ವಿವೇಕಾನಂದ, ನೇತಾಜಿ ಜನ್ಮದಿನಾಚರಣೆ
ಹಾಸನ: ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆಯ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬುಧವಾರ ಯುವ ಸಂಗಮ ಕಾರ್ಯಕ್ರಮ ನಡೆಯಿತು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಯುವ ಸಂಗಮ ಕಾರ್ಯಕ್ರಮವನ್ನು ಎಬಿವಿಪಿ ಮುಖಂಡ ರಾಕೇಶ್ ನಾಡಿಗ್ ಹಾಗೂ ಇತರರು ಉದ್ಘಾಟಿಸಿದರು. ನಂತರ ಮಾತನಾಡಿ ಅವರು, ವಿವೇಕಾನಂದರ ಆದರ್ಶ, ತತ್ವಗಳು ಯುವ ಪೀಳಿಗೆಯ ನಾಡಿ ಮಿಡಿತವಾಗಬೇಕು. ದೇಶವನ್ನು ಕಟ್ಟಲು ಯುವ ಪೀಳಿಗೆಯು ಮುಂದಾಗಬೇಕು ಎಂದು ಕರೆ ನೀಡಿದರು.
ಅಮೆರಿಕದ ಮೇಲೂ ಪ್ರಭಾವ: ಪಾಕಿಸ್ತಾನ ಕೃತ್ಯಕ್ಕೆ ದೇಶದ ಸೈನಿಕರು ಹತ್ಯೆಯಾಗುತ್ತಿರುವುದು ದುರಂತವಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಬಂಡೆಯಂತಹ ನಿಷ್ಠಾವಂತ ಪೊಲೀಸ್ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ.
ಕರ್ನಾಟಕದಲ್ಲಿ ಭಯೋತ್ಪಾನಾ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಆದ್ದರಿಂದ ಜನರು ಈ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಎಂದ ಅವರು, ಸ್ವಾಮಿ ವಿವೇಕಾನಂದರ ಸಿದ್ಧಾಂತವು ಇಂದಿಗೂ ಸಹ ಅಮೆರಿಕದಂತಹ ದೇಶಗಳಲ್ಲಿ ಸಾಕಷ್ಟು ಪ್ರಭಾವ ಬೀರಿದ್ದು, ಅಲ್ಲಿಯೂ ಸಹ ಇವರ ಜನ್ಮ ದಿನಾಚರಣೆ ಆಚರಿಸುತ್ತಿದ್ದಾರೆ ಎಂದರು.
ಹೋರಾಟ ಮಾಡಿದೆ: ಮೈಸೂರು ವಿಭಾಗದ ಎಬಿವಿಪಿ ಘಟಕದ ಸಂಘಟನೆಯ ಕಾರ್ಯದರ್ಶಿ ನಾಗೇಂದ್ರ ಸ್ವಾಮಿ ಮಾತನಾಡಿ, ಸಮಾಜದಲ್ಲಿ ಇಷ್ಟೊಂದು ಭ್ರಷ್ಟಾಚಾರ, ಸೈನಿಕರ ಮೇಲೆ ದಾಳಿ, ಪೊಲೀಸರ ಮೇಲೆ ದಾಳಿ ಎಲ್ಲಾವನ್ನು ನೋಡಿದರೇ ಸಮಾಜವು ನಿದ್ರಾವಸ್ಥೆಯಲ್ಲಿ ಇದೆ ಎಂದು ವಿಷಾದಿಸಿದ ಅವರು, ಎಬಿವಿಪಿ ಇಂತಹ ಘಟನೆಗಳನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳದೆ ಹೋರಾಟಗಳನ್ನು ಮಾಡಿದೆ ಎಂದು ಹೇಳಿದರು.
ದೇಶ ಕಟ್ಟಲು ಮುಂದಾಗಿ: ನಮ್ಮ ಯುವ ಶಕ್ತಿಯು ದೇಶ ಕಟ್ಟುವ ನಿಟ್ಟಿನಲ್ಲಿ ಮುನ್ನಡೆಯುವ ಮೂಲಕ ದೇಶದಲ್ಲಿನ ಭ್ರಷ್ಟಾಚಾರ, ಭಯೋತ್ಪಾದನೆಯನ್ನು ಮಟ್ಟಹಾಕಬೇಕು. ದೇಶದೊಳಗೆ ನುಗ್ಗುವ ನುಸುಳುಕೋರರಿಂದ ದೇಶವನ್ನು ರಕ್ಷಿಸಬೇಕು ಎಂದ ಅವರು, ಸ್ವಾಭಿಮಾನವುಳ್ಳ ಮಹಾನ್ಚೇತನ ಸ್ವಾಮಿ ವಿವೇಕಾನಂದರ ಗುಣತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶ ಕಟ್ಟಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡ ಲಕ್ಷ್ಮಿಕೇಶವ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

