ಹಾಸನ

ಫೆ. 2, ಯಾದವ ಜನಾಂಗದ ಸಮಾವೇಶ

Published On :

ಅರಸೀಕೆರೆ: ರಾಜ್ಯದ ಯಾದವ ಜನಾಂಗದ ಬೃಹತ್ ಸಮಾವೇಶ ಹಾಗೂ ಸನ್ಮಾನ ಸಮಾರಂಭವನ್ನು  ಫೆ. 2ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಏರ್ಪಡಿಸಲಾಗಿದ್ದು,  ಕಾರ್ಯಕ್ರಮದಲ್ಲಿ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಬಂಡಿಗೌಡರ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯಬಾಬು, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಮನವಿ ಮಾಡಿದ್ದಾರೆ.
ಮೂಲಸೌಕರ್ಯಗಳಿಂದ ವಂಚಿತ: ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 45-50 ಲಕ್ಷ ಜನಸಂಖ್ಯೆ ಹೊಂದಿರುವ ಯಾದವ (ಗೊಲ್ಲ) ಸಮಾಜ ಸಂಘಟನೆಯಿಲ್ಲದೆ ಹರಿದು ಹಂಚಿಹೋಗಿರುವುದು. ಭಾರತದಲ್ಲಿ ತನ್ನದೇ ಆದ ಸಂಸ್ಕತಿ ಸಂಸ್ಕಾರ ಪರಂಪರೆ ಮೈಗೂಡಿಸಿಕೊಂಡು ಯಾದವ ಸಮಾಜ ಕರ್ನಾಟಕದಲ್ಲಿ ವಾಸಿಸುತ್ತಿರುವ ವಿಶಿಷ್ಟ ಸಮಾಜ ನಮ್ಮದು. ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯದಲ್ಲಿ ಹಿಂದುಳಿದಿದ್ದು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ ಎಂದರು.
ಉದ್ಘಾಟನೆ: ಜನಾಂಗವು ಅಭಿವೃದ್ಧಿ ಹೊಂದಿ ಉನ್ನತಿ ಸಾಧಿಸಲು ಸಂಘಟನೆ ಅತಿ ಮುಖ್ಯವಾಗಿದ್ದು, ಸಮಾಜದ ಉನ್ನತಿಗೆ ಪರ್ಯಾಯವೆಂದು ಮನಗಂಡು ಈ ಬೃಹತ್ ಸಮಾವೇಶವನ್ನು ಶ್ರೀ ಕೃಷ್ಣ ಯಾದಾವಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಉದ್ಘಾಟನೆ ನೆರವೇರಿಸಲಿದ್ದಾರೆ.
2 ಸಾವಿರಕ್ಕೂ ಹೆಚ್ಚು ಜನ: ಸಮಾವೇಶದಲ್ಲಿ ಮಾಜಿ ಸಚಿವ  ಎ. ಕೃಷ್ಣಪ್ಪನವರಿಗೆ ಗೌರವಪೂರ್ವಕ ಸನ್ಮಾನ ಏರ್ಪಡಿಸಲಾಗಿದ್ದು, ಈ ಸಮಾವೇಶಕ್ಕೆ ಅರಸೀಕೆರೆ ತಾಲೂಕಿನಿಂದ 2 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಸವಲಿಂಗಪ್ಪ, ಮುಖಂಡರಾದ ಜವನಪ್ಪ, ಯಾದವ ಯುವ ಸೇನೆ ಸಂಚಾಲಕ ಜಯಣ್ಣ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.