ಹಾಸನ

ಮನೆ ಮನೆ ಸಮೀಕ್ಷಾ ಕಾರ್ಯಾಚರಣೆ

Published On :

ಹಾಸನ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿನ ಎಲ್ಲಾ ಜಾತಿ, ಜನಾಂಗಗಳನ್ನು ಒಳಗೊಂಡಂತೆ ಮನೆ ಮನೆ ಸಮೀಕ್ಷಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲಾ ಕುಟುಂಬಗಳ ಪ್ರತಿಯೊಬ್ಬ ಸದಸ್ಯರಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ, ಸಮೀಕ್ಷೆಗೆ ಬಳಸುವ ಕುಟುಂಬದ ಅನುಸೂಚಿ (ನಮೂನೆ-3)ನ್ನು ಸಾರ್ವಜನಿಕರ ಮಾಹಿತಿಗಾಗಿ ಜಾತಿಗಳ ಪಟ್ಟಿಯನ್ನು (ಸಂಕೇತ ಸಂಖ್ಯೆಗಳೊಂದಿಗೆ) ಸಾರ್ವಜನಿಕರ ಮಾಹಿತಿ ಹಾಗೂ ಸಲಹೆ, ಸೂಚನೆಗಳಿಗಾಗಿ ಆಯೋಗದ ಅಧಿಕೃತ ವೆಬ್ಸೈಟ್ಢಿಢಿಢಿ.ಛಿಛ್ಛ್ಞಢಿಛ್ಠಜ್ಛಟಛಡಡಜಡ.್ಞಛ್ಠ.ಟ್ಝ್ಛಿ.್ಝಟಿ ಈಗಾಗಲೇ ಪ್ರಕಟಿಸಲಾಗಿದೆ. ಪ್ರಕಟಿಸಲಾದ ಜಾತಿಗಳ ಪಟ್ಟಿಯನ್ನು ಸಾರ್ವಜನಿಕರು ವೀಕ್ಷಿಸಿ, ಜಾತಿ ಪಟ್ಟಿಯಲ್ಲಿ ಯಾವುದಾದರೂ ಜಾತಿ ಅಥವಾ ಉಪಜಾತಿಗಳು ಬಿಟ್ಟು ಹೋಗಿದ್ದಲ್ಲಿ ಅಂತಹವುಗಳನ್ನು ಜಾತಿ ಪಟ್ಟಿಗೆ ಸೇರಿಸುವ ಕುರಿತು ಅಥವಾ ಪಟ್ಟಿಯಲ್ಲಿ  ಯಾವುದಾರೂ ಜಾತಿಗಳು ಸರಿಯಾಗಿ ನಮೂದಾಗಿರದಿದ್ದಲ್ಲಿ, ಅಂತಹವುಗಳನ್ನು ಸರಿಪಡಿಸುವ ಕುರಿತು ವೆಬ್ಸೈಟ್ನಲ್ಲಿ ಪ್ರಕಟಿಸಿರುವ ನಿಗದಿತ (ನಮೂನೆ-ಅ)ಯಲ್ಲಿ ಸಲಹೆ ಮತ್ತು ಸೂಚನೆಗಳನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪದ್ಮಶ್ರೀ ಕಮರ್ಷಿಯಲ್ ಕಾಂಪ್ಲೆಕ್ಸ್, ಹೋಟೆಲ್ ಪಾಲಿಕ ಹತ್ತಿರ, ಆರ್.ಸಿ. ರೋಡ್, ಹಾಸನ-573201ಇಲ್ಲಿಗೆ ಜುಲೈ 18ರೊಳಗೆ ಸಲ್ಲಿಸಬೇಕಿದೆ ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ  ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.