ಶಿಥಿಲ ಓವರ್ಹೆಡ್ ಟ್ಯಾಂಕ್ ತೆರವು
ಅರಸೀಕೆರೆ: ಪಟ್ಟಣದ ಐದನೇ ವಾರ್ಡ್ನ ವಸತಿ ಪ್ರದೇಶದಲ್ಲಿದ್ದ ಶಿಥಿಲಾವಸ್ಥೆಯಲಿದ್ದು, ಸುತ್ತಮುತ್ತಲ ಜನರಿಗೆ ಆತಂಕ ಮೂಡಿಸಿದ್ದ ಓವರ್ಹೆಡ್ ಟ್ಯಾಂಕನ್ನು ಪುರಸಭೆ ಇತ್ತೀಚೆಗೆ ತೆರವುಗೊಳಿಸಿತು.
ಹಾಸನ ರಸ್ತೆಯ ಎಡ ಹಾಗೂ ಬಲ ಭಾಗದ ಬಡಾವಣೆ ಸೇರಿದಂತೆ ಪಟ್ಟಣದ ಕೆಲ ಬಡಾವಣೆಗಳಿಗೆ ನೀರು ಪೂರೈಸಲೆಂದು ಕಳೆದ ನಾಲ್ಕು ದಶಕಗಳ ಹಿಂದೆ ಸುಮಾರು ನಾಲ್ವತ್ತೈದು ಅಡಿಗೂ ಎತ್ತರದ ಓವರ್ಹೆಡ್ ಟ್ಯಾಂಕನ್ನು ನಿರ್ಮಿಸಲಾಗಿತ್ತು. ಕಾಲಕ್ರಮೇಣ ಈ ಟ್ಯಾಂಕ್ ಸೋರಲು ಆರಂಭಿಸಿದ್ದರಿಂದ ಕಳೆದ ಒಂದುವರೆ ದಶಕದಿಂದ ಪುರಸಭೆ ಇದನ್ನು ಬಳಸುತ್ತಿರಲಿಲ್ಲ.
ಆತಂಕ ಮೂಡಿಸಿದ್ದ ಟ್ಯಾಂಕ್: ಅಸ್ಥಿಪಂಜರದಂತೆ ನಿಂತಿದ್ದ ಈ ಓವರ್ಹೆಡ್ ಟ್ಯಾಂಕ್ ಇದ್ದ ಪ್ರದೇಶದ ವಸತಿ ಗೃಹಗಳ ಮಾಲೀಕರು ಯಾವಾಗ ಟ್ಯಾಂಕ್ ಕುಸಿದು ಬೀಳುತ್ತದೆಯೋ ಎಂಬ ಆತಂಕದೊಂದಿಗೆ ದಿನದೂಡುತ್ತಿದ್ದರು. ಅಲ್ಲದೇ ಈ ಟ್ಯಾಂಕನ್ನು ತೆರವುಗೊಳಿಸುವಂತೆ ಹತ್ತು-ಹಲವು ಬಾರಿ ಪುರಸಭೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟ್ಯಾಂಕ್ ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ಮುಖ್ಯಾಧಿಕಾರಿ ಸತ್ಯನಾರಾಯಣ್, ಪುರಸಭೆ ಅಭ್ಯಂತರ ಜಗದೀಶ್, ಪರಿಸರ ಅಭ್ಯಂತರ ನವೀನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

