ಸೂಜಿ ಮುರಿದ ಮಗು ಸಾವು ಪ್ರಕರಣ: ಮಹಿಳಾ ಆಯೋಗ ಪರಿಶೀಲನೆ
ಹಾಸನ: ವೈದ್ಯರ ನಿರ್ಲಕ್ಷದಿಂದ ಎರಡು ತಿಂಗಳ ಮಗುವಿನ ಸಾವಿಗೆ ಕಾರಣರಾದವರು ಮತ್ತು ಸಂಬಂಧಪಟ್ಟ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಮಹಿಳಾ ಆಯೋಗದ ಅಧ್ಯಕ್ಷರಾದ ಮಂಜುಳಾ ಮಾನಸ ಹೇಳಿದ್ದಾರೆ.
ರಾಜೀವ್ ನರ್ಸಿಂಗ್ ಹೋಂ ವೈದ್ಯರ ನಿರ್ಲಕ್ಷದಿಂದ 2 ದಿನಗಳ ಹಿಂದೆ ಮಗು ಮೃತಪಟ್ಟಿತ್ತು. ಈ ಹಿನ್ನೆ ಬುಧವಾರ ನಗರದ ಹಾಸನಾಂಬ ಕಲಾಕ್ಷೇತ್ರಕ್ಕೆ ಆಗಮಿಸಿದ ಅಧ್ಯಕ್ಷರು ಸಾವನಪ್ಪಿದ ಮಗುವಿನ ತಾಯಿ ಬಳಿ ಹೋಗಿ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಬಂಧಪಟ್ಟ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಜರಗಿಸಲಾಗುವುದು. