ಸೇನಾ ನೇಮಕಕ್ಕೆ ರ್ಯಾಲಿ 5ರಿಂದ
ಹಾಸನ: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ವಿದ್ಯಾಗಿರಿ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅನುದಾನದಲ್ಲಿ ಆಗಸ್ಟ್ 5ರಿಂದ 8ರ ವರೆಗೆ ಭಾರತೀಯ ಸೇನಾ ಪಡೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ, ಟಿಕ್ನಿಕಲ್, ಕ್ಲರಿಕಲ್, ಎಸ್ಕೆಟಿ, ಟ್ರೇಡ್ಮೆನ್ ಹುದ್ದೆಗಳ ನೇಮಕಾತಿ ರ್ಯಾಲಿ ನಡೆಯಲಿದೆ. ಹಾಸನ ಜಿಲ್ಲೆಯ ಅಭ್ಯರ್ಥಿಗಳಿಗೆ ಆ. 5ರಂದು ಸೋಲ್ಜರ್ ಕ್ಲರ್ಕ್ ಎಸ್ಕೆಟಿ ಹಾಗೂ ಆ. 10ರಂದು ಸೋಲ್ಜರ್ ಟ್ರೆಡ್ಮೆನ್, 11ರಂದು ಸೋಲ್ಜರ್ ಜನರಲ್ ಡ್ಯೂಟಿಗೆ ನೇಮಕಾತಿ ರ್ಯಾಲಿ ನಡೆಯಲಿದೆ. 8ನೇ ತರಗತಿ ಪಾಸ್, ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವೀಧರರು (ವಯೋವುತಿ 17ರಿಂದ 21 ವರ್ಷ ಮತ್ತು 17ರಿಂದ 23ವರ್ಷ) ಅರ್ಹ ನಿರುದ್ಯೋಗಿ ಯುವಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ 08172-268374 ಸಂಪರ್ಕಿಸಿ ಮಾಹಿತಿ ಪಡೆಯಲು ಜಿಲ್ಲಾ ಉದ್ಯೋಗಾಧಿಕಾರಿ ಜೆ.ಬಿ. ವಿಜಯಲಕ್ಷ್ಮಿ ಕೋರಿದ್ದಾರೆ.
ಕರವೇ ಅಸಮಾಧಾನ
ಆಲೂರು: ತಾಲೂಕಿನ ಎಸ್ಬಿಎಂ ವ್ಯವಸ್ಥಾಪಕರು ಸಾರ್ವಜನಿಕರೊಡನೆ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಕರ ವೇ ತಾಲೂಕು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾಂಕಿಗೆ ಬರುವಂತಹ ರೈತರೊಂದಿಗೆ, ವಿದ್ಯಾರ್ಥಿಗಳೊಂದಿಗೆ, ವೃದ್ಧರೊಂದಿಗೆ, ಅವಿದ್ಯಾವಂತರೊಂದಿಗೆ ಸರಿಯಾಗಿ ವರ್ತಿಸದೇ, ಅವರಿಗೆ ಮಾಹಿತಿಗಳನ್ನು ನೀಡದೆ ನಿರ್ಲಕ್ಷ್ಯತೆಯಿಂದ ವರ್ತಿಸುತ್ತಿದ್ದಾರೆ. ಆದ್ದರಿಂದ ವ್ಯವಸ್ಥಾಪಕರನ್ನು ಬದಲಿಸಬೇಕು. ಇಲ್ಲವಾದರೆ ಹೋರಾಟ ಕೈಗೊಳ್ಳುವುದಾಗಿ ತಾಲೂಕು ಕರವೇ ಅಧ್ಯಕ್ಷ ನಟರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

