ಹಾಸನ

ತಹಸೀಲ್ದಾರ್ ವಾಹನಕ್ಕೆ ಸಂಚಾರಿ ನಿಯಮ ಅನ್ವಯವಾಗೋದಿಲ್ವೇ?

Published On :

ಹೊಳೆನರಸೀಪುರ: ಸಂಚಾರಿ ನಿಯಮಗಳು ಸಾರ್ವಜನಿಕರಿಗೆ ಮತ್ತು ಅವರ ವಾಹನಗಳಿಗೆ ಮಾತ್ರವೇ ಅನ್ವಯಿಸುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಅದರಲ್ಲಿಯೂ ತಾಲೂಕು ದಂಡಾಧಿಕಾರಿಗಳ ವಾಹನಕ್ಕೆ ಸಂಚಾರಿ ನಿಯಮ ಅನ್ವಯಿಸುವುದಿಲ್ಲವೇನೋ ಎನ್ನುವಂತೆ ತಹಸೀಲ್ದಾರ್ ವಾಹನವನ್ನು ಪಟ್ಟಣದಲ್ಲಿನ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಲಾಗಿತ್ತು.
 ಪಟ್ಟಣದಲ್ಲಿನ ಪೇಟೆ ಮುಖ್ಯ ರಸ್ತೆಯಲ್ಲಿ ಶುಕ್ರವಾರದಂದು ಸಂಜೆ ವೇಳೆ ತಹಸೀಲ್ದಾರರ ಸರ್ಕಾರಿ ವಾಹನವನ್ನು ರಸ್ತೆಯ ನೋ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ನಿಲ್ಲಿಸಲಾಗಿತ್ತು. ಇನ್ನೊಂದು ಬದಿಯಲ್ಲಿ ವಾಹನಗಳ ಪಾರ್ಕಿಗ್ ಇದ್ದ ಕಾರಣ ಈ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಸಾರ್ವಜನಿಕರ ವಾಹನಗಳಿಗೆ ತೊಂದರೆಯಾಗುತ್ತಿತ್ತು. ಆದರೆ ಸಂಜೆಯ ತಹಸೀಲ್ದಾರರ ವಾಹನವನ್ನು ತೆರವುಗೊಳಿಸಲು ಪೊಲೀಸರು ಮುಂದಾಗಲಿಲ್ಲ. ಸಂಚಾರಿ ನಿಯಮವನ್ನು ಸಾರ್ವಜನಿಕರು ಉಲ್ಲಂಘಿಸಿದರೆ ಕಾನೂನಿನ ಪಾಠ ಹೇಳಿ, ಮುಂದುವರೆದು ಸಣ್ಣ ಪ್ರಮಾಣದ ದಂಡವನ್ನಾದರೂ ವಿಧಿಸುವ ಪೊಲೀಸರ ಕಣ್ಣಿಗೆ ತಹಸೀಲ್ದಾರರ ವಾಹನ ಮಾತ್ರ ಕಾಣಿಸಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.