'ಸ್ವಾರ್ಥಮನೋಭಾವ ಸಮಾಜಕ್ಕೆ ಮಾರಕ'
ಬೇಲೂರು: ಇತ್ತೀಚಿನ ದಿನಗಳಲ್ಲಿ ಸೇವಾ- ಮನೋಭಾವನೆ ಸ್ವಾರ್ಥದಿಂದ ಕೂಡಿದ್ದು, ಸಮಾಜಕ್ಕೆ ಮಾರಕ ಬೆಳವಣಿಗೆಯಾಗಿದೆ. ಈ ದಿಸೆಯಲ್ಲಿ ಸದೃಢ ಸಮಾಜಕ್ಕೆ ಮೌಲ್ಯಾಧಾರಿತ ವ್ಯಕ್ತಿಗಳ ಅವಶ್ಯವಿದೆ ಎಂದು ರೋಟರಿ ಸಂಸ್ಥೆ ಅಸಿಸ್ಟೆಂಟ್ ಗೌರ್ನರ್ ಡಾ. ಕಿಶೋರ್ ತಿಳಿಸಿದರು.
ಪಟ್ಟಣದ ಪುಟ್ಟಮ್ಮ ಚನ್ನಕೇಶವೇಗೌಡರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬೇಲೂರು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಕತ್ತಲಿನಲ್ಲಿ ಇರುವ ದೀನ-ದಲಿತರನ್ನು ಸಮಾಜ ಮುಖ್ಯ ವಾಹಿನಿಗೆ ತರುವ ಹೊಣೆ ಸರ್ವ ಸದಸ್ಯರ ಮೇಲಿದೆ ಎಂದು ತಿಳಿಸಿದರು. ನಿಕಟಪೂರ್ವ ಅಧ್ಯಕ್ಷ ತಿಮ್ಮೇಗೌಡ ಮಾತನಾಡಿ, ರೋಟರಿ ಸಂಸ್ಥೆ ಕಳೆದ ವರ್ಷದಲ್ಲಿ ಶೈಕ್ಷಣಿಕ ಕಾರ್ಯಕ್ಕೆ ಹಾಗೂ ವಿಕಲಚೇತನರಿಗೆ ಅಧಾರವಾಗಿದೆ ಎಂದರು. ನೂತನ ಅಧ್ಯಕ್ಷ ಸಿ.ಪಿ.ಚಂದ್ರೇಗೌಡ ಮಾತನಾಡಿ 2014-15ರ ಸಂಸ್ಥೆ ಹತ್ತುಹಲವು ಯೋಜನೆಗಳನ್ನು ಪ್ರಮುಖವಾಗಿ ಅಯೋಜಿಸಿದೆ ಎಂದರು.ನಿಕಟಪೂರ್ವ ಕಾರ್ಯದರ್ಶಿ ಅಜಿಂ ಉಲ್ಲಾಶರೀಫ್, ವಿಕ್ರಂ ಕೌರಿ, ಜೋನಲ್ ಲೆಫ್ಟಿನೆಂಟ್ ಶರತ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

