ಇಂದು ಖಾಸಗಿ ಆಸ್ಪತ್ರೆಗಳ ಬಂದ್
ಹಾಸನ: ಖಾಸಗಿ ಆಸ್ಪತ್ರೆಗಳ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಿರುವ ಸರ್ಕಾರಕ್ಕೆ ಸಮಸ್ಯೆಯ ಗಂಭೀರತೆಯನ್ನು ತಿಳಿಸಲು ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲು ಫೆ. 1 ರಂದು ರಾಜ್ಯಾದ್ಯಂತ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ಮುಚ್ಚುವುದರ ಮೂಲಕ ಪ್ರತಿಭಟನೆ ಕೈಗೊಂಡಿದ್ದಾರೆ.
ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿ ಎಲ್ಲಾ ವೈದ್ಯಕೀಯ ಸೇವೆಗಳನ್ನು ಫೆ. 1ರಂದು ನಿಲ್ಲಿಸಲಾಗುವುದು ಎಂದು ನರ್ಸಿಂಗ್ ಹೋಂ ಮತ್ತು ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷೆ ಡಾ. ಆರ್.ಎಸ್. ರಂಗಲಕ್ಷ್ಮಿ ತಿಳಿಸಿದ್ದಾರೆ. ಯೋಜನೆಗಳು ಅನುಷ್ಠಾನಗೊಂಡು 11 ವರ್ಷಗಳು ಕಳೆದರೂ ಪ್ರತಿಯೊಂದು ಶಸ್ತ್ರ ಚಿಕಿತ್ಸೆಗೂ ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಸಂದಾಯವಾಗುತ್ತಿದ್ದ ಹಣದಲ್ಲಿ ಯಾವುದೇ ಬದಲಾವಣೆ ತಂದಿಲ್ಲ ಎಂದು ಅವರು ಹೇಳಿದರು.
ಪ್ರತಿಯೊಂದು ವಸ್ತುವಿನ ದರವೂ ಗಗನಕ್ಕೇರುತ್ತಿರುವ ಈ ದಿನಗಳಲ್ಲಿ ಅದೇ ಹಳೆಯ ದರದಲ್ಲಿ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿ ಖಾಸಗಿ ಆಸ್ಪತ್ರೆಗಳನ್ನು ನಿಭಾಯಿಸುವುದು ಬಹಳ ದುಸ್ತರವಾಗಿದೆ. ಈ ಬಗ್ಗೆ ಸರ್ಕಾರವನ್ನು ಅವರು ನಿಗದಿಪಡಿಸಿರುವ ದರಗಳ ಪರಿಷ್ಕರಣೆಗೆ ಹಲವು ಬಾರಿ ಒತ್ತಾಯಿಸಿದ್ದರೂ ಯಾವುದೇ ಬದಲಾವಣೆಯಾಗಿಲ್ಲ ಎಂದು ತಿಳಿಸಿದ್ದಾರೆ. ಈ ಯೋಜನೆಗಳನ್ನು ಆರ್ಥಿಕವಾಗಿ ಸಬಲರಾದವರಿಗೂ ಹಾಗೂ ನಗರ ವ್ಯಾಪ್ತಿಗೂ (ಬಿಪಿಎಲ್ ಕಾರ್ಡ್ ಮತ್ತು ನಗರ ಯಶಸ್ವಿನಿ) ತರುವ ಉತ್ಸಾಹದಲ್ಲಿ ಇರುವ ಸರ್ಕಾರವು ಖಾಸಗಿ ಆಸ್ಪತ್ರೆಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ಮನಗಂಡಿಲ್ಲ ಎಂದು ಅವರು ವಿವರಿಸಿದರು. ಸದ್ಯ ಶೇ. 80ರಷ್ಟು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದು, ಇವರಲ್ಲಿ ಕೇವಲ ಶೇ. 31 ಜನ ಮಾತ್ರ ನಿಜವಾಗಿ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಈ ಯೋಜನೆಗಳ ದುರ್ಬಳಕೆ ಹೆಚ್ಚಾಗಿದ್ದು, ಪ್ರತಿದಿನ ಆರ್ಥಿಕವಾಗಿ ಸಬಲರಾದ ಈ ಕಾರ್ಡ್ ಹೊಂದಿರುವ ಜನರಿಂದ ಖಾಸಗಿ ಆಸ್ಪತ್ರೆಯವರಿಗೆ ಕಿರುಕುಳ ಹೆಚ್ಚಾಗಿದ್ದು, ನಿಜವಾದ ಬಡಜನರ ಆರೋಗ್ಯ ರಕ್ಷಣೆಯನ್ನು ಸಮರ್ಪಕವಾಗಿ ನೀಡಲು ಅಡ್ಡಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

