ಪರಿಸರ ಚಕ್ರ ಹಾಳು ಮಾಡುತ್ತಿರುವ ಮಾನವನಿಗೆ ದುಷ್ಪರಿಣಾಮ ಸನ್ನಿಹಿತ
ಹಾಸನ: ಪರಿಸರದ ಚಕ್ರ ಹಾಳು ಮಾಡುತ್ತಿರುವ ಮನುಷ್ಯನಿಗೆ, ಅದರ ದುಷ್ಪರಿಣಾಮವನ್ನು ಹೆದರಿಸುವ ದಿನಗಳು ದೂರವಿಲ್ಲ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ತಿಳಿಸಿದರು.
ಶಾಂತಿನಗರ ಘಟಕದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಬಾಲ ವಿಜ್ಞಾನಿ ಮಾಸಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಮಿ ಸುತ್ತಲಿನ ಪರಿಸರ ಸಮತೋಲನಕ್ಕೆ ವಾತವರಣದಲ್ಲಿ ಹಲವು ಚಕ್ರಗಳಾದ ಇಂಗಾಲ, ಆಮ್ಲಜನಕ, ಸಾರಜನಕ ಕಾರಣವಾಗಿರುತ್ತದೆ. ಆದರೆ, ಮನುಷ್ಯನ ದುರಾಸೆಗೆ ಪರಿಸರದಲ್ಲಿ ಏರುಪೇರಾಗಿ ಭೂಮಿ ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದರು.
ಈ ಮಾಸಿಕದ ಬಾಲ ವಿಜ್ಞಾನಿ ಕಾರ್ಯಕ್ರಮದಲ್ಲಿ ಘಟಕದ ಉದ್ಯಾನದಲ್ಲಿ ಪ್ರೌಢಶಾಲೆ ಮಕ್ಕಳಿಗೆ ಪರಿಸರಕ್ಕೆ ಸಂಬಂಧಿಸಿದ ಹಲವು ಚಟುವಟಿಕೆಗಳಾದ ಎಲೆಗಳ ವಿಸ್ತೀರ್ಣ, ಅಳತೆ ಮಾಡುವುದು, ಮರದ ಎತ್ತರ ಅಳೆಯುವುದು, ವಾಯು ಮಾಲಿನ್ಯ ಕೇಂದ್ರೀಕೃತ ಪ್ರದೇಶವನ್ನು, ಮಣ್ಣಿನ ಪದರವನ್ನು ಕಂಡುಹಿಡಿಯುವುದು, ಹೀಗೆ ಹಲವು ಬಗೆಯ ಪರಿಸರ ಪ್ರಯೋಗಗಳನ್ನು ನಡೆಸಿಕೊಟ್ಟರು.
ಈ ಚಟುವಟಿಕೆಗಳಲ್ಲಿ ಶಾಂತಿನಗರದ ಹಲವು ಪ್ರೌಡಶಾಲೆ ಮಕ್ಕಳು ಭಾಗವಹಿಸಿದ್ದರು, ಮುಂದಿನ ಬಾಲ ವಿಜ್ಞಾನಿ ಕಾರ್ಯಕ್ರಮವನ್ನು ಜೂನ್ 29 ರಂದು ನಡೆಸಲಾಗುವುದು ಎಂದು ಘಟಕದ ಕಾರ್ಯದರ್ಶಿ ವೇದಶ್ರೀರಾಡ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

