ಹೊಸ ಬಸ್ನಿಲ್ದಾಣ ಬಳಿ ಸ್ವಚ್ಛತೆ
ಹಾಸನ: ನಗರದ ಹೊಸ ಬಸ್ನಿಲ್ದಾಣ ಬಳಿ ಒಕ್ಕಲಿಗರ ಹಿತರಕ್ಷಣಾ ಸೇನೆಯಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ ಸೋಮವಾರ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಚಾಲನೆ ನೀಡಿದರು.
ಐತಿಹಾಸಿಕ ನೆಲೆ ಇರುವ ಸಿಂಹಾಸನಪುರಿ ಎಂದೇ ಖ್ಯಾತಿ ಪಡೆದ ಅಧಿದೇವತೆ ಹಾಸನಾಂಬೆ ನೆಲೆಸಿರುವ ಸ್ಥಳದಲ್ಲಿ ಏಷ್ಯಾ ಖಂಡದಲ್ಲೇ 2ನೇ ಅತಿದೊಡ್ಡ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣದ ಹಿನ್ನೆಲೆಯಲ್ಲಿ ಸ್ವ ಚ್ಛತಾ ಕಾರ್ಯ ನಡೆಸಲಾಯಿತು.
ರೇಲ್ವೆ ಟ್ರಾಕ್ನಿಂದ ಚನ್ನಪಟ್ಟಣ ಸೇತುವೆವರೆಗೂ ಪಾರ್ಕ್ ನಿರ್ಮಾಣ, ಒಂದು ರು.ಗೆ ಒಂದು ಲೀಟರ್ ಮಿ ನರಲ್ ವಾಟರ್ ವ್ಯವಸ್ಥೆ, ನೀರಿನ ಕಾರಂಜಿ, ವಿದ್ಯುತ್ ದೀಪಾಲಂಕಾರ, ಸಾರ್ವಜನಿಕರು ಕುಳಿತುಕೊಳ್ಳಲು ಬೆಂಚಿನ ವ್ಯವಸ್ಥೆ, ಭದ್ರತೆ ಉದ್ದೇಶಕ್ಕಾಗಿ ಸಿಸಿ ಕ್ಯಾಮೆರಾ ಅಳವಡಿಕೆ, ಉದ್ಯಾನ ವನ ನಿರ್ವಹಣಾ ಸಿಬ್ಬಂದಿ, ಭದ್ರತೆಗಾಗಿ ಸೆಕ್ಯೂರಿಟಿ ಗಾರ್ಡ್ ಹಾಗೂ ಸಮಿತಿಯಿಂದ 5 ವರ್ಷ ಕಾಲ ಸಂಪೂರ್ಣ ನಿರ್ವಹಣೆ ನಮ್ಮ ಮುಂದಿನ ಯೋಜನೆ ಮತ್ತು ಉದ್ದೇಶಗಳಾಗಿವೆ ಎಂದು ಒಕ್ಕಲಿಗರ ಹಿತರಕ್ಷಣಾ ಸೇನೆ ಅಧ್ಯಕ್ಷ ಮೈಲನಹಳ್ಳಿ ಮಂಜೇಗೌಡ ತಿಳಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ನಾನಾ ಸಂಘಟನೆಗಳು ಮತ್ತು ಆಟೋ ಚಾಲಕರು ಪಾಲ್ಗೊಂಡಿದ್ದರು. ಜೆಸಿಬಿ ಮೂಲಕ ಕೆಲಸ ನಿರ್ವಹಿಸಿದರು.
ಇದೇ ವೇಳೆ ಒಕ್ಕಲಿಗರ ಹಿತರಕ್ಷಣಾ ಸೇನೆ ಸಹ ಕಾರ್ಯದರ್ಶಿ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಮಧುರಾಜ್, ಖಜಾಂಚಿ ಹಾಡ್ಲಳ್ಳಿ ಉಮೇಶ್, ಸಂತೋಷ್ ಇತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

