ಹಾಸನ

ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸುಶೀಲಾ ಸೋಮಶೇಖರ್

Published On :

ಹಾಸನ: ಸಕಲೇಶಪುರದಲ್ಲಿ ಜು. 26 ರಂದು ನಡೆಯಲಿರುವ 2ನೇ ತಾಲೂಕು ಸಮ್ಮೇಳನದ ಅಧ್ಯಕ್ಷರನ್ನಾಗಿ ಕವಯತ್ರಿ, ಲೇಖಕಿ ಸುಶೀಲಾ ಸೋಮಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರ ಪರಿಚಯ:  ಸುಶೀಲಾ ಅವರು 1956ರ ಜೂನ್ 10 ರಂದು ಹಾಸನ ಜಿಲ್ಲೆಯ  ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ಯಲಗುಂದ ಗ್ರಾಮದ ತಮ್ಮಣ್ಣ ಗೌಡ ಮತ್ತು  ನಂಜಮ್ಮ ದಂಪತಿಗಳ ಸುಪುತ್ರಿಯಾಗಿ ಜನಿಸಿದರು.
 ಗದ್ಯ, ಪದ್ಯಗಳೆರಡರಲ್ಲೂ ಸಮಚಿತ್ತವಾಗಿ ಉತ್ಕೃಷ್ಟ ಸಾಹಿತ್ಯ ಸೇವೆಗೈದ ಇವರು, ಹಾಸನ ಜಿಲ್ಲೆಯ ಒಳಗೂ, ಹೊರಗೂ ಸುವಿಖ್ಯಾತರಾಗಿ ಅನೇಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ  ನೀಡಿದ್ದಾರೆ.
ಕೃತಿಗಳು: ನಕ್ಕು ಬಿಡೆ ಗೆಳತಿ - 1998, ಅಂಗಳ ಅನಾಥವಲ್ಲ -2005, ಮಳೆ ಪುರುಷ - 2008 ಕವನ ಸಂಕಲನಗಳು  ವಚನ ಸಂವಹನ - 2006 ಶರಣ ವಚನ ವಿಶ್ಲೇಷಣೆ  ಚಿಗುರು -2009, ನಗುವ ನಕ್ಷತ್ರಗಳು - 2011 ಮಕ್ಕಳ ಕವನ ಸಂಕಲನಗಳು ನುಡಿ ಜ್ಯೋತಿರ್ಲಿಂಗ - 2010 ಚಿಂತನ ಕೃತಿಗಳು ಪ್ರಕಟವಾಗಿವೆ.
 ಸದ್ದಿಲ್ಲದ ನಗು - ಕವನ ಸಂಕಲನ, ನೂರಾರು ಹನಿಗವನಗಳು - ಚುಟುಕು ಸಂಕಲನ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿವೆ.
ಭಾಷಾ ಶಿಕ್ಷಕಿ: ಎಂ.ಎ., ಬಿ.ಇ.ಡಿ. ಪದವಿಧರೆಯಾದ ಇವರು ಕಳೆದ ಮೂರ್ನಾನಾಲ್ಕು ದಶಕಗಳಿಂದ, ಸಕಲೇಶಪುರದ ಶ್ರೀ ಚೇತನ ಪ್ರೌಢಶಾಲೆಯಲ್ಲಿ ಭಾಷಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆ-ಜೊತೆಗೆ ಅಲ್ಲಿಯ ಸಾಹಿತ್ಯ ದ್ರವ್ಯ ಪಸರಿಸಿ ಜಾಗೃತಿ ಮೂಡಿಸಿದ್ದಾರೆ.
 ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಸಕಲೇಶಪುರದ ಅಕ್ಕನ ಬಳಗ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಮುಂತಾದ ಸಂಘಟನೆಗಳಲ್ಲಿ ಅವಿರತವಾಗಿ ದುಡಿದಿದ್ದಾರೆ.
  2007 ರಿಂದ ಹಾಸನ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇವರ ಮಕ್ಕಳ ಕವಿತೆಗಳು, ಚಿಂತನಗಳು, ಲೇಖನಗಳು, ಕಥೆಗಳು ರಾಜ್ಯ ಮಟ್ಟದ  ಪತ್ರಿಕೆಗಳಾದ ಸುಧಾ, ಮಯೂರ, ಪ್ರಿಯಾಂಕ, ಶೈನ್, ಮಂಗಳ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಮಹಾಮನೆ, ಸಿದ್ಧಗಂಗಾ ಶ್ರೀ, ಬಸವ ಮಾರ್ಗ, ಮಾನಸ ಹಾಗೂ ಸ್ಥಳೀಯ ಪತ್ರಿಕೆಗಳಾದ ಜನತಾ ಮಾಧ್ಯಮ, ಜನ ಮಿತ್ರ, ಜನ ಹಿತ, ಬಂಡಾಯ, ಜ್ಞಾನ ದೀಪ, ನಾಡ ಸಹ್ಯಾದ್ರಿ, ಹಾಸನ ಮಿತ್ರ, ಕಲ್ಯಾಣ ಕೋಟೆ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದಿವೆ.
ಪ್ರಶಸ್ತಿ: ಇವರ ಅಂಗಳ ಅನಾಥವಲ್ಲ ಕವನ ಸಂಕಲನಕ್ಕೆ, 2005 ರಲ್ಲಿ  ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, 2006ರಲ್ಲಿ ನೀಲಗಂಗಾ ದತ್ತಿ ಪ್ರಶಸ್ತಿ, 2006ರಲ್ಲಿ ಪಂಡಿತ ಪುಟ್ಟರಾಜ ಸಾಹಿತ್ಯ ಪ್ರಶಸ್ತಿಗಳು ದೊರಕಿವೆ.
 ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ 2002ರಲ್ಲಿ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, 2008ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, 2011ರಲ್ಲಿ ಜಿಲ್ಲಾ ಶಿಕ್ಷಕ ರತ್ನ ಪ್ರಶಸ್ತಿಗಳು ಸಂದಿವೆ. ಇವರ ಮಳೆ ಪುರುಷ ಕವನ ಸಂಕಲನಕ್ಕೆ 2010ರಲ್ಲಿ ಕಾವ್ಯ ಶ್ರೀ ಪ್ರಶಸ್ತಿ  ನುಡಿ ಜ್ಯೋತಿಲಿಂಗ ಕೃತಿಗೆ 2010ರ ಅಡ್ವೈಸರ್ ಪತ್ರಿಕೆ ಕೊಡಮಾಡುವ ಮಹಿಳಾ ಪ್ರಶಸ್ತಿ  ನಗುವ ನಕ್ಷತ್ರಗಳು ಕೃತಿಗೆ 2012ರ ಗುಣಸಾಗರಿ ನಾಗರಾಜ್ ದತ್ತಿ ಬಹುಮಾನ, ಇವರ ಸಮಗ್ರ ಸಾಹಿತ್ಯ ಸೇವೆಗಾಗಿ 2005ರಲ್ಲಿ ಸಿದ್ದಯ್ಯ ಪುರಾಣಿಕ ಪ್ರಶಸ್ತಿ, 2005ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಇವರ ಚಿಂತನ ಬರಹಕ್ಕೆ ಕೇಸರಿ ರತ್ನ ರಾಜಕೇಸರಿ ರತ್ನ ರಾಜಯ್ಯ ದತ್ತಿನಿಧಿ ಪ್ರಶಸ್ತಿಗಳು ಸಂದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.