ಮೌಲ್ಯಯುತ ಜಾನಪದ ಬೆಳೆಸಬೇಕು
ಕ.ಪ್ರ. ವಾರ್ತೆ ಟಿ ಹೊಳೆನರಸೀಪುರ ಟಿ ಜ. 30
ಇಂದಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ನಾವು ಬದುಕಿನ ಮೌಲ್ಯಗಳನ್ನು ಬಿಂಬಿಸುವ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳಸಬೇಕೆಂದು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕ, ರೋಟರಿ ಸಂಸ್ಥೆ ಹಾಗೂ ಗ್ರೀನ್ ವುಡ್ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಅಂತರ ಫ್ರೌಢಶಾಲಾ ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜಾನಪದೀಯ ಸಂಸ್ಕತಿಯು ನಮ್ಮನ್ನು ಹಾಗೂ ನಮ್ಮ ಪರಂಪರೆಯನ್ನು ಸದಾ ಹಸಿರಾಗಿರಿಸುವ ಸಂಸ್ಕೃತಿಯಾಗಿದೆ ಎಂದರು.
ನಾಗೇಗೌಡರ ಸ್ಮರಣೆ: ಪಟ್ಟಣದ ಹಿರಿಯ ವಕೀಲ ಎ. ತಾಂಡವೇಶ್ವರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನಕ್ಷರಸ್ಥರಾದ ನಮ್ಮ ಜಾನಪದ ಸಾಹಿತಿಗಳು ಯಾವ ವಿಶ್ವವಿದ್ಯಾನಿಲಯದ ಪದವಿ ಪಡೆಯದಿದ್ದರೂ ಸಹ ಸದಾ ನೆನಪಿಡುವ ಪ್ರಬುದ್ಧ ಜಾನಪದ ಹಾಡುಗಳನ್ನು ಸಮಾಜಕ್ಕೆ ನೀಡಿದ್ದಾರೆ. ಎಲ್ಲಾ ಸಂಘ ಸಂಸ್ಥೆಗಳು ನಡೆಸುವ ಜಾನಪದ ಕಾರ್ಯಕ್ರಮಗಳಿಗೆ ಸರ್ಕಾರ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಪುರಸಭೆ ವಾರ್ಷಿಕ ಆಯವ್ಯಯ ಮಂಡಿಸುವಾಗ ನಿಗದಿತ ಆರ್ಥಿಕ ಅನುದಾನವನ್ನು ಮೀಸಲಿಟ್ಟರೆ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳಸಬಹುದೆಂದು ತಿಳಿಸುತ್ತಾ ಜಾನಪದ ಲೋಕದ ದಿಗ್ಗಜ ಡಾ.ಹೆಚ್.ಎಲ್. ನಾಗೇಗೌಡರ ಸಾಧನೆಗಳನ್ನು ಸ್ಮರಿಸಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ರೊ.ಆರ್. ಬಿ. ಪುಟ್ಟೇಗೌಡ ಕೊಳಲಿನ ಮೂಲಕ ಜಾನಪದ ಗೀತೆಯನ್ನು ನುಡಿಸಿ ಮಕ್ಕಳನ್ನು ರಂಜಿಸಿದರು.
ಬಹುಮಾನ ವಿತರಣೆ: ಜಾನಪದ ಸ್ಪರ್ಧೆಯಲ್ಲಿ ಮೊರಾರ್ಜಿ ವಸತಿ ಶಾಲೆಯ ಪೂಜಾ ಸಿ.ಆರ್. ಪ್ರಥಮ, ಕೆ.ಎನ್.ಎ. ವಿದ್ಯಾ ಸಂಸ್ಥೆಯ ಅರುಂಧತಿ ದ್ವಿತೀಯ, ವಿದ್ಯಾನಿಕೇತನ ಶಾಲೆಯ ವೈಭವಿ ಹೆಚ್.ಆರ್. ತೃತೀಯ, ವಿಶೇಷ ಬಹುಮಾನಗಳನ್ನು ಆದರ್ಶ ಶಾಲೆಯ ಎನ್.ಜಿ. ಹರ್ಷ, ಕೆ.ಎನ್.ಎ.ಶಾಲೆಯ ಪೂರ್ಣಿಮಾ ಹಾಗೂ ಎಸ್.ಎಲ್.ಎನ್ ಶಾಲೆಯ ಪೂಜಾ ಡಿ. ಎನ್. ಬಹುಮಾನ ಪಡೆದರು. ತೀರ್ಪುಗಾರರಾಗಿ ಇಂದಿರಾ ಸುಬ್ಬರಾಯ, ಲಕ್ಷ್ಮಿನಾಗರಾಜ್, ಕಾವ್ಯಶ್ರೀ ವಹಿಸಿದ್ದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ರೊ.ಹೆಚ್.ಆರ್. ಶಿವಕುಮಾರ್, ರೊ. ವಿಜಯಕುಮಾರ್, ಗ್ರೀನ್ವುಡ್ ಶಾಲೆಯ ಅಧ್ಯಕ್ಷರಾದ ಇರ್ಶಾದ್ ಉಲ್ಲಾ ಬೇಗ್, ಸಾಹಿತಿ ಗುಂಜೇವು ಅಣ್ಣಾಜಪ್ಪ, ವೀರಬಸಪ್ಪ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್ ವೇದಿಕೆಯಲ್ಲಿದ್ದರು.
ತಾಲೂಕು ಘಟಕದ ಅಧ್ಯಕ್ಷ ಬಾ.ರಾ.ಸುಬ್ಬರಾಯ ನಿರೂಪಿಸಿದರು. ಕುಮಾರ್ ವಂದಿಸಿದರು. ಜಾನಪದ ಪರಿಷತ್ತಿನ ಕಾರ್ಯದರ್ಶಿ ಕೃಷ್ಣ ವಾರ್ಷಿಕ ವರದಿ ಓದಿದರು.
ಹಿರಿಯ ವಕೀಲ ಎ. ತಾಂಡವೇಶ್ವರ್, ಸಾಹಿತಿ ಜಿ. ಬಂಗಾರಪ್ಪ, ಉಪ ತಹಸೀಲ್ದಾರ್ ಉಲಿವಾಲ ಮೋಹನ್ ಕುಮಾರ್, ಹಾಗೂ ಹರಿಕಥೆ ವಿದೂಷಿ ಕಾವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

