ಠೇವಣಿದಾರರಿಗೆ ಹಣ ನೀಡದೆ ವಂಚನೆ
ಹಾಸನ: ರಾಜ್ಯ ಕೈಗಾರಿಕಾ ವಾಣಿಜ್ಯ ಸಹಕಾರ ಬ್ಯಾಂಕ್ ಹಾಸನ ಶಾಖೆಯ ಆಸ್ತಿಯನ್ನು ಬಹಿರಂಗವಾಗಿ ಮಾರಾಟ ಮಾಡದೆ ಠೇವಣಿದಾರರು ಹಾಗೂ ಷೇರುದಾರರಿಗೆ ವಂಚಿಸಲಾಗುತ್ತಿದೆ ಎಂದು ಶನಿವಾರ ಠೇವಣಿದಾರರು ಹಾಗೂ ಷೇರುದಾರರು ಆಕ್ರೋಶ ವ್ಯಕ್ತಪಡಿಸಿದರು. ಕರ್ಣಾಕರ್, ಮಲ್ಲಿಕಾರ್ಜುನ್, ಮಧು, ಮಂಜೇಗೌಡ ಹಾಗೂ ರಾಜ್ಯ ಕೈಗಾರಿಕಾ ವಾಣಿಜ್ಯ ಸಹಕಾರ ಬ್ಯಾಂಕ್ ಬೆಂಗಳೂರು ಕಚೇರಿಯ ಕಾರ್ಯವೈಖರಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಹಾಸನ ಶಾಖೆಯು ಹೊಂದಿರುವ ಒಟ್ಟು 3,200 ಚದರ ಅಡಿ ಸ್ಥಿರಾಸ್ತಿಯನ್ನು ಮಾಡಲು ಜೂ.26ರಂದು ಗುರುವಾರ ಬೆಳಗ್ಗೆ 11.30ಕ್ಕೆ ಬ್ಯಾಂಕಿನ ಹಾಸನ ಶಾಖೆಯ ಆವರಣದಲ್ಲಿ ಸಹಕಾರ ಸಂಘಗಳ ನಿಬಂದಕ ಪ್ರತಿನಿಧಿಯ ಸಮಕ್ಷಮದಲ್ಲಿ, ಮುಚ್ಚಿರುವ ಟೆಂಡರ್ ಕಂ ಬಹಿರಂಗ ಹರಾಜಿನ ಪ್ರಕ್ರಿಯೆ ನಿಗದಿ ಪಡಿಸಿದ್ದು, ಇಚ್ಚೆ ಉಳ್ಳ ಟೆಂಡರ್ದಾರರು, ಬಿಡ್ ದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಪತ್ರಿಕೆಯಲ್ಲಿ ಪ್ರಕಟಣೆ ನೀಡಿದ್ದಾರೆ.
ಅದರಂತೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಫಾರಂ ಕೇಳಿದರೆ ನೀಡುತ್ತಿಲ್ಲ. ಈ ಆಸ್ತಿ ರು. 10 ಕೋಟಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಲಿದೆ. ಆದರೆ ಬೆಂಗಳೂರು ಶಾಖೆಯವರು ಹಾಸನ ಶಾಖೆಯನ್ನು ಕೇವಲ 2,11,20,000 ರು. ಕಾಯ್ದಿಟ್ಟಿದ್ದಾರೆ. ಟೆಂಡರ್ ನೆಪ ಮಾತ್ರಕ್ಕೆ ಕರೆದಿದ್ದಾರೆ. ಆದರೆ ಒಳಗೊಳಗೆ ಬ್ಯಾಂಕ್ ಆಸ್ತಿಯನ್ನು ಮಾರಾಟ ಮಾಡಿ ಬ್ಯಾಂಕ್ ಠೇವಣಿದಾರರು, ಷೇರುದಾರರಿಗೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೆಂಡರ್ನಲ್ಲಿ ಪಾಲ್ಗೊಳ್ಳಲು ಅರ್ಜಿಯನ್ನು ನೀಡುವಂತೆ ಬ್ಯಾಂಕ್ನಲ್ಲಿ ಕೇಳಿದರೆ ಅರ್ಜಿಗಳನ್ನು ನೀಡುತ್ತಿಲ್ಲ. ಈಗಾಗಿ ಬ್ಯಾಂಕ್ ಆಸ್ತಿಯನ್ನು ಒಳಗೊಳಗೆ ಮಾರಾಟ ಮಾಡಿದ್ದಾರೆ ಎಂಬ ಅಂಶ ಅರ್ಥವಾಗಲಿದೆ. 2 ಕೋಟಿಗೆ ಮಾರಾಟ ಮಾಡುವುದಾದರೆ ಠೇವಣಿದಾರರೆಲ್ಲ ಸೇರಿದಂತೆ ಖರೀದಿ ಮಾಡುತ್ತಿದ್ದೆವು. ಆದರೆ ಬೆಂಗಳೂರಿನವರು ಆಸ್ತಿಯನ್ನು ತಮಗೆ ಬೇಕಾದವರಿಗೆ ಮಾರಾಟ ಮಾಡಿದ್ದಾರೆ ಆರೋಪಿಸಿದರು.
ಬ್ಯಾಂಕ್ನ ಆಸ್ತಿಯನ್ನು ಮಾರಾಟ ಮಾಡುವ ಮುನ್ನ ಠೇವಣಿದಾರರಿಗೆ ಹಾಗೂ ಷೇರ್ದಾರರಿಗೆ ಹಣ ನೀಡದೆ ಆಸ್ತಿ ಮಾರಾಟ ಮಾಡಲು ಮುಂದಾಗಿದ್ದಾರೆ. ಮೊದಲು ಹಣ ನೀಡಿ ನಂತರ ಆಸ್ತಿ ಮಾರಾಟ ಮಾಡಲಿ. ಇಲ್ಲವಾದಲ್ಲಿ ಈ ಬಗ್ಗೆ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಉಚಿತ ತರಗತಿ
ಹಾಸನ: 2014-15ನೇ ಸಾಲಿನ ಜುಲೈ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಕಲಾ ವಿಭಾಗ (ಹೆಚ್.ಇ. ಪಿ.ಎಸ್), ವಾಣಿಜ್ಯ ವಿಭಾಗ (ಹೆಚ್.ಇ.ಬಿ.ಎ., ಸಿ.ಎ.ಬಿ.ಎ) ವಿದ್ಯಾರ್ಥಿಗಳು ಯಾವುದಾದರೂ ವಿಷಯದಲ್ಲಿ ಅನುತ್ತೀರ್ಣರಾಗಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಜೂ.23ರಿಂದ 27ರವರೆಗೆ ಉಚಿತ ತರಗತಿಗಳು, ಹಾಸನದ ಶ್ರೀಮತಿ ಬಿಳಿಯಮ್ಮ ಈರೇಗೌಡ(ಬಿ.ಈ.ಜಿ) ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತವೆ. ಫೇಲಾದ ವಿದ್ಯಾರ್ಥಿಗಳು ಜೂ. 21ರೊಳಗೆ ತಮ್ಮ ಹೆಸರನ್ನು ಕಾಲೇಜಿನಲ್ಲಿ ನೋಂದಾಯಿಸಿಕೊಳ್ಳುವುದು ಎಂದು ಕಾಲೇಜಿನ ಪ್ರಾಂಶುಪಾಲೆ ಹೆಚ್.ಎ. ರೇಖಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

