ಅಮೂರ್ತದ ಮೂರ್ತೀಕರಣವೇ ಪ್ರತಿಮೆ
ಕನ್ನಡಪ್ರಭ ವಾರ್ತೆ, ಹಾಸನ ಜೂನ್ 3
ಅಮೂರ್ತ ಭಾವದ ಮೂರ್ತೀಕರಣದ ಪ್ರಯತ್ನವೇ ಪ್ರತಿಮಾ ವಿಧಾನ. ಇದು ಕಾವ್ಯಕ್ಕೆ ಸಂಕ್ಷಿಪ್ತತೆಯನ್ನು, ಸನ್ನಿವೇಶದ ಚಿತ್ರಣವನ್ನು ತಂದು ಕೊಡುತ್ತದೆ ಎಂದು ಸಾಹಿತಿ ಚಂದ್ರಕಾಂತ ಪಡೆಸೂರ ಹೇಳಿದರು.
ನಗರದ ಅಗ್ರಹಾರದ ಕಾಮಧೇನು ನಿಲಯದಲ್ಲಿ ಸುಕನ್ಯಾ ಮುಕುಂದ ಅವರ ಪ್ರಾಯೋಜಕತ್ವದಲ್ಲಿ ನಡೆದ 207 ನೇ ಮನೆಮನೆ ಕವಿಗೋಷ್ಠಿಯಲ್ಲಿ ಅವರು 'ಕನ್ನಡ ಕಾವ್ಯದಲ್ಲಿ ಪ್ರತಿಮಾ ವಿಧಾನ'ದ ಬಗ್ಗೆ ಉಪನ್ಯಾಸ ನೀಡಿದರು.
ಸಾಮಾನ್ಯ ಮನುಷ್ಯನ ಭಾವಕ್ಕೆ ನಿಲುಕಲಾರದ ತತ್ತ್ವ ಅಥವಾ ವಿಚಾರಗಳ ದೃಶ್ಯೀಕರಣವೇ ಪ್ರತಿಮಾ ವಿಧಾನ. ಈ ಹಿನ್ನಲೆಯಲ್ಲಯೇ ಶಿವ, ವಿಷ್ಣು, ಕೃಷ್ಣ, ರಾಮ ಮುಂತಾದ ದೇವರುಗಳ ಮೂರ್ತರೂಪ ಬಂದಿದೆ. ವಿಶ್ವ ವ್ಯಾಪಕವಾದ ದೈವತ್ವವನ್ನು ಮೂರ್ತೀಕರಿಸುವ ಈ ವಿಧಾನ ಸಾಹಿತ್ಯ ಪರಂಪರೆಯಲ್ಲಿಯೂ ಭಾವಗಳ ಮೂರ್ತೀಕರಣದಲ್ಲಿ ಅಳವಡಿಕೆಯಾಯಿತು ಎಂದರು. ನಾ ಮೆಚ್ಚಿದ ಕವಿತೆ ಎಂಬ ವಿಷಯದ ಬಗ್ಗೆ ಹಿರಿಯ ಸಾಹಿತಿ ಜ. ಹೊ. ನಾರಾಯಣಸ್ವಾಮಿ ಮಾತನಾಡಿ, ಕುವೆಂಪು ಅವರ ರಸೋವೈಸ-ಹಾಗೂ ರಸೋ ಸಿದ್ಧಿ ಎಂಬ ಸುನೀತ ಪದ್ಯಗಳನ್ನು ವಾಚಿಸಿ ವಿಶ್ಲೇಷಣೆ ನೀಡಿ ಕವಿತೆಯಲ್ಲಿ ರಸ ಸಿದ್ದಿಗಳ ಬಗ್ಗೆ ತಿಳಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್, ಭೈರಪ್ಪಾಜಿ, ಮುಕುಂದ, ಡಾ. ಕೆ.ಕೆ. ಜಯಚಂದ್ರಗುಪ್ತ, ಎನ್.ಎಲ್. ಚನ್ನೇಗೌಡ, ಪ್ರೊ. ನಾರಾಯಣ ಪ್ರಸಾದ್, ಸಿಂಧುಶ್ರೀ, ಪ್ರೊ. ಸೈಯದ್ ಶಹಬುದ್ದೀನ್, ಬಿ. ವೇದವತಿ, ಶ್ರೀ ವಿಜಯ ಹಾಸನ, ಸುಕನ್ಯಾ ಮುಕುಂದ, ಸಮುದ್ರವಳ್ಳಿ ವಾಸು, ಸುರೇಶ್ ಗುರೂಜಿ, ಲಲಿತ. ಎಸ್. ಚೂಡಾಮಣಿ, ದ್ಯಾವನೂರು ಮಂಜುನಾಥ, ಚಂದ್ರಕಾಂತ ಪಡೆಸೂರ ಮುಂತಾದವರು ಕಾವ್ಯವಾಚನ ಮಾಡಿದರು.
ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಲೀಲಾವತಿ, ಸಾ. ನಂ. ನಾಗರಾಜು, ಹೊನ್ನವಳ್ಳಿ ಕೃಷ್ಣಮೂರ್ತಿ ಇತರರು ಇದ್ದರು. ಸಿಂಧುಶ್ರೀ ಎಂ. ಆತ್ರೇಯ ಪ್ರಾರ್ಥಿಸಿದರು, ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

