ಯಗಚಿ: ಸಚಿವರ ಜತೆ ಚರ್ಚಿಸಿ ಕ್ರಮ
ಹಾರನಹಳ್ಳಿ: ಹಾರನಹಳ್ಳಿ ಯಗಚಿ ನದಿ ಮೂಲಕ ನೀರು ಹರಿಸುವ ಬಗ್ಗೆ ಗ್ರಾಮಸ್ಥರುಗಳು, ಈಭಾಗದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಸೂತ್ತಮುತ್ತಲ ರೈತ ಸಂಘದ ಮುಖಂಡರು ಹಾರನಹಳ್ಳಿ ಗ್ರಾಮ ಮುಂಭಾಗಲ್ಲಿ 16 ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಸ್ಥಳಕ್ಕೆ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಸೋಮವಾರ ರಾತ್ರಿ ಭೇಟಿ ನೀಡಿ ರೈತರ ಜತೆ ನೀರಾವರಿ ಯೋಜನೆ ಬಗ್ಗೆ ಮಾತುಕತೆ ನಡೆಸಿದರು.
ಸುದ್ದಿಗಾರರೊದಿಗೆ ಅವರು ಮಾತನಾಡಿ, ಅರಸೀಕೆರೆ ತಾಲೂಕು ಸರಿಯಾಗಿ ಮಳೆಯಾಗದೆ ರೈತ ಸಮುದಾಯ ಕಷ್ಟದಲ್ಲಿದ್ದಾರೆ. ರೈತರಿಗೆ ನೀರು, ವಿದ್ಯುತ್ ಕೊಟ್ಟರೆ ಅಗತ್ಯವಾದ ಬೆಳೆಯನ್ನು ಬೇಳೆಯುವ ಸಾಮರ್ಥ್ಯ ರೈತರಲ್ಲಿದೆ. ಆದರೂ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದೆ. ಯಗಚಿ ನದಿಯ ಹೆಚ್ಚುವರಿ ಪ್ರವಾಹ ನೀರನ್ನು ಕಾಲುವೆ ಮೂಲಕ ಕುಡಿಯುವ ನೀರಿನ ಸೌಲಭ್ಯ ಪಡೆಯುವ ಬಗ್ಗೆ ಯಗಚಿ ನೀರಾವರಿ ಇಲಾಖೆ ತಯಾರಿಸಿದ ವರದಿಯನ್ನು ನೀರಾವರಿ ಸಚಿವರ ಜತೆ ಮಾತನಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಕನ್ನಕಂಚನಹಳ್ಳಿ ಪ್ರಸನ್ನ ಕುಮಾರ್ ಗ್ರಾಪಂ ಮಾಜಿ ಅಧ್ಯಕ್ಷ ನಂದೀಶ್ ಗುರುಲಿಂಗಪ್ಪ, ಸೋಮಣ್ಣ, ಬಸವರಾಜ್ ಹಾಗೂ ರೈತರು ಇದ್ದರು.
ಯಗಚಿ ಯೋಜನೆ ಜಾರಿಗೆ ಮನವಿ
ಯಗಚಿ ಅಣೆಕಟ್ಟೆಯ ಹಿನ್ನೀರು ಹಾಗೂ ಹೆಚ್ಚುವರಿ ನೀರನ್ನು ಬೇಲೂರು, ಅರಸೀಕೆರೆ ಹಾಗೂ ತಿಪಟೂರು ತಾಲೂಕಿನ ಕೆರೆಗಳಿಗೆ ತುಂಬಿಸುವ ಬಗ್ಗೆ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ವಕೀಲ ಎಚ್.ಕೆ. ಮಧುಸೂದನ್ ಅವರು ನೀರಾವರಿ ಸಚಿವ ಬಿ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಯೋಜನೆಯ ವಿವರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಧುಸೂದನ್, ಜುಲೈ 15ರಿಂದ ಆಗಸ್ಟ್‌ವರೆಗೆ ಹೆಚ್ಚುವರಿಯಾಗಿ ಹರಿದು ಹೋಗುವ ಯಗಚಿ ನದಿ ನೀರನ್ನು ಕೆರೆಗಳಿಗೆ ಹರಿಸಬಹುದೆಂದು ವರದಿ ನೀಡಿದ್ದು, ದನ್ನು ಜಾರಿಗೊಳಿಸುವಂತೆ ನೀರಾವರಿ ಸಚಿವರಿಗೆ ಒತ್ತಾಯಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

