ಅಧಿಕಾರಿಗಳ ಕಿರುಕುಳ ಖಂಡಿಸಿ ಬಸ್ ಚಾಲಕ, ನಿರ್ವಾಹಕರ ಪ್ರತಿಭಟನೆ
ಸಕಲೇಶಪುರ: ಅಧಿಕಾರಿಗಳು ನಿರಂತರ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಸ್ಥಳೀಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರು ಘಟಕದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಇಲ್ಲಿನ ಅಧಿಕಾರಿಗಳು ಸಿಬ್ಬಂದಿಯನ್ನು ಶೋಷಿಸುತ್ತಿದ್ದು ಪ್ರತಿಯೊಂದು ಹಂತದಲ್ಲೂ ಹಣ ನೀಡಬೇಕಾಗಿರುವುದರಿಂದ ಘಟಕದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ತೀರ ಕಳಪೆ ಬಸ್ಗಳನ್ನು ನೀಡುವುದರಿಂದಾಗಿ ಬಸ್ಗಳು ಅಲ್ಲಲ್ಲೆ ಕೆಟ್ಟು ನಿಲ್ಲುತ್ತಿದ್ದು ಬಸ್ಗಳು ಕೆಟ್ಟು ನಿಂತರೂ ಚಾಲಕರು ದಂಡ ತೆರಬೇಕಾಗಿದೆ ಎಂದು ದೂರಿದರು.
ಕೆಲಸಕ್ಕೆ ನಿಮಿಷಗಳ ಕಾಲ ತಡವಾಗಿ ಬಂದರು ಘಟಕದ ಗೇಟ್ನಿಂದ ಹೊರದಬ್ಬವ ಅಧಿಕಾರಿಗಳು, ನಿರಂಕುಶ ಪ್ರಭುಗಳಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪ್ರತಿಭಟನೆ ನೆಡೆಯುವ ಮಾಹಿತಿ ತಿಳಿದು ಘಟಕದ ವ್ಯವಸ್ಥಾಪಕ ನಟರಾಡ್ ಸ್ಥಳದಿಂದ ಕಾಲ್ಕಿತ್ತಿದ್ದರು. ಆದರೆ ಘಟಕದ ವ್ಯವಸ್ಥಾಪಕರು ಸೇರಿದಂತೆ ಘಟಕದ ಅಧಿಕಾರಿಗಳಾದ ಎಟಿಎಸ್ಬಿಟಿ ಕುಮಾರ್, ಟ್ರಾಫಿಕ್ ಇನ್ಸಪೆಕ್ಟರ್ ಸ್ವಾಮಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಘಟಕದಿಂದ ವರ್ಗ ಮಾಡಬೇಕು ತಪ್ಪಿದಲ್ಲಿ ಘಟಕವನ್ನೇ ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಶಿವಕುಮಾರ, ದೂಳಪ್ಪ, ಸೋಮೇಗೌಡ, ಸೋಮಶೇಖರ್, ರಂಗೇಶ್, ಕೇಶವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

