ಹಾಸನ

ಫೆ. 18, ಜಿಲ್ಲಾ ಮಟ್ಟದ ಯುವಜನ ಮೇಳ

Published On :

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಆಶ್ರಯದಲ್ಲಿ ಫೆ. 18ರಂದು 2013-14ನೇ ಸಾಲಿನ ಹಾಸನ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ನಡೆಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲಾಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಫೆ. 18ರಂದು ಬೆಳಗ್ಗೆ 9ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. ತಾಲ್ಲೂಕು ಕೇಂದ್ರದಿಂದ ಹಾಸನಕ್ಕೆ ಬಂದು ಹೋಗುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು. ಸ್ಪರ್ಧೆಗಳು ಬೆಳಗ್ಗೆ 9ಕ್ಕೆ ಪ್ರಾರಂಭವಾಗಲಿದ್ದು, ಸ್ಪರ್ಧೆಗೆ ಬೇಕಾದ ವೇಷಭೂಷಣಗಳನ್ನು ವಾದ್ಯ ಪರಿಕರಗಳು ಸ್ಪರ್ಧಿಗಳೇ ತರತಕ್ಕದ್ದು. ಸ್ಪರ್ಧಿಗಳು ಎಲ್ಲಾ ಶಿಸ್ತಿನಿಂದ ಸಹಕರಿಸಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ. ಅರ್ಹ ಯುವಕ, ಯುವತಿ ತಂಡಗಳಿಗೆ ಸಾಂಸ್ಕತಿಕ ಸಲಕರಣೆ ನೀಡಲು ಶಿಫಾರಸ್ಸು ಮಾಡಲಾಗುವುದು.
ಯುವಕರಿಗೆ ಭಾವಗೀತೆ- 3 ನಿಮಿಷ (ವೈಯುಕ್ತಿಕ 02, ಗೀಗೀಪದ - 3 ಜನ- 4 ನಿಮಿಷ , ಲಾವಣಿ - 4 ನಿಮಿಷ (ವೈಯುಕ್ತಿಕ) ಕೋಲಾಟ - 6 ನಿಮಿಷ, 12 ಮಂದಿ  ವೀರಗಾಸೆ - 12 ಜನ, 10 ನಿಮಿಷ ರಂಗಗೀತೆ -3 ನಿಮಿಷ (ವೈಯುಕ್ತಿಕ) ದೊಡ್ಡಾಟ - 15 ಮಂದಿ,45 ನಿಮಿಷ , ಸಣ್ಣಾಟ -12 ಮಂದಿ, 30 ನಿಮಿಷಗಳು. ಯಕ್ಷಗಾನ - 15 ಮಂದಿ, 45 ನಿಮಿಷ, ಏಕಪಾತ್ರಾಭಿನಯ - (ವೈಯುಕ್ತಿಕ) 5 ನಿಮಿಷ, ಚರ್ಮವಾದ್ಯ- 6 ಮಂದಿ, 10 ನಿಮಿಷ, ಜಾನಪದಗೀತೆ - 6 ಮಂದಿ, 4 ನಿಮಿಷ, ಭಜನೆ ಗೀತೆ- 8 ಮಂದಿ 7 ನಿಮಿಷ, ಜನಪದ ನೃತ್ಯ- 10 ನಿಮಿಷ, 12 ಜನ. ಯುವತಿಯರಿಗೆ ಭಾವಗೀತೆ - 3 ನಿಮಿಷ (ವೈಯುಕ್ತಿಕ) ಗೀಗಿಪದ - 5 ಜನ- 4 ನಿಮಿಷ, ಲಾವಣಿ - 4 ನಿಮಿಷ (ವೈಯುಕ್ತಿಕ) 04. ಕೋಲಾಟ - 6 ನಿಮಿಷ, 12 ಮಂದಿ   ಜಾನಪದಗೀತೆ -6 ಮಂದಿ, 4 ನಿಮಿಷ. ಜಾನಪದ ನೃತ್ಯ- 10 ನಿಮಿಷ, 12 ಜನ, ಭಜನೆ - 8 ಮಂದಿ 7 ನಿಮಿಷ, ಏಕಪಾತ್ರಾಭಿನಯ - (ವೈಯುಕ್ತಿಕ) 5 ನಿಮಿಷ, ಸೋಬಾನೆ ಪದ-(ಯುವತಿಯರಿಗೆ) 4 ಮಂದಿ, 5ನಿಮಿಷ, ರಾಗಿ, ಜೋಳ ಬೀಸುವ ಪದ (ಯಾವುದಾದರೂ) ರಂಗಗೀತೆ - 3 ನಿಮಿಷ (ವೈಯುಕ್ತಿಕ) ಭಜನೆ ಗೀತೆ- 8 ಮಂದಿ 7 ನಿಮಿಷ, ಜನಪದ ನೃತ್ಯ- 10 ನಿಮಿಷ, 12 ಜನ.ಈ ಸ್ಪರ್ಧೆಗಳನ್ನು ಯುವಕ  ಮತ್ತು ಯುವತಿಯರಿಗಾಗಿ ಹಮ್ಮಿಕೊಳ್ಳಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.