ಹಾಸನ

ಗಿಡಮರ ಬೆಳೆಯುವುದನ್ನು ರೂಢಿಸಿಕೊಳ್ಳಲಿ: ಹಡ್ಲಗೇರಿ

Published On :

ಕ.ಪ್ರ.ವಾರ್ತೆ ್ಣ ರಾಮನಾಥಪುರ ್ಣ ಜು. 18
ಪಟ್ಟಣದ ಸುಬ್ರಹ್ಮಣ್ಯ ನಗರದಲ್ಲಿರುವ ತಂಬಾಕು ಮಂಡಳಿಯಲ್ಲಿ ವನಮಹೋತ್ಸವದ ಅಂಗವಾಗಿ ಅರಣ್ಯ ಇಲಾಖೆಯವರು ಮತ್ತು ರೈತಸಂಘದವರು ಹಾಗೂ ಸ್ಥಳೀಯರು ಇಲ್ಲಿನ ತಂಬಾಕು ಮಂಡಳಿಯವರ ಸಹಕಾರದೊಂದಿಗೆ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು.
 ಕಾರ್ಯಕ್ರಮವನ್ನು ಸಸಿ ನೆಡುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ಅರಕಲಗೂಡು ವಲಯ ಅರಣ್ಯ ಅಧಿಕಾರಿ ವಿ.ಪಿ ಹಡ್ಲಗೇರಿ, ನಾಡಿನ ಸಂಪತ್ತುಗಳಲ್ಲಿ ಈ ಅರಣ್ಯ ಸಂಪತ್ತೂ ಒಂದು ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಹಾಗೂ ಕೆಲವು ದುಷ್ಕರ್ಮಿಗಳ ದುರಾಸೆಗೆ ಬಲಿಯಾಗಿ ಅರಣ್ಯ ನಾಶವಾಗುತ್ತಿದ್ದು ವಿನಾಶದಂಚಿನಲ್ಲಿದೆ. ಪ್ರತಿಯೊಬ್ಬ ನಾಗರಿಕರೂ ಗಿಡಮರಗಳನ್ನು ಬೆಳೆಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಗಿಡ ನೆಡಿ: ರೈತಸಂಘದ ಜಿಲ್ಲಾ ಉಪಾಧ್ಯಕ್ಷರಾದ ಹೆಚ್.ಈ.ಜಗದೀಶ್ ಮಾತನಾಡಿ ರೈತರು ತಮ್ಮ ಜಮೀನಿನ ಅಂಚಿನಲ್ಲಿ ಗಿಡಮರಗಳನ್ನು ಬೆಳೆಸುವುದರಿಂದ ಇವುಗಳ ಎಲೆಗಳು ಜಮೀನಿನಲ್ಲಿ ಉದುರುವುದರಿಂದ ಮಣ್ಣಿ ಫಲವತ್ತತೆ ಮಳೆ ನೀರಿನೊಂದಿಗೆ ಗೊಬ್ಬರದ ಸತ್ವಾಂಶ ಹರಿದು ಹೋಗದಂತೆ ಜಮೀನಿನ ಗುಣಮಟ್ಟ ಕಾಪಾಡಿಕೊಳ್ಳುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಂಬಾಕು ಮಂಡಳಿಯ ಉಪವ್ಯವಸ್ಥಾಪಕ ಸುರೇಂದ್ರ, ಕ್ಷೇತ್ರ ಅಧಿಕಾರಿಗಳಾದ ಎನ್.ಕೆ.ಪಾಂಡು, ಜಿ.ಎಲ್.ಕೆ.ಪ್ರಸಾದ್, ಸಹಾಯಕರಾದ ಕೃಷ್ಣಯ್ಯ ಶೆಟ್ಟಿ, ಎಸ್.ಕೆ.ಮಂಜುನಾಥ್, ತಾಲೂಕು ರೈತ ಸಂಘದ ಅಧ್ಯಕ್ಷ  ಹೊಂಬೇಗೌಡ, ಕಾರ್ಯದರ್ಶಿ ಸ್ವಾಮಿಗೌಡ, ದೊಡ್ಡಮಗ್ಗೆ ಹೋಬಳಿ ರೈ.ಸಂ ಅಧ್ಯಕ್ಷ ಯೋಗೇಶ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಸರೋಜಮ್ಮ, ಸ್ಥಳೀಯ ಗ್ರಾಪಂ ಸದಸ್ಯ ರಾಮೇಗೌಡ, ಉಪ ವಲಯ ಅರಣ್ಯ ಅಧಿಕಾರಿ ಮಲ್ಲಯ್ಯ, ಸಿಬ್ಬಂಧಿಗಳಾದ ಮಂಜುನಾಥ್, ಕೀರ್ತಿ, ರಘು ಇನ್ನಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.