ಎಡಿಜಿಪಿ ಪ್ರಕರಣ ಸಿಐಡಿಗೆ ವಹಿಸುವಂಥದ್ದಲ್ಲ, ಆದರೆ ವಹಿಸಲೇಬೇಕಿತ್ತು
ಹಾಸನ: ಹೊಟೇಲ್ನಲ್ಲಿ ಯುವತಿ ಪೋಟೋ ತೆಗೆದ ಎಡಿಜಿಪಿ ರವೀಂದ್ರನಾಥ್ ಪ್ರಕರಣ ಸಿಐಡಿ ತನಿಖೆಗೆ ವಹಿಸುವಂಥ ಪ್ರಕರಣವಲ್ಲ. ಆದರೆ ಉನ್ನತಾಧಿಕಾರಿಗಳ ನಡುವೆ ಆರೋಪ,ಪ್ರತ್ಯಾರೋಪ ಇದ್ದ ಕಾರಣ ವಹಿಸಬೇಕಾಯಿತು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಎಡಿಜಿಪಿ ರವೀಂದ್ರನಾಥ್ ಅವರು, ಈ ಪ್ರಕರಣ ಹಿಂದೆ ಬೆಂಗಳೂರು ಪೊಲೀಸ್ ಕಮೀಷನರ್ ಔರಾದ್ಕಾರ್ ಇದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದರು. ಹೀಗೆ ಇಬ್ಬರು ಆಧಿಕಾರಿಗಳ ನಡುವೆ ಆರೋಪ ಇದ್ದ ಕಾರಣ ಬೇರೆ ದಾರಿಯಿಲ್ಲದೇ ಸಿಐಡಿ ತನಿಖೆಗೆ ವಹಿಸಬೇಕಾಯಿತು. ಸಿಐಡಿ ವರದಿ ಸದ್ಯದಲ್ಲೇ ಸರ್ಕಾರಕ್ಕೆ ತಲುಪಲಿದ್ದು, ಯಾರೇ ತಪ್ಪು ಮಾಡಿದ್ದರೂ ಕ್ರಮ ಜರುಗಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಾತಿ ಆಧಾರದ ಮೇಲೆ ಕೆಲ ಸಚಿವರು ಅಧಿಕಾರಿ ರಕ್ಷಣೆಗೆ ಮುಂದಾಗಿದ್ದು ತಪ್ಪೊ, ಸರಿಯೋ ಎಂಬ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ. ಸಚಿವರೆಂದ ಮೇಲೆ ಸಾಮೂಹಿಕ ಜವಾಬ್ದಾರಿ ಇರುತ್ತದೆ. ಐಡಿಜಿಪಿ ಪರ ಪೊಲೀಸ್ ಯೂನಿಫಾರಂನಲ್ಲಿ ಪ್ರತಿಭಟನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಕೆಂಪಯ್ಯ ನೇಮಕಕ್ಕೆ ತಮ್ಮದೇ ಅಭ್ಯಂತರವಿಲ್ಲ ಮುಖ್ಯಮಂತ್ರಿಗಳು ಭದ್ರತಾ ಸಲಹೆಗಾರರನ್ನಾಗಿ, ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರನ್ನು ನೇಮಕ ಮಾಡಿಕೊಳ್ಳುವುದಕ್ಕೆ ತಮ್ಮದೇನು ಅಭ್ಯಂತರವಿಲ್ಲ. ಅದು ಸಿಎಂ ಅವರ ಪರಮಾಧಿಕಾರ. ಹೀಗೆ ನೇಮಕಾತಿ ಮಾಡಿಕೊಳ್ಳುವುದರಿಂದ ಗೃಹ ಸಚಿವರ ಕಾರ್ಯ ವೈಖರಿಗೆ ಹಿನ್ನೆಡೆಯಾಗುತ್ತದೆ ಎಂದು ಭಾವಿಸುವುದು ಶುದ್ದ ತಪ್ಪು. ಹಿಂದೆ ಯಡಿಯೂರಪ್ಪನವರು, ವಕೀಲ ದಿವಾಕರ್ ಅವರನ್ನು ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಅದರೆ ಅದು ಕಾನೂನು ಸಚಿವರಿಗೆ ಪರ್ಯಾಯವಲ್ಲ ಎಂದು ವಾದಿಸಿದರು.
ಬಾಳೆ ಹಣ್ಣು ಸುಲಿದಂಗೆ ಅಲ್ಲ: ಮಾಜಿ ಸಿಎಂ ಒಬ್ಬರು, ರವೀಂದ್ರ ಪ್ರಕರಣ ಐದೇ ನಿಮಿಷದಲ್ಲಿ ಬಗೆಹರಿಸುವಂಥದ್ದು ಎಂದು ಹೇಳಿದ್ದಾರೆ. ಅದೇನು ಬಾಳೆ ಹಣ್ಣು ಸುಳಿದುಕೊಂಡು ತಿಂದಂಗೆ ಅಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದರು. ಮೈಸೂರು ದಕ್ಷಿಣ ವಲಯ ಐಜಿಪಿ ಮತ್ತು ಆನೇಕ ಸಿಬ್ಬಂದಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆಯೂ ಸಿಓಡಿ ತನಿಖೆ ನಡೆಸಲಾಗುತ್ತಿದೆ. ವರದಿ ಬಂದ ನಂತರ ಕ್ರಮ ಎಂದು ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

