ಹಾಸನ

ಗಾಂಧೀಜಿ 66ನೇ ಪುಣ್ಯತಿಥಿ ಆಚರಣೆ

Published On :

ಹೊಳೆನರಸೀಪುರ: ನೂರಾರು ವರ್ಷಗಳಿಂದ ದಾಸ್ಯಕ್ಕೊಳಗಾಗಿದ್ದ ಭಾರತೀಯರಿಗೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹಾತ್ಮ ಗಾಂಧೀಜಿಯವರು ನೇತೃತ್ವ ವಹಿಸಿದ್ದರಿಂದಲೇ ಭಾರತಕ್ಕೆ ಪ್ರಜಾಪ್ರಭುತ್ವ ದೊರಕಲು ಕಾರಣವಾಯಿತೆಂದು ಇಲ್ಲಿನ ವಾಸವಿ ಕ್ಲಬ್ನ ಉಪ ರಾಜ್ಯಪಾಲ ಎ.ಆರ್. ರವಿಕುಮಾರ್ ನುಡಿದರು.
ಗಾಂಧಿ ಮಾರ್ಗದರ್ಶನ ಶಾಶ್ವತ: ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಗುರುವಾರ ವಾಸವಿ ಕ್ಲಬ್ ವತಿಯಿಂದ ನಡೆದ ಮಹಾತ್ಮ ಗಾಂಧೀಜಿ ಅವರ 66ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಭಾರತ ದೇಶಕ್ಕೆ ಸ್ವಾತಂತ್ರ್ಯ ತರುವ ನಿಟ್ಟಿನಲ್ಲಿ ಮುಂದಾಳತ್ವ ವಹಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಕಿಕೊಟ್ಟ ಅಹಿಂಸಾ ಧರ್ಮದಿಂದಲೇ ಸ್ವಾತಂತ್ರ್ಯ ಬರಲು ಕಾರಣವಾಯಿತೆಂದು ಅವರು ತಿಳಿಸಿದರು. ಗಾಂಧೀಜಿ ನಮ್ಮನ್ನಗಲಿ ಇಂದಿಗೆ 66 ವರ್ಷಗಳು ಕಳೆದಿವೆ. ಆದರೆ, ಅವರು ನಮಗೆ ಹಾಕಿಕೊಟ್ಟ ಮಾರ್ಗದರ್ಶನ ಶಾಶ್ವತವಾದುದೆಂದು ಬಣ್ಣಿಸಿದರು.
ಪ್ರತಿಮೆಗೆ ಮಾಲಾರ್ಪಣೆ: ಕಾರ್ಯಕ್ರಮ ಆರಂಭಕ್ಕೆ ಮುನ್ನ ಮಹಾತ್ಮಗಾಂಧಿಜಿ ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಎರಡು ನಿಮಿಷ ಮೌನ ಆಚರಿಸಿದರು. ಸಭೆಯ ನಂತರ ಹಾಜರಿದ್ದ ಆರ್ಯವೈಶ್ಯ ಸಮಾಜದ ಗಣ್ಯರು ಮತ್ತು ವಾಸವಿ ಕ್ಲಬ್ನ ಮುಖಂಡರುಗಳು ಗಾಂಧಿ ಭಾವಚಿತ್ರಕ್ಕೆ ಪುಷ್ಪಗಳನ್ನು ಸಮರ್ಪಿಸಿದರು.
ನಂತರ ಪಟ್ಟಣದ ಗಾಂಧೀ ವೃತ್ತಕ್ಕೆ ತೆರಳಿ ಆಲ್ಲಿನ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ವಾಸವಿ ಕ್ಲಬ್ನ ಅಧ್ಯಕ್ಷ ಎಸ್. ಗೋಕುಲ್, ಕಾರ್ಯದರ್ಶಿ ಎಸ್.ಆರ್. ಮೂರ್ತಿ, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಕೆ.ಎನ್.ಅರುಣ್, ಉಪಾಧ್ಯಕ್ಷ ಕೆ.ಕೆ. ಮುರುಳಿಧರ ಗುಪ್ತ, ಕಾರ್ಯದರ್ಶಿ ಜಿ.ಎಸ್. ರಂಗನಾಥಶೆಟ್ಟಿ, ವಾಸವಿಕ್ಲಬ್ನ ಮಾಜಿ ಅಧ್ಯಕ್ಷ ಜಿ. ನಟರಾಜ್ ಸೇರಿದಂತೆ ಬಹಳಷ್ಟು ಮಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.