ನೌಕಾ ಪಡೆಯಲ್ಲಿ ತಾಂತ್ರಿಕ ಶಿಕ್ಷಣ
ಹಾಸನ: ವಿಜ್ಞಾನ ವಿಷಯಗಳ ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಶೇ.70 ಅಂಕ ಪಡೆದಿರುವ ಅವಿವಾಹಿತ ಯುವ ಕರಿಂದ ನೌಕಾಪಡೆಯಲ್ಲಿ ಉಚಿತವಾಗಿ ಬಿ.ಇ. ಹಾಗೂ ಅಧಿಕಾರಿ ಶಿಕ್ಷಣ ಪಡೆಯಲು ಜೂ. 23 ರೊಳಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜಾಲತಾಣ ಢಿಢಿಢಿ.ಟಿಛ್ಡಡಜಟಿಛಝಿಛ್ಠಛಝ್ಝಿ.ಟ್ಝ್ಛಿ.್ಝಟಿ. ಅಭ್ಯರ್ಥಿಗಳು 1995ರ ಜುಲೈ 2 ರಿಂದ 1998ರ ಜ.1 ರ ನಡುವೆ ಜನಿಸಿರಬೇಕು. ಸಂದರ್ಶನಕ್ಕೆ ಹೋಗಿ ಬರುವ ವೆಚ್ಚವನ್ನು ನೌಕಾಪಡೆ ಭರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.984 5493336 ಸಂಪರ್ಕಿಸಬಹುದು.
ಮನೆಗಳ್ಳತನ: ಕೋಳಿ ಪಾಷಾ ಬಂಧನ
ಚನ್ನರಾಯಪಟ್ಟಣ: ಇಲ್ಲಿಯ ವಳಗೆರೆಮ್ಮ ಬೀದಿಯಲ್ಲಿ ಕಳೆದ ವಾರ ಮನೆಯೊಂದರಲ್ಲಿ ಕಳವು ಮಾಡಿದ ಕಳ್ಳನನ್ನು ಪಟ್ಟಣ ಪೋಲಿಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಪಟ್ಟಣದ ಯಾಸಿನ್ ಪಾಶ ಆಲಿಯಾಸ್ ಕೋಳಿ ಪಾಷಾ(26) ಬಂಧಿತ ಆರೋಪಿಯಾಗಿದ್ದು, ಈತನಿಂದ 90 ಗ್ರಾಂ ಚಿನ್ನ, 1.16 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ವಾರ ಮನೆಯಲ್ಲಿ ಪಟ್ಟಣದ ವಳಗೆರೆಮ್ಮ ಬೀದಿಯಲ್ಲಿನ ಮಪ್ತಾರ್ ಪಾಷಾ ಅವರು ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿರುವುದನ್ನು ಗಮನಿಸಿ ಮನೆ ಚಾವಣಿಯ ಶೀಟ್ಗಳನ್ನು ತೆಗೆದು ಒಳ ಪ್ರವೇಶಿಸಿ ಹಣ ಮತ್ತು ಒಡವೆಗಳನ್ನು ಕಳವು ಮಾಡಿದ ಪ್ರಕರಣ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮಾನಸ್ಪಾದವಾಗಿ ತಿರುಗುತ್ತಿದ್ದ ಕೋಳಿ ಪಾಷಾನನ್ನು ಚಾರಣೆ ನಡೆಸಿದ ಸಂದರ್ಭದಲ್ಲಿ ಕಳ್ಳತನ ಪ್ರಕರಣ ಹೊರಬಂದಿದ್ದಾಗಿ ಸರ್ಕಲ್ ಇನ್ಸ್ಪೆಕ್ಟರ್ ಶೈಲೇಂದ್ರ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

