28 ಕಳ್ಳರ ಬಂಧನ: ರು. 82.85 ಲಕ್ಷ ಮೌಲ್ಯದ ವಸ್ತುಗಳ ವಶ
ಕನ್ನಡಪ್ರಭ ವಾರ್ತೆ ್ಣ ಹಾಸನ ್ಣ ಜು.25
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆದ 33 ಅಪರಾಧ ಪ್ರಕರಣಗಳಲ್ಲಿ 28 ಆರೋಪಿಗಳನ್ನು ಬಂಧಿಸಿ, 82.85 ಲಕ್ಷ ರು. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.
ಎಲ್ಲಾ ಪ್ರಕರಣಗಳಿಂದ ಸುಮಾರು 1 ಕೆ.ಜಿ. 17 ಗ್ರಾಂ ಚಿನ್ನ, 400 ಗ್ರಾಂ. ಬೆಳ್ಳಿ, 3 ಲಾರಿಗಳು, ಒಂದು ಟೆಂಪೋ ಟ್ರಾವೆಲರ್, ಏಳು ದ್ವಿಚಕ್ರ ವಾಹನಗಳು ಹಾಗೂ 9 ಲಕ್ಷ ರು. ಮೌಲ್ಯದ ಮೆಣಸನ್ನು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ರವಿ ದ್ಯಾಮಪ್ಪ ಚನ್ನಣ್ಣನವರ ಪ್ರಕರಣಗಳ ಬಗ್ಗೆ ವಿವರಿಸಿದ್ದು ಹೀಗೆ.
ರು. 30 ಲಕ್ಷ ಮೌಲ್ಯ: ಚನ್ನರಾಯಪಟ್ಟಣ ವೃತ್ತ ಪೊಲೀಸರಿಂದ ಅಂತರ ಜಿಲ್ಲಾ ಸುಲಿಗೆ ಕೋರರ ಬಂಧಿಸಿದ್ದು, ಒಟ್ಟು 30 ಲಕ್ಷ ರು. ಮೌಲ್ಯದ ಸ್ವತ್ತುಗಳ ವಶಪಡಿಸಿಕೊಳ್ಳಲಾಗಿದೆ.
ಹಾಸನ ಜಿಲ್ಲೆಯೂ ಸೇರಿದಂತೆ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದಾಖಲಾಗಿರುವ ಸುಲಿಗೆ ಪ್ರಕರಣಗಳನ್ನು ಬೇಧಿಸಿ, ಆರೋಪಿಗಳಾದ ಕುಶಾಂತ್, ಸಿದ್ದೇಶ್ ಮತ್ತು ದಿನೇಶ್ ಎಂಬವರನ್ನು ಬಂಧಿಸಲಾಗಿದೆ, ಬಂಧಿತರಿಂದ 25.43 ಲಕ್ಷ ರು. ಮೌಲ್ಯದ 710 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು 13 ಸುಲಿಗೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಚನ್ನರಾಯಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಳಿ ಬಣ್ಣದ ಟೆಂಪೋ ಟ್ರಾವೆಲರ್ ಒಂದು ಚನ್ನರಾಯಪಟ್ಟಣ, ಹಾಸನ ಎಂದು ಕೂಗುತ್ತಿದ್ದಾಗ ಶಿಕ್ಷಕಿ ಸತ್ಯಭಾಮ ಎಂಬುವರು ಟೆಂಪೋ ಟ್ರಾವೆಲರ್ನಲ್ಲಿ ಪ್ರಯಾಣಿಸುತ್ತಿರುವುವಾಗ ಅವರಿಂದ 2 ಸರ ಮತ್ತು 2 ಬಳೆಗಳನ್ನು ಕಿತ್ತುಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಟಿ ಕಲ್ಯಾಣ ಮಂಟಪಗಳಲ್ಲಿ ಕಳವು
ಚನ್ನರಾಯಪಟ್ಟಣದ ನಗರ ಠಾಣಾ ಸರಹದ್ದಿನಲ್ಲಿ ಮನೆಗಳ್ಳತನ, ಸುಲಿಗೆ ಮತ್ತು ಕಲ್ಯಾಣ ಮಂಟಪದಲ್ಲಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಇರ್ಫಾನ್, ಮುನಾಸಿಫ್, ಸಂತೋಷ ಗುರುಪ್ರಸಾದ್ನನ್ನು ಬಂಧಿಸಿ, 4.57 ಲಕ್ಷ ರು. ಮೌಲ್ಯದ 172 ಗ್ರಾಂ ಚಿನ್ನದ ಒಡವೆಗಳು ಹಾಗೂ 400 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಟಿ ದ್ವಿಚಕ್ರ ವಾಹನಗಳ್ಳರು
ಹಾಸನ ನಗರ ವೃತ್ತದಲ್ಲಿ ನಡೆದ ನಾನಾ ಪ್ರಕರಣಗಳಲ್ಲಿ ಐವರನ್ನು ಬಂಧಿಸಿ, 5.20 ಲಕ್ಷ ರು. ಮೌಲ್ಯದ ಒಂದು ಕ್ಯಾಂಟರ್, 4 ದ್ವಿಚಕ್ರ ವಾಹನಗಳು, ಸುಮಾರು 15 ಗ್ರಾಂ ಚಿನ್ನಾಭರಣಗಳು, ಹಾಗೂ ಒಂದು ಗ್ಯಾಸ್ ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ. ಮನೆ ಕಳವು ಪ್ರಕರಣಗಳಲ್ಲಿ ಚಿನ್ನಾಭರಣ ದೋಚಿದ ಆರೋಪಿಗಳನ್ನು ದುದ್ದ ಠಾಣಾ ಪೊಲೀಸರು