ಹಾಸನ

ಮರಳು ವಶ

Published On :

ಸಕಲೇಶಪುರ: ತಾಲೂಕಿನ ಹಾಲೇಬೇಲೂರು ಗ್ರಾಮದ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಟ್ರಾಕ್ಟರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಟ್ಟಣ ಠಾಣೆ ಪೋಲಿಸರನ್ನು ಕಂಡ ಹಾಲೇಬೇಲೂರು ಗ್ರಾಮದ ಶ್ಯಾಂ ಎಂಬ ಟ್ರಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ. ದಾಳಿಯ ನೇತೃತ್ವವವನ್ನು ಪಟ್ಟಣ ಠಾಣೆ ಪಿಎಸ್‌ಐ ಜೀವನ್ ವಹಿಸಿದ್ದರು.
ಕಥೆ ಕೇಳೋಣ ಬನ್ನಿ
ಮೈಸೂರು: ಕುವೆಂಪುನಗರದಲ್ಲಿರುವ ಸುರುಚಿ ರಂಗಮನೆಯಲ್ಲಿ ಜೂ.14ರ ಸಂಜೆ 4.30ಕ್ಕೆ ಸುಬ್ರಾಯ ಭಟ್ಟರು ಕಥೆ ಕೇಳೋಣ ಬನ್ನಿ ಕಾರ್ಯಕ್ರಮ ನಡೆಸಿಕೊಡುವರು.


ಅಪರಿಚಿತ ಶವ ಪತ್ತೆ
ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ಮತ್ತಿಘಟ್ಟ ಕೆರೆಯ ಏರಿಯ ಕೆಳಗೆ ಅಪರಿಚಿತ ಶವವೊಂದು ಪತ್ತೆಯಾಗಿದೆ.  40ರಿಂದ 50 ವರ್ಷದ ಪುರುಷನ ತಲೆಗೆ ಬಲವಾಗಿ ರಾಡಿನಿಂದ ಥಳಿಸಿ ಆತನನ್ನು ಕೊಲೆ ಮಾಡಿ ಆತನ ಶವವನ್ನು ಏರಿಯ ಮೇಲಿಂದ ಕೆಳಗೆ ಬಿಸಾಡಿದ್ದಾರೆ.  ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್,ಜಿಲ್ಲಾ  ಹೆಚ್ಚುವರಿ ಪೊಲೀಸ್  ಅಧಿಕಾರಿ ರಶ್ಮಿ ಹೊಳೆನರಸೀಪುರ ಡಿಎಸ್ಪಿ ವಿನಾಯಕರಾವ್ ಪಾಟೀಲ್, ಸರ್ಕಲ್ ಇನ್ಸ್‌ಪೆಕ್ಟರ್ ಶೈಲೇಂದ್ರ, ಸಬ್ ಇನ್ಸ್‌ಪೆಕ್ಟರ್ ರೇಖಾಬಾಯಿ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  ಹಿರೀಸಾವೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಯುಪಿಎಸ್ಸಿನಲ್ಲಿ ಶ್ರೇಯಸ್‌ಗೆ 819ನೇ ರ್ಯಾಂಕ್
ಹಾಸನ: ಯು ಪಿ ಎಸಸ್ಸಿ ಪರೀಕ್ಷೆಯಲ್ಲಿ ಬೇಲೂರಿನ ಶ್ರೇಯಸ್ ಅವರು 819 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
 ಬೇಲೂರು ತಾಲೂಕಿನ ಕುಶಾವರ ಗ್ರಾಮದ ವಾಸಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕೆ.ಎಸ್.ಮಲ್ಲೇಶ್ ಹಾಗೂ ಪುಷ್ಪ ಅವರ ಪುತ್ರ ಶ್ರೇಯಸ್ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯದ 45 ಮಂದಿ ಉತ್ತೀರ್ಣರಾಗಿದ್ದು, ಈ ಪೈಕಿ ಶ್ರೇಯಸ್ ಕೂಡ ಒಬ್ಬರಾಗಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಶ್ರೇಯಸ್, ನಾನು ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಪರೀಕ್ಷೆಗಾಗಿ 1 ವರ್ಷಗಳ ಕಾಲ ವೃತ್ತಿಯನ್ನು ಬಿಟ್ಟಿದ್ದೆ. ದಿನದಲ್ಲಿ ಸುಮಾರು 8ರಿಂದ 10 ತಾಸುಗಳ ಕಾಲ ಓದುತ್ತಿದ್ದೇ. ಪರೀಕ್ಷೆಯನ್ನು ಒಂದು ಸವಾಲಾಗಿ ತೆಗೆದುಕೊಂಡಿದ್ದ ಈಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ಬಹಳ ಸಂತಸ ತಂದಿದೆ. ಪರೀಕ್ಷೆ ಸಂದರ್ಭದಲ್ಲಿ ಬೆಂಗಳೂರಿನ ಜೆಎಸ್‌ಎಸ್ ಇನ್ಟಿಟ್ಯೂಟ್‌ನಲ್ಲಿ ತರಬೇತಿಯನ್ನು ಪಡೆದಿದ್ದೆ.
ಸಾರ್ವಜನಿಕ ಸೇವೆ ಮಾಡುವ ಉದ್ದೇಶವನ್ನು ಹೊಂದಿದ್ದು, ಈಗ ಅದು ಫಲಿಸಿರುವುದರಿಂದ ಬಹಳ ಸಂತಸವಾಗಿದೆ.
ಹಳೆಮನೆ ಒಂದು ನೆನಪು
ಮೈಸೂರು: ಸಾಮಾಜಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ಲಿಂಗದೇವರು ಹಳೆಮನೆ ಗೆಳೆಯರ ಬಳಗದ ವತಿಯಿಂದ ಜೂ.14 ಮತ್ತು 15 ರಂದು ರಂಗಾಯಣದಲ್ಲಿ ಲಿಂಗದೇವರು ಹಳೆಮನೆ ಒಂದು ನೆನಪು ಕಾರ್ಯಕ್ರಮ ಏರ್ಪಡಿಸಲಾಗಿದೆ. ಜೂ.14ರ ಬೆಳಗ್ಗೆ 10ಕ್ಕೆ ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಲಿದ್ದು, ಮಾಜಿ ನಿರ್ದೇಶಕರಾದ ಪ್ರಸನ್ನ, ಸಿ.ಬಸವಲಿಂಗಯ್ಯ ಭಾಗವಹಿಸುವರು. ಜೂ.15ರ ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರೊ.ಜಿ.ಕೆ. ಗೋವಿಂದರಾವ್, ಪ್ರೊ.ಎಂ.ಜಿ. ಕೃಷ್ಣನ್, ಎಸ್.ಜಿ. ಸಿದ್ದರಾಮಯ್ಯ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.