ಹಾಸನ

ಲಾರಿ- ಬೈಕ್ ಡಿಕ್ಕಿ: ಇಬ್ಬರ ಸಾವು

Published On :

ಸಕಲೇಶಪುರ:  ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಇದ್ದ ಇಬ್ಬರು ಸವಾರರೂ ಮೃತಪಟ್ಟ ಘಟನೆ ತಾಲೂಕಿನ ಬಾಳ್ಳುಪೇಟೆ ಆಸ್ಪತ್ರೆಯ ಕ್ರಾಸ್ ಬಳಿ  ಸೋಮವಾರ ಸಂಜೆ ನಡೆದಿದೆ.
 ತಾಲೂಕಿನ ಹಾನುಬಾಳು ಹೋಬಳಿಯ ಕ್ಯಾಮನಹಳ್ಳಿ ಗ್ರಾಮದ  ರಾಕೇಶ (22) ಹಾಗೂ ಹೆತ್ತೂರು ಹೋಬಳಿಯ ಬೊಮ್ಮನಕೆರೆಯ ವಾಸಿ ರೇಣುಕ (22)  ಮೃತಪಟ್ಟ ದುರ್ದೈವಿಗಳು.  ರಾಕೇಶ  ಅವರು ತಮ್ಮ ಬೈಕಿನಲ್ಲಿ  ಸ್ನೇಹಿತ ರೇಣುಕ ಅವರನ್ನು ಕೂರಿಸಿಕೊಂಡು  ಬಾಳ್ಳುಪೇಟೆ ಕಡೆಗೆ ಹೋಗಲು ಬಾಳ್ಳುಪೇಟೆ ಆಸ್ಪತ್ರೆ  ಕ್ರಾಸ್ಬ್ ಬಳಿ  ಹೋಗುತ್ತಿರುವಾಗ   ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ   ರಾಕೇಶ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ರೇಣುಕ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.   ಈ ಬಗ್ಗೆ  ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಟ್ಕಾ ಆಡಿಸುತ್ತಿದ್ದವನ ಬಂಧನ: ಹಾಸನದ ಕಟ್ಟಿನಕೆರೆ ಮಾರ್ಕೇಟ್‌ನ ಮೆಟ್ಟಿಲುಗಳ ಹತ್ತಿರ ಮಟ್ಕಾ ಆಡಿಸುತ್ತಿದ್ದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಆಲೂರು ತಾಲೂಕು ಸುಳುಗೋಡು ಗ್ರಾಮದ ಅನುಕುಮಾರ್ (18) ಎಂಬಾತನೇ  ಬಂಧಿತ ಆರೋಪಿ. ನಗರ ಠಾಣೆಯ ಪಿಎಸ್‌ಐ ಕುಮಾರ್ ಅವರು ಸಿಬ್ಬಂದಿಯೊಂದಿಗೆ ತೆರಳಿ ಆರೋಪಿಯನ್ನು  ಬಂಧಿಸಿ ರು. 520 ನಗದು ಮತ್ತು ಒಂದು ನೋಕಿಯಾ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.