ನೀರಿನ ಯೋಜನೆಗೆ ಶೀಘ್ರ ಅನುಮೋದನೆ
ಕ.ಪ್ರ.ವಾರ್ತೆ ಹಾಸನ ಜ. 31
ಹೇಮಾವತಿ ಜಲಾಶಯದಿಂದ ಹಾಸನ ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ 15 ದಿನಗಳೊಳಗೆ ಕೇಂದ್ರದ ಅನುಮೋದನೆ ದೊರಕಲಿದೆ ಎಂದು ಶಾಸಕ ಎಚ್.ಎಸ್. ಪ್ರಕಾಶ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರು. 432 ಕೋಟಿಯ ಈ ಕುಡಿಯುವ ನೀರಿನ ಯೋಜನೆಗೆ ನಗರಸಭೆಯ ಶೇ. 10ರಷ್ಟು ಹಣ ಒದಗಿಸುವುದು ಹಾಗೂ ಉಳಿಕೆ ಹಣವನ್ನು ಕೇಂದ್ರ ಸರ್ಕಾರದಕ್ಕಾಗಿದೆ. ಈಗಾಗಲೇ ಯೋಜನೆಯು ಕೇಂದ್ರ ಸರ್ಕಾರಕ್ಕೆ ಹೋಗಿದ್ದು, ಅಲ್ಲಿ ಅನುಮೋದನೆ ದೊರಕಲಿದೆ. ಈ ಯೋಜನಗೆ ಸಂಬಂಧಿಸಿದಂತೆ ಒಂದೆರಡು ಕಡೆಗಳಲ್ಲಿ ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಆ ಕಾರ್ಯವನ್ನು ಸಹ ಕೂಡಲೇ ನಡೆಸಲಾಗುತ್ತದೆ ಎಂದರು.
ಅಂದಾಜು ವೆಚ್ಚ ಲೆಕ್ಕಾಚಾರ: ಮಲ್ಟಿ ವಿಲೇಜ್ ಸ್ಕೀಂನಲ್ಲಿ ಹಂದಿನ ಕೆರೆಯಿಂದ ಸತ್ಯಮಂಗಲಕ್ಕೆ ನೀರು ಒದಗಿಸುವಂತಹ ಯೋಜನೆ ಆಗಿದ್ದು, ರು. 15 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸುವ ಮೂಲಕ ನೀರನ್ನು ಒದಗಿಸಲಾಗುತ್ತದೆ. ಈಗಾಗಲೇ ಯೋಜನೆಯ ಅಂದಾಜು ವೆಚ್ಚದ ಲೆಕ್ಕಾಚಾರ ಆಗಿದ್ದು, ಕೂಡಲೇ ಈ ಯೋಜನೆ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ಪೈಪ್ಲೈನ್ ಅಳವಡಿಸಲು ಸೂಚನೆ: ಜೊತೆಗೆ ಸತ್ಯಮಂಗಲ ಗ್ರಾಮ ಪಂಚಾಯ್ತಿಗೆ ರು. 36 ಲಕ್ಷಗಳಲ್ಲಿ ಪೈಪ್ಲೈನ್ ಅಳವಡಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಆದರೆ ಈ ಯೋಜನೆಗೆ ನೀರಿನ ಮೂಲವನ್ನು ತಿಳಿಸಿದೆ ಅನುಮೋದಿಸಲಾಗಿದೆ. ಜೊತೆಗೆ ಇಲ್ಲಿನ ಗ್ರಾಮಪಂಚಾಯ್ತಿ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತರದೆ ಪೈಪ್ಲೈನ್ ಅಳಡಿಸುವುದಕ್ಕೆ ಸೂಚಿಸಲಾಗಿದೆ. ಆದ್ದರಿಂದ ಇದನ್ನು ರದ್ದು ಪಡಿಸಬೇಕು ಎಂದು ಹೇಳಿದರು.
ಈ ನೀರಿನ ಯೋಜನೆಗಳ ಬಗ್ಗೆ ಮಾಹಿತಿ ಸಿಗಬೇಕಾದರೆ ಅದರ ನಕ್ಷೆಯನ್ನು ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಹಾಕಿಸಬೇಕು. ಈ ಬಗ್ಗೆ ಹಿಂದೆಯೇ ಹೇಳಿದ್ದರು ಸಹ ಎಲ್ಲಿಯೂ ಸಹ ನಕ್ಷೆಯನ್ನು ನಿರ್ವಹಣೆಯನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸತ್ಯಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ದರ್ಶನ್ ಬಾಬು, ಸದಸ್ಯ ಶೇಷಪ್ಪ, ನಂಜಪ್ಪ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

