ಹಾಸನ

ಪ್ರಗತಿಗೆ ವೈಜ್ಞಾನಿಕ ದೃಷ್ಟಿಕೋನ ಅಗತ್ಯ: ಎಚ್.ಟಿ.ಗುರುರಾಜು

Published On :

ಹಾಸನ: ಪ್ರಗತಿ ಸಾಧಿಸಲು ಮೊದಲು ವೈಜ್ಞಾನಿಕ ದೃಷ್ಟಿಕೋನ ಹಾಗೂ ವೈಚಾರಿಕ ಚಿಂತನೆಯ ಅಗತ್ಯ ಇದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಟಿ. ಗುರುರಾಜು ಅಭಿಪ್ರಾಯಪಟ್ಟರು. ಇತ್ತೀಚೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಮತ ಸಮಿತಿಯು ಆಯೋಜಿಸಿದ್ದ ವಿಶ್ವ ಚಂದ್ರನ ದಿನದಲ್ಲಿ ನಾವು-ನೀವು ಕಾರ್ಯಕ್ರಮದ ಪ್ರಸ್ತಾವನೆ ಮಾಡಿ ವಿಷಯಗಳನ್ನು ತಿಳಿಸಿದರು. ಮಾನವನೊಂದಿಗೆ ಚಂದ್ರನ ಭಾವನಾತ್ಮಕ ಹಾಗೂ ವಿಕಾಸದ ಸಂಬಂಧ ಬೆಸೆದ ಕಾರಣ ಚಂದ್ರಲೋಕ ಯಾತ್ರೆ ಸಾಫಲ್ಯವಾಗಿ ಪಾದವೂರಿದ ಆ ನೆನಪಿನಲ್ಲಿ  ವೈಜ್ಞಾನಿಕವಾಗಿ ಅರಿಯುವ ನಿಟ್ಟಿನಲ್ಲಿ ನಾವು-ನೀವು ಸಹಕಾರಿಯಾಗಲಿದೆ ಎಂದರು.
ವಿವರಣೆ: ಚಂದ್ರನಮೇಲೆ ಮೊದಲು ಪಾದವೂರಿದ ಗಗನಯಾನಿಗಳ ಚಿತ್ರ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನಗರದ ವಾಸ್ತುಶಿಲ್ಪಿ ಎಚ್.ಎಸ್. ದೇವೇಂದ್ರ ಮಾತನಾಡಿ ಚಂದ್ರ ಭೂಮಿಯ ನೆರೆಯ ಉಪಗ್ರಹ ಆ ಚಂದ್ರನ ಮತ್ತು ಭೂಮಿಯ ಗುರುತ್ವಾಕರ್ಷಣ ಬಲದಿಂದಲೇ ಭೂಮಿ ಜೀವವಿಕಾಸದ ತಾಣವಾಗಿದೆ ಎಂದರು. ಇದೇ ಸಂದರ್ಭದಲ್ಲಿ ರೂಪಹಾಸನ ಬರೆದ ಮಹಿಳೆಗೆ ಹಕ್ಕುಗಳೇನೋ ಇವೆ ಆದರೆ ಎಂಬ ಪುಸ್ತಕವನ್ನು ಮಹಿಳಾ ಪರ ಹೋರಾಟಗಾರ್ತಿಯರು ಬಿಡುಗಡೆ ಮಾಡಿದರು.  ವೈಜ್ಞಾನಿಕ ಜ್ಞಾನ: ಪುಸ್ತಕ ಕುರಿತು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ನವೀನ್ ಕುಮಾರ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ  ಸಮತ ಜಿಲ್ಲಾ ಸಂಚಾಲಕಿ ಮಮತ ಶಿವು ಮಾತನಾಡಿ, ಮಹಿಳೆಯರಿಗೆ ವೈಜ್ಞಾನಿಕ ಜ್ಞಾನದ ಕೊರತೆ ಅಧಿಕ. ಹಾಗಾಗಿ ಮಹಿಳೆಯರಿಗೆ ವೈಜ್ಞಾನಿಕ ಜ್ಞಾನದ ಅರಿವಿಗೆ ಆದ್ಯತೆ ನೀಡಬೇಕಾಗಿದೆ ಎಂದರು. ಚಂದ್ರ ಮತ್ತು ಸಂಸ್ಕೃತಿ ಕುರಿತು ಸಂಪನ್ಮೂಲ ವ್ಯಕ್ತಿ ಅಹಮದ್ ಪಿ.ಟಿ. ವಿವರಣೆ ನೀಡಿದರು. ಸಮತ ಉಪಸಮಿತಿ ಸದಸ್ಯೆ ಹಂಸ ಕಾರ್ಯಕ್ರಮ ನಿರೂಪಿಸಿ, ಆಲೂರು ತಾಲೂಕು ಬಿಜಿವಿಎಸ್ ಸಹಕಾರ್ಯದರ್ಶಿ ಮೈಮುನ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.