ತಹಸೀಲ್ದಾರ್ ಮೇಲೆ ಲಾರಿ ಹತ್ತಿಸಿ ಹತ್ಯೆ ಯತ್ನ
ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಲ್ಲಿ ಲಾರಿಯನ್ನು ಶೆಟ್ಟಿಹಳ್ಳಿ ಬೈಪಾಸ್ಬ್ಳಿ ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜ್ ನಿಲ್ಲಿಸಲು ಸೂಚಿಸಿದಾಗ ಲಾರಿ ಚಾಲಕ ನಿಲ್ಲಿಸದೆ ಅಪಘಾತ ಎಸಗಿ, ಅವರನ್ನು ಹತ್ಯೆ ಮಾಡಲು ಮುಂದಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನಂತರ ಲಾರಿಯನ್ನು ಹಿಂಬಾಲಿಸಿ ತಹಸೀಲ್ದಾರ್ ಅವರು ಹಾಸನದ ಕಡೆಗೆ ಹೋಗುತ್ತಿದ್ದ ಲಾರಿಯನ್ನು ಹತ್ತಿಹಳ್ಳಿ ಕ್ರಾಸ್ ಬಳಿ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಆ ಲಾರಿಯನ್ನು ಹಿಂಬಾಲಿಸಿದ್ದಾರೆ. ಮಾರ್ಗದುದ್ದಕ್ಕೂ ಲಾರಿ ಚಾಲಕ ತಹಸೀಲ್ದಾರ್ ಜೀಪ್ ಮೇಲೆ ಲಾರಿ ಹರಿಸಲು ಮುಂದಾಗುತ್ತಿದ್ದ. ನಂತರ ಹೊಳೆನರಸೀಪುರ ಹಾಗೂ ಅರಕಲಗೂಡು ಪೊಲೀಸರ ಬೆಂಬಲ ಪಡೆದ ತಹಸೀಲ್ದಾರ್ ಬೆನ್ನು ಹತ್ತಿದ್ದರು.
ಇದರಿಂದ ಬೆದರಿದ ಲಾರಿ ಚಾಲಕರು ಅರಕಲಗೂಡು ತಾಲೂಕಿನ ಗ್ರಾಮಮೊಂದರಲ್ಲಿ ಲಾರಿಯನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಲಾರಿಯನ್ನು ಅರಕಲಗೂಡು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇಲ್ಲಿನ ಸ್ಥಳೀಯರು ಅಕ್ರಮ ಮರಳು ಲಾರಿ ಹಾಗೂ ಜಲ್ಲಿ ಲಾರಿಗಳನ್ನು ಹಿಡಿಯಲು ತಹಸೀಲ್ದಾರ್ಗೆ ಪೊಲೀಸ್ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

