ಸರ್ಕಾರಿ ಅನುದಾನ ಸದ್ಬಳಕೆಯಾಗಲಿ
ಕನ್ನಡಪ್ರಭವಾರ್ತೆಅರಕಲಗೂಡು ಜೂ.9
ಪಟ್ಟಣದ 15 ವಾರ್ಡುಗಳಿಗೆ ಸಮರ್ಪಕ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಅಧಿಕಾರಿಗಳು ಸದಸ್ಯರ ಗಮನಕ್ಕೆ ತಂದು ಸರ್ಕಾರದ ಅನುದಾನ ಸದ್ಬಳಕೆಗೆ ಆದ್ಯತೆ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ವಾಟಾಳ್ ರಮೇಶ್, ಸರ್ಕಾರದ ಸವಲತ್ತುಗಳನ್ನು ಜನತೆಗೆ ತಲುಪಿಸುವಲ್ಲಿ ಪಕ್ಷ ರಾಜಕಾರಣ ಮಾಡದೇ ಎಲ್ಲ ವಾರ್ಡ್ಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ ಸವಲತ್ತುಗಳನ್ನು ತಲುಪಿಸಬೇಕು. ಪಟ್ಟಣದ ಸಮಗ್ರ ಅಭಿವೃದ್ಧಿ ಆದ್ಯತೆ ನೀಡಬೇಕು ಎಂದರು. ಇದಕ್ಕೆ ಧ್ವನಿಗೂಡಿಸಿದ ಎಲ್ಲ ಸದಸ್ಯರು ಅಧಿಕಾರಿಗಳು ಸರ್ಕಾರದ ಅನುದಾನ ಹಂಚಿಕೆ ಸಂಬಂಧ ಆಯಾ ವಾರ್ಡ್ಗಳ ಸದಸ್ಯರ ಗಮನಕ್ಕೆ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಪ್ರಸಕ್ತ ಸಾಲಿಗೆ ಮಾಂಸ ಮತ್ತು ಕೋಳಿ ಅಂಗಡಿಗಳನ್ನು ಸ್ವಂತ ಕಟ್ಟಡದಲ್ಲಿ ತೆರೆಯುವ ಮಾಲೀಕರಿಗೆ ಪರವಾನಗಿ ನೀಡಲು ಹಣ ನಿಗದಿಪಡಿಸುವ ಸಂಬಂಧ ಸದಸ್ಯರ ನಡುವೆ ಕಾವೇರಿದ ಚರ್ಚೆ ನಡೆದು ರೂ. 26 ಸಾವಿರಕ್ಕೆ ನಿಗದಿಪಡಿಸಲಾಯಿತು. ಸ್ವಂತ ಕಟ್ಟಡ ಹೊಂದಿರುವವರಿಗೆ ಹಣ ಏರಿಕೆ ಮಾಡಿದರೆ ಕೋಳಿ ಮಾರಾಟದ ದರವನ್ನು ಸಹ ಏರಿಸುತ್ತಾರೆ. ಇದರಿಂದ ಮಾಂಸ ಪ್ರಿಯರಿಗೆ ಹೊರೆಯಾಗಲಿದೆ. ಪ್ರತಿ ವರ್ಷ ಶೇಕಡಾ 5 ರಷ್ಟು ಹಣ ಏರಿಕೆ ಮಾಡುವುದು ಸೂಕ್ತ ಎಂದು ಸದಸ್ಯ ಅಲಿಂ ಪಾಷಾ ಹೇಳಿದರು.
ಪಟ್ಟಣದಲ್ಲಿ ನೆಲಸಿರುವ ಗ್ರಾಮೀಣ ಭಾಗದ ಅಂಗವಿಕಲರು ಎರಡು ಕಡೆ ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ. ಗ್ರಾಪಂ ಮತ್ತು ತಾಪಂ ಜತೆಗೆ ಪಪಂನಲ್ಲೂ ಅನುದಾನ ಒದಗಿಸುವುದನ್ನು ನಿಲ್ಲಿಸಬೇಕು. ಸವಲತ್ತುಗಳನ್ನು ಒದಗಿಸುವಾಗ ಅಧಿಕಾರಿಗಳು ಸದಸ್ಯರ ಗಮನಕ್ಕೆ ತರುತ್ತಿಲ್ಲ ಎಂದು ಜೈಭೀಮನಗರ ವಾರ್ಡ್ ಸದಸ್ಯ ಮಂಜುನಾಥ್ ಅಧಿಕಾರಿಗಳ ಮೇಲೆ ಹರಿ ಹಾಯ್ದರು.
ಇದಕ್ಕೆ ದ್ವನಿಗೂಡಿಸಿದ ಸದಸ್ಯ ಅಲಿಂ ಪಾಷಾ ಅವರು ಪಂಚಾಯಿತಿಯಲ್ಲಿ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳ ನಾಮಫಲಕ ಹಾಕಬೇಕು. ಅವರು ಎರಡು ಕಡೆ ಸವಲತ್ತು ಪಡೆಯದಂತೆ ಕಡಿವಾಣ ಹಾಕಬೇಕು. ಫಲಾನುಭವಿಗಳನ್ನು ಪರಿಗಣಿಸುವಾಗ ಸದಸ್ಯರ ಗಮನಕ್ಕೆ ತರದೇ ಕದ್ದುಮುಚ್ಚಿ ಆಯ್ಕೆ ಮಾಡುವುದು ಸರಿಯಲ್ಲ ಎಂದರು.
ಪಟ್ಟಣದ 15ನೇ ವಾರ್ಡ್ ಹಂಟಗೆರೆ ಬಡಾವಣೆಯಲ್ಲಿ 40 ಕುಟುಂಬಗಳಿಗೆ ನಲ್ಲಿ ಸಂಪರ್ಕ ಕಲ್ಪಿಸದೇ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ದನದ ಕೊಟ್ಟಿಗೆಯಲ್ಲಿ ಅಂಗನವಾಡಿ ಕಟ್ಟಡ ನಡೆಸಲಾಗುತ್ತಿದೆ. ಇಷ್ಟಾದರೂ ಪಂಚಾಯಿತಿ ಅಧಿಕಾರಿಗಳು ತಿರುಗಿ ನೋಡಿಲ್ಲ. ಶೀಘ್ರವೇ ಸಮಸ್ಯೆ ಬಗೆಹರಿಸಬೇಕು ಎಂದು ಸದಸ್ಯೆ ಮಮತ ಆಗ್ರಹಿಸಿದರು.
ಹೆಂಟಗರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಿ ಅಂಗನವಾಡಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಇಂಜಿಯರ್ಕ್ವಿತ ಸಭೆಗೆ ತಿಳಿಸಿದರು. ಪಟ್ಟಣದ ಹಲವು ಅಭಿವೃದ್ಧಿ ಕಾಮಗಾರಿಗಳ ಅನುಮೋದನೆಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

