ಅಕ್ರಮ ಮದ್ಯ: ವ್ಯಕ್ತಿ ವಶಕ್ಕೆ
ಹಾಸನ: ಮದ್ಯ ಮಾರಾಟ ಮಾಡುತ್ತಿದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ತಾಲ್ಲೂಕಿನ ಕಟ್ಟಾಯ ಹೋಬಳಿ, ಶಂಕರನಹಳ್ಳಿ ಗ್ರಾಮ ವಾಸಿ ರಾಮಸ್ವಾಮಿ(48) ರವರು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮಾರಾಟಕ್ಕಿದ್ದ ಸುಮಾರು 1350 ರು. ಬೆಲೆಯ 180 ಎಂಎಲ್ನ ಓರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 11 ಟೆಟ್ರಾ ಪ್ಯಾಕೇಟ್ಗಳು, 180 ಎಂಎಲ್ನ ಓರಿಜಿನಲಲ್ಚಾಯ್ಸ್ ಡೆಲೆಕಕ್ಸ್ವಿಸ್ಕಿಯ 7 ಬಾಟಲಿಗಳು ಮತ್ತು 90 ಎಂಎಲ್ನ ಮ್ಯಾಕ್ಸ್ ಡೆವಲ್ ರಮ್ ಎಂಬ ಲೇಬಲ್ ಇರುವ 17 ಬಾಟಲಿಗಳಲ್ಲಿದ್ದ ಮದ್ಯವನ್ನು ವಶಪಡಿಸಿಕೊಂಡು, ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವಿನೊಂದಿಗೆ ತಾಯಿ ನಾಪತ್ತೆ
ಹಾಸನ: ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಬಿ. ಬಿ ಕಾವಲು ಗ್ರಾಮದ ಮೋಹನ್ ಅವರ ಪತ್ನಿ ಕಲಾ(24) ಮತ್ತು ಒಂದು ವರ್ಷದ ಮಗುವಿನೊಂದಿಗೆ ಊರಿಗೆ ಹೋಗಲು ಚನ್ನರಾಯಪಟ್ಟಣಕ್ಕೆ ಬಂದಿದ್ದು, ಮೋಹನ್ ಅವರು ಮಕ್ಕಳಿಗೆ ಹಣ್ಣು ತರಲು ಮಾರ್ಕೆಟ್ಗೆ ಹೋಗಿದ್ದರು. ವಾಪಸ್ ನಿಲ್ದಾಣಕ್ಕೆ ಬಂದು ನೋಡಿದಾಗ ಪತ್ನಿ ಕಲಾ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿಲ್ಲ.
ಚಹರೆ: 5 ಅಡಿ ಎತ್ತರ, ಕೋಲುಮುಖ, ಗೋಧಿಮೈಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಪಿಂಕ್ ಬಣ್ಣದ ಚೂಡಿಧಾರ ಧರಿಸಿದ್ದಾರೆ. ಪತಿ ಮೋಹನ್, ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

