ಹಾಸನ

ಬೆಳೆ ವಿಮೆ ಪಾವತಿಗಾಗಿ ಪಹಣಿ ಪಡೆಯಲು ಮುಗಿಬಿದ್ದ ಅರಸೀಕೆರೆ ರೈತರು

Published On :

ಅರಸೀಕೆರೆ: ಮುಂಗಾರು ಮಳೆ ಬಹುತೇಕ ಕೈಕೊಟ್ಟಿದೆ. ಆರಂಭದಲ್ಲಿ ಬಂದ ಸಾಧಾರಣ ಮಳೆಯಿಂದ ಬಿತ್ತನೆ ಕಾರ್ಯ ಕೈಗೊಂಡು ಆನೇಕ ರೈತರ ಫಸಲು ಮೊಳಕೆ ಬಾರದೆ ಕಂಗಾಲಾಗಿದ್ದಾರೆ. ಇದನ್ನು ಮನಗಂಡ ಸರ್ಕಾರ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದೆ. ಇತ್ತ ಬೆಳೆ ವಿಮೆ ಪಾವತಿಸಲು ಪಹಣಿಗಾಗಿ ಡಿ.ಎಂ. ಕುರ್ಕೆ ಹಾಗೂ ಕಣಕಟ್ಟೆ ಅಟಲ್‌ಜೀ ಸ್ನೇಹ ಕೇಂದ್ರಕ್ಕೆ ಮುಗಿ ಬಿದ್ದಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಒಂದೇ ಕೌಂಟರ್ ತೆರೆದು ಪಹಣಿ ನೀಡುತ್ತಿದ್ದು, ರೈತರು ದಿನಗಟ್ಟಲೆ ಕಾಯಬೇಕಿದೆ. ಕಳೆದ ಒಂದು ವಾರದಿಂದಲೂ ರೈತರು ಪಹಣಿ ಪಡೆಯಲು ಬೆಳಗಿನಿಂದ ಸಂಜೆಯವರೆವಿಗೂ ಸುಡುಬಿಸಿಲಿನಲ್ಲಿ ಸರತಿ ಸಾಲಿನಲ್ಲಿ  ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರತಿ: ಬೆಳೆ ವಿಮೆ ಹಣ ಪಾವತಿಸಲು ಸೋಮವಾರ ಕಡೆಯ ದಿನವಾಗಿದ್ದು, ಪಹಣಿ ಪಡೆಯುವುದು ಅನಿವಾರ್ಯವಾಗಿದೆ. ಕೆಲವು ರೈತರು ಭಾನುವಾರವೂ ಪಹಣಿ ನೀಡುವ ಕೇಂದ್ರದ ಮುಂದೆ ವಾಸ್ತವ್ಯ ಹೂಡಿದ್ದರು. ಬೆಳಿಗ್ಗೆ ಆರಂಭವಾದ ರೈತರ ಕ್ಯೂ ಸಂಜೆಯಾದರೂ ಕರಗಿರಲಿಲ್ಲ.
ರಿಯಾಯತಿ: ಎಲ್ಲದಕ್ಕೂ ಪಹಣಿ ಬೇಕು. ರೈತರ ಎಲ್ಲ ವ್ಯವಹಾರಗಳಿಗೂ ಪಹಣಿ ಮೂಲ ದಾಖಲೆಯಾಗಿದೆ. ಬೆಳೆ ವಿಮೆ, ಬ್ಯಾಂಕ್ ಸಾಲ, ಆಸ್ತಿ ವಿಭಾಗ, ಅಡಮಾನ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ರಿಯಾಯತಿ ಬಿತ್ತನೆ ಬೀಜ ಹಾಗೂ ರಸ ಗೊಬ್ಬರ ಖರೀದಿಸಲು, ಖಾಸಗಿ ಕಂಪನಿಗಳಲ್ಲಿ ಸಾಲ ಸೌಲಭ್ಯ ಸೇರಿದಂತೆ ಏನೇ ಮಾಡಬೇಕಾದರೂ ಪಹಣಿ ಬೇಕೇ ಬೇಕು. ಕಣಕಟ್ಟೆ ಹೋಬಳಿಯಲ್ಲಿ 100ಕ್ಕೂ ಹೆಚ್ಚು ಹಳ್ಳಿಗಳಿದ್ದು ಕೇವಲ ಒಂದು ಕೌಂಟರ್ ತೆರೆದು ದಿನಕ್ಕೆ 10ರಿಂದ 20ಮಂದಿಗೆ ಪಹಣಿ ಮಾತ್ರ ವಿತರಿಸಲಗುತ್ತಿದೆ. ಅಲ್ಲದೆ ಕೇಂದ್ರದ ನೌಕರರ ಉದಸೀನ ಮನೋಭಾವವೋ ಅಥವಾ ನಿರ್ಲಕ್ಷ್ಯವೋ. ಇನ್ನು ಕೊಡುತ್ತಿದ್ದಂತೆ ಸರ್ವರ್ ತೊಂದರೆ ಎಂದು ಪಹಣಿ ನೀಡುವುದನ್ನು ನಿಲ್ಲಿಸಿ ಬಾಗಿಲು ಮುಚ್ಚುತ್ತಾರೆ ಎಂದು ಬಹಳಷ್ಟು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.