ಹಾಸನ

ರೈತರಿಗೆ ಕೃಷಿ ತಾಂತ್ರಿಕ ಮಾಹಿತಿ ಅಗತ್ಯ: ಜಿಪಂ ಸದಸ್ಯ ಪುರುಷೋತ್ತಮ ಸಲಹೆ

Published On :

ಆಲೂರು: ಕೃಷಿ ಇಲಾಖೆ ವತಿಯಿಂದ ಸಹಾಯಧನದಲ್ಲಿ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ರಾಗಿ, ಬತ್ತ, ಮುಸುಕಿನಜೋಳ ಬಿತ್ತನೆಬೀಜ ವಿತರಿಸುತ್ತಿದ್ದು, ರೈತರು ಇದರ ಸುದಪಯೋಗ ಪಡೆಯಬೇಕೆಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಕೆ.ಬಿ.ಸುಬ್ರಹ್ಮಣ್ಯ ತಿಳಿಸಿದರು.
ಪಟ್ಟಣದ  ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಭೂ ಚೇತನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭೂಚೇತನ ಯೋಜನೆಯಡಿಯಲ್ಲಿ ಶೇಕಡ 50ರ ಸಹಾಯಧನದಲ್ಲಿ ಲಘುಪೋಷಕಾಂಶಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ತಾಂತ್ರಿಕ ಮಾಹಿತಿ: ಜಿಪಂ ಸದಸ್ಯ ಪುರುಷೋತ್ತಮ ಮಾತನಾಡಿ, ದೇಶದ ಪ್ರಗತಿಯಲ್ಲಿ ಕೃಷಿಯ ಮಹತ್ವ ಹಾಗೂ ಮುಂದಿನ ದಿನಗಳಲ್ಲಿ ಬೇಕಾಗುವ ಆಹಾರದ ಬೇಡಿಕೆಯನ್ನು ಮುಂದಿಟ್ಟುಕೊಂಡು ಕೃಷಿಯಲ್ಲಿ ರೈತರು ಸಕ್ರೀಯವಾಗಿ ಪಾಲ್ಗೋಂಡು ಕೃಷಿ ಇಲಾಖೆಯ ಸಂಪರ್ಕದೊಂದಿಗೆ ತಾಂತ್ರಿಕ ಮಾಹಿತಿಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.  ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಹಾಗೂ ಮುಖ್ಯಸ್ಥ  ಡಾ.ಬಸವರಾಜು, ಕೃಷಿ ವಿಜ್ಞಾನ ಕೇಂದ್ರದ  ಮಣ್ಣು ವಿಜ್ಞಾನಿ  ಡಾ.ಚನ್ನಕೇಶವ, ಬೇಸಾಯ ಶಾಸ್ತ್ರ ವಿಭಾಗದ ಡಾ.ಭೈರಪ್ಪ, ಹೆಚ್.ಬಿ.ಮಲ್ಲಪ್ಪ, ತಾಪಂ ಅಧ್ಯಕ್ಷ ಎಸ್.ಸಿ.ಕಾಂತರಾಜು ಮಾತನಾಡಿದರು. ಪಾಳ್ಯ ಹೋಬಳಿಯ ಕೃಷಿ ಅಧಿಕಾರಿ ಪ್ರಸಾದ್ ಮತ್ತು ಆಲೂರು ತಾಲೂಕಿನ ತಾಂತ್ರಿಕ ಅಧಿಕಾರಿ ಎಸ್.ವಿನಯ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.