ಹಾಸನ

ಜಿಲಿಟನ್ ಸಾಗಿಸುತ್ತಿದ್ದ ವಾಹನ ವಶ, ಚಾಲಕ ಪರಾರಿ

Published On :

ಹೊಳೆನರಸೀಪುರ: ಅಕ್ರಮವಾಗಿ ಸ್ಪೋಟಕ ಜಿಲಿಟಿನ್ ಕದ್ದು ಸಾಗಿಸುತ್ತಿದ್ದ ಮಾರುತಿ ಓಮ್ನಿ ವಾಹನವನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಗಡಿ ಗ್ರಾಮವಾದ ದೊಡ್ಡಹಳ್ಳಿ ಗ್ರಾಮದ ಸರಹದ್ದಿನಲ್ಲಿ ಇತ್ತೀಚೆಗೆ ನಡೆದಿದೆ.
ತಾಲೂಕಿನ ಗಡಿ ಗ್ರಾಮವಾದ ಹಾಸನ-ಮೈಸೂರು ರಸ್ತೆಯಲ್ಲಿನ ದೊಡ್ಡಹಳ್ಳಿ ಗ್ರಾಮದ ಬಳಿಯಲ್ಲಿ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ರಾತ್ರಿ ಗಸ್ತಿನಲ್ಲಿದ್ದ ಅವಧಿಯಲ್ಲಿ ಮೈಸೂರು ಕಡೆಯಿಂದ ಬಂದ ಮಾರುತಿ ಓಮ್ನಿ ವ್ಯಾನನ್ನು ತಡೆದು ಪರೀಕ್ಷಿಸಲು ಮುಂದಾದಾಗ ವ್ಯಾನಿನ ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದನು.  ವ್ಯಾನನ್ನು ಪರೀಕ್ಷಿಸಲಾಗಿ, ಮಾರುತಿ ಓಮ್ಮಿನಲ್ಲಿ ಸಾವಿರಾರು ರು. ಮೌಲ್ಯದ ನಾಲ್ಕು ಬಾಕ್ಸ್ಗಳಷ್ಟು ಸ್ಫೋಟಕ ಜಿಲೆಟಿನ್ ಪತ್ತೆಯಾಗಿದೆ.ಕೂಡಲೇ ವಿಷಯ ತಿಳಿದ ಗ್ರಾಮಾಂತರ ಠಾಣೆ ಪಿಎಸ್ಸೈ ಲೋಕೇಶ್ ಅವರು ಸ್ಥಳಕ್ಕೆ ತೆರಳಿ ಜಿಲಿಟನ್ ತುಂಬಿದ್ದ ವಾಹನವನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.