ಬಂಧಿಸಿದ್ದು, 5.60 ಲಕ್ಷ ರು. ಮೌಲ್ಯದ 171.100 ಗ್ರಾಂ ಚಿನ್ನಾಭರಣ ಹಾಗೂ 4 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಸನ ಗ್ರಾಮಾಂತರ ಹಾಗೂ ದುದ್ದ ಠಾಣೆಗಳ ವ್ಯಾಪ್ತಿಗಳಲ್ಲಿ ದಾಖಲಾದ ಹಗಲು ಮತ್ತು ರಾತ್ರಿ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿವ, ಕರಿಯಪ್ಪ ಅವರನ್ನು ಬಂಧಿಸಿದ್ದು, ವಾಹನ ಕಳ್ಳತನ ಆರೋಪಿ ಎಂ.ಡಿ.ಮಂಜುನಾಥಸ್ವಾಮಿನನ್ನು ಬಂಧಿಸಿ, ಈತನಿಂದ ಕಳವು 1 ಲಕ್ಷ ರು. ಬೆಲೆ ಬಾಳುವ 4 ಮೋಟಾರ್ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಟಿ ಕೊಲೆ ಆರೋಪಿ ಬಂಧನ
ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮುನಿಯಮ್ಮನ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಅಜಿತ್, ಮಲ್ಲಿಕಾರ್ಜುನ ಅವರನ್ನು ಬಂಧಿಸಿದ್ದು, ಅವರಿಂದ 60 ಸಾವಿರ ರು. ಮೌಲ್ಯದ 20 ಗ್ರಾಂ ಬಂಗಾರದ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಟಿ ಕಳ್ಳಿ ಬಂಧನ
ಹಳೇಬೀಡು ಮತ್ತು ಬೇಲೂರು ಠಾಣೆಗಳಲ್ಲಿ ದಾಖಲಾದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಕೆಸರೆಯ ಸುಮಿತ್ರ ಉರುಫ್ ಯಶೋಧ ಅವರಿಂದ 70 ಸಾವಿರ ರು. ಬೆಲೆಬಾಳುವ 28 ಗ್ರಾಂ ಚಿನ್ನದ ಗಟ್ಟಿ ಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಮುನಾವರ್ ಅಲಿಯಾಸ್ ತುಮಕೂರಿ ಮತ್ತು ಅಸ್ಕರ್ನನ್ನು ಬಂಧಿಸಿ, 30.70 ಲಕ್ಷ ರು. ಮೌಲ್ಯದ 3 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಟಿ ಜಾತ್ರೆ ಕಳ್ಳಿಯರ ಬಂಧನ
ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಾದ ಸರಸ್ವತಿ, ಶೋಭಾ ಅವರನ್ನು ಬಂಧಿಸಿ, 1,75 ಲಕ್ಷ ರು. ಬೆಲೆ ಬಾಳುವ 73 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಜಾತ್ರೆ ಮತ್ತು ಹಬ್ಬಹರಿದಿನಗಳಲ್ಲಿ ಮಕ್ಕಳಿಂದ ಚಿನ್ನಾಭರಣ ಆಪಹರಿಸುತ್ತಿದ್ದರು.
ಟಿ ಮೆಣಸು ಕಳ್ಳರ ಬಂಧನ
ಸಕಲೇಶಪುರ ಸಿಪಿಐ ಗುರುರಾಜ್ ಅವರ ನೇತೃತ್ವದಲ್ಲಿ ಪಿಎಸ್ಐ ಜೀವನ್ ಮತ್ತು ಸಿಬ್ಬಂದಿ ಗುರುಗಳಲೆ ಎಸ್ಟೇಟ್ನಲ್ಲಿ ನುಗ್ಗಿ ವಾಚ್ಮನ್ ಕಟ್ಟಿಹಾಕಿ ಮೆಣಸನ್ನು ಡಕಾಯಿತಿ ಮಾಡಿದ್ದ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 9 ಲಕ್ಷ ರು. ಮೌಲ್ಯದ ಮೆಣಸನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಶ್ರಮಿಸಿದ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಯ ಕಾರ್ಯದಕ್ಷತೆಯನ್ನು ಎಸ್ಪಿ ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಜೈನಹಳ್ಳಿ ರಶ್ಮಿ ಶಂಕರೇಗೌಡ, ಹೊಳೆನರಸೀಪುರ ವಿಭಾಗ ಡಿವೈಎಸ್ಪಿ ವಿನಾಯಕ ಪಾಟೀಲ್, ಸಕಲೇಶಪುರ ಡಿವೈಎಸ್ಪಿ ಸ್ನೇಹ, ಹಾಸನ ಭೀಮಕ್ಕನವರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

