲ್ಲೇ ಶಿಕ್ಷಣದ ಕೊರತೆಯಿಂದಾಗಿ ಕಂದಾಚಾರ, ಜಾತೀಯತೆ, ಮೂಢನಂಬಿಕೆಯಿಂದ ಮೌಢ್ಯ, ಕಂದಾಚಾರಗಳನ್ನು ಸಂಸ್ಕತಿ ಎನ್ನುತ್ತೇವೆ ಇದೇ ನಮ್ಮ ದುರಂತ ಎಂದು ಅವರು ವಿಷಾದಿಸಿದರು.
ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಮಾತನಾಡಿ, ಬುದ್ಧ ಗುರು ಕೂಡ ದೇವರಲ್ಲ. ಬುದ್ದ ಅಂದು ಹೇಳಿದ್ದನ್ನೇ ವಿಜ್ಞಾನ ಇಂದು ಹೇಳುತ್ತಿದೆ ಎಂದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್ಸುಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತರ ಏಳಿಗೆಯ ಬಗ್ಗೆ ಇರುವ ವಿಶೇಷ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ದಸಾಪ ಜಿಲ್ಲಾಧ್ಯಕ್ಷ ನಾಗರಾಜ್ ಹೆತ್ತೂರು ಆಶಯ ಭಾಷಣ ಮಾಡಿದರು. ದಲಿತ ಮುಖಂಡರಾದ ನಾರಾಯ
ಣದಾಸ್, ನಿಟ್ಟೂರು ಸ್ವಾಮಿ, ಮರಿಜೋಸೆಫ್, ಸೂಫಿ ಇಬ್ರಾಹಿಂ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮತಾ ಸೈನಿಕ ದಳದ ಆರ್‌ಪಿಐ ಸತೀಶ್ ವಹಿಸಿದ್ದರು. ಆಡುವಳ್ಳಿ ಹೇಮಂತ್ ನಿರೂಪಿಸಿದರು.
ಸುನಿಲ್ ಸ್ವಾಗತಿಸಿದರು. ಧನಂಜಯ ವಂದಿಸಿದರು. ನಿಟ್ಟೂರು ಯುವಕರಿಂದ ಭೀಮಗೀತ ಗಾಯನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.