ಹಾಸನ

ಅಂಗನವಾಡಿ ಕಟ್ಟಡ ಬಿರುಕು ಮಕ್ಕಳ ಜೀವಕ್ಕಿಲ್ಲ ರಕ್ಷಣೆ

Published On :

ಕ.ಪ್ರ.ವಾರ್ತೆ ೤ ಜಾವಗಲ್ ೤ ಜೂ 8
ಜಾವಗಲ್ನ ಜನತಾ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರದ ಕಟ್ಟಡವು ಬಿರುಕುಬಿಟ್ಟಿದ್ದು, ಮಕ್ಕಳು ಆತಂಕ ಸ್ಥಿತಿಯಲ್ಲಿ ಆಟಪಾಠ ಕಲಿಯುವಂತಾಗಿದೆ.
2007-08ನೇ ಸಾಲಿನಲ್ಲಿ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಅಂದಾಜು 3.7ಲಕ್ಷ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣಮಾಡಿದ್ದು ಗೋಡೆಯ ಒಂದು ಬದಿಯಲ್ಲಿ ಬಿರುಕು ಬಿಟ್ಟಿದ್ದು ವಿಷಜಂತುಗಳು ಒಳಗೆ ಸೇರುವ ಭಯ ಕಾಡುತ್ತಿದೆ.
ಬಾಗಿಲಿಗೆ ಬೋಲ್ಟ್ ಇಲ್ಲ: ಅಡುಗೆ ಕೊಠಡಿ, ದಾಸ್ತಾನುಕೊಠಡಿಗಳನ್ನು ನಿರ್ಮಿಸಿದ್ದರೂ ಇದುವರೆಗೂ ಬಾಗಿಲುಗಳನ್ನು ಜೋಡಿಸಿಲ್ಲ. ಕಿಟಕಿಗಳಿದ್ದರೂ ಕಿಟಕಿ ಬಾಗಿಲುಗಳಿಗೆ ಒಳಭಾಗದಲ್ಲಿ ಬೋಲ್ಟ್ಗಳನ್ನು ಹಾಕದಿರುವುದರಿಂದ ಗಾಳಿಗೆ ಕಿಟಕಿಬಾಗಿಲುಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಅಂಗನವಾಡಿ ಸಹಾಯಕಿ ಚಂದ್ರಮ್ಮ ತಿಳಿಸಿದರು.  
 ಕಟ್ಟಡದ ಪಕ್ಕದಲ್ಲಿ ಇತ್ತೀಚೆಗೆ ನೆಲಮಟ್ಟದಲ್ಲಿ ನೀರು ಸಂಗ್ರಹಣ ತೊಟ್ಟಿ (ಸಂಪು) ನಿರ್ಮಾಣಮಾಡಿದ್ದು ಚಾವಣಿ ಹಾಕದೇ ಇರುವುದರಿಂದ ಪುಟಾಣಿಗಳು ಆಟವಾಡಲು ಹೋದಾಗ ಏನಾದರು ಅನಾಹುತ ಮಾಡಿಕೊಳ್ಳಬಹುದೆಂಬ ಆತಂಕ ಪೋಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಮನೆಮಾಡಿದೆ.  ಹಾಲಿ 20 ಮಕ್ಕಳು ಕೇಂದ್ರಕ್ಕೆ ಬರುತ್ತಿದ್ದು, ಮಕ್ಕಳಿಗೆ ಪಾಠಮಾಡುವ ವೇಳೆಯಲ್ಲಿ ವಿಷಜಂತುಗಳು ಒಳಕ್ಕೆ ಬರಬಹುದೆಂಬ ಭಯಉಂಟಾಗುತ್ತಿದ್ದು ಈ ವೇಳೆಯಲ್ಲಿ ಬಿರುಕು ಬಿಟ್ಟಿರುವ ಜಾಗದಲ್ಲಿ ರಟ್ಟು ಮತ್ತು ಪೇಪರ್ಗಳಿಂದ ಮುಚ್ಚಲಾಗುತ್ತಿದೆ.
ಸೌಲಭ್ಯ ಕಲ್ಪಿಸಲಿ: ನೀರಿನ ತೊಟ್ಟಿಯಿಂದ ಕಟ್ಟಡದಲ್ಲಿರುವ ಸಿನ್ಟೆಕ್ಸ್ಗೆ ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ಹಾಲಿ ಮೋಟರ್ ಇದ್ದು ತೊಟ್ಟಿಯಿಂದ ಪೈಪ್ ಜೋಡಿಸಿ ನೀರು ಸಂಪರ್ಕ ಕಲ್ಪಿಸಿಕೊಟ್ಟಲ್ಲಿ ಅನುಕೂಲ ವಾಗುತ್ತದೆ. ಕಟ್ಟಡಕ್ಕೆ ಅಗತ್ಯವಾಗಿ ಬೇಕಾಗಿರುವ ಕಾಂಪೌಂಡ್ ವ್ಯವಸ್ಥೆ, ಬಿರುಕುಬಿಟ್ಟಿರುವುದು, ಬಾಗಿಲುಗಳ ವ್ಯವಸ್ಥೆ, ಕಿಟಕಿಗಳಿಗೆ ಬೋಲ್ಟ್ ವ್ಯವಸ್ಥೆ, ತೊಟ್ಟಿಯ ಮೇಲ್ಚಾವಣಿ ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ಗ್ರಾಪಂ ಹಾಗೂ ತಾ.ಪಂ ಗಳ ಗಮನಕ್ಕೂ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.  ಜಿಪಂ ಸದಸ್ಯರು, ಸಿಡಿಪಿಓ ಅವರು ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಕೂಡಲೇ ಗಮನಹರಿಸಿ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.