ಹಾಸನ

ರೆಡ್ಕ್ರಾಸ್ನಿಂದ ಉತ್ತಮ ಸೇವೆ: ಡಿಸಿ ಅನ್ಬುಕುಮಾರ್

Published On :

ಹಾಸನ: ರೆಡ್ಕ್ರಾಸ್ ಸಂಸ್ಥೆಯು ಯಾವುದೇ ಪ್ರಚಾರ ಬಯಸದೆ ಸೇವಾ ಮನೋಭಾವದಿಂದ ಮುಂದಾಳತ್ವದಲ್ಲಿ ಕೆಲಸ ನಿರ್ವಹಿಸುತ್ತಿರುವುದು ಬಹಳ ಮಹತ್ವವಾದುದು. ಇದೇ ರೀತಿ ಕಾರ್ಯಕ್ರಮಗಳನ್ನು ಮುಂದುವರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ  ಮಂಗಳವಾರ ಜಿಲ್ಲಾ ರೆಡ್ಕ್ರಾಸ್ ಶಾಖೆಯ ಕಾರ್ಯ ಚಟುವಟಿಕೆ ಹಾಗೂ ವಾರ್ಷಿಕ ವಂತಿಕೆ ಸಂಗ್ರಹ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ರೆಡ್ಕ್ರಾಸ್ ಶಾಖೆಯ ಕಾರ್ಯ ಚಟುವಟಿಕೆಗಾಗಿ ಕಟ್ಟಡದ ಅಗತ್ಯವಿದ್ದು,  ಈಗಾಗಲೇ ನಿಗದಿಪಡಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಿಸಲು ಶೀಘ್ರದಲ್ಲಿ ಪ್ರಾರಂಭಿಸುವಂತೆ ತಿಳಿಸಿದರಲ್ಲದೆ, ಮೊದಲು ನೆಲ ಅಂತಸ್ತನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಕಟ್ಟಡ ಉದ್ಘಾಟನೆಗೊಂಡು ಶಾಖೆಯ ಕಾರ್ಯಚಟುವಟಿಕೆಗಳನ್ನು ನೂತನ ಕಟ್ಟಡದಲ್ಲಿ ನಡೆಸುವಂತೆ ತಿಳಿಸಿದರು.
ಕಟ್ಟಡ ನಿರ್ಮಾಣಕ್ಕೆ ಅಗತ್ಯ ಹಣವನ್ನು ಕ್ರೋಢೀಕರಿಸಲು ತಾವು ಸಹಕರಿಸುವುದಾಗಿ ತಿಳಿಸಿದರು.
ರೆಡ್ಕ್ರಾಸ್ನಲ್ಲಿ ಸೇವೆ ಮಾಡಲು ಜನ ಆಸಕ್ತರಿದ್ದಾರೆ. ಅವರಿಗೆ ಅವಕಾಶ ದೊರಕಬೇಕು. ಈ ನಿಟ್ಟಿನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸುವಂತೆ ಅವರು ತಿಳಿಸಿದರು.  ಜಿಲ್ಲಾ ರೆಡ್ಕ್ರಾಸ್ ಶಾಖೆಯ ಕಾರ್ಯದರ್ಶಿ ಕೃಷ್ಣಮೂರ್ತಿ, ಶಾಖೆಯ ಕಾರ್ಯಚಟುವಟಿಕೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಎಚ್.ಪಿ. ಮೋಹನ್, ಹೆಚ್.ಎಂ. ಶಿವಣ್ಣ, ಮಲ್ಲಿಕಾರ್ಜುನ್, ಶಬ್ಬೀರ್ ಅಹಮದ್ ಹಾಗೂ ಮತ್ತಿತರ ಸದಸ್ಯರು ಮತ್ತು ನಾನಾ ಇಲಾಖೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.