ಹಾಸನ

ಚನ್ನರಾಯಪಟ್ಟಣ ತಾಲೂಕಲ್ಲೇ ಹೆಚ್ಚು ಹಾಲು ಸಹಕಾರ ಸಂಘಗಳು'

Published On :

ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕಿನಲ್ಲಿ 276 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು,  ರಾಜ್ಯದಲ್ಲೇ  ಹೆಚ್ಚು ಸಂಘ ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆ ಇದ್ದು, ರೈತರಿಗೆ ಹಾಲಿನಿಂದ ತಿಂಗಳಿಗೆ ರು. 8 ಕೋಟಿ ಸಿಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಅವರು ಇಲ್ಲಿಗೆ ಸಮೀಪದ ರಂಗನಾಥಪುರದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಾಕಾರ  ಸಂಘವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, 123 ಹಾಲು ಉತ್ಪಾದಕರ ಮಹಿಳಾ ಸಹಾಕಾರ ಸಂಘಗಳಿವೆ ಎನ್.ಡಿ.ಪಿ ಸ್ಟೆಪ್ ಯೋಜನೆಯಿಂದ ಮಹಿಳಾ ಸಹಾಕಾರ ಸಂಘಗಳಿಗೆ ಹೆಚ್ಚು ಅನುಕೂಲಗಳಿವೆ ತರಬೇತಿ ಪಡೆದುಕೊಳ್ಳಲು ತಿಳಿಸಿದರು. ಅಕ್ಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ ರು. 6.35 ಕೋಟಿ ಸಾಲ ನೀಡಿದ್ದು, ಇದರಲ್ಲಿ ರು. 2 ಕೋಟಿ ರೈತರ ಸಾಲ ಮನ್ನಾ ಆಗಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ತಾಪಂ ಮಾಜಿ ಸದಸ್ಯ ಹೆಚ್.ಜಿ ರಾಮಣ್ಣ, ಪುಟ್ಟರಾಜು, ಪ್ರಭಾರ ವ್ಯವಸ್ಥಾಪಕ ಹೆಚ್.ಟಿ. ನಂಜೇಗೌಡ, ವಿಸ್ತರಣಾಧಿಕಾರಿ ತಿಮ್ಮೇಗೌಡ, ಗೋಪಾಲಗೌಡ, ಎನ್.ಆರ್. ತಾತೇಗೌಡ, ಸಂಘದ ಅಧ್ಯಕ್ಷೆ ಗೀತಾ ರವಿಕುಮಾರ್, ಕಾರ್ಯದರ್ಶಿ ಪ್ರಭಾಶಂಕರೇಗೌಡ, ಜೆಡಿಎಸ್ ಮುಖಂಡ ಎಂ.ಆರ್. ವಾಸು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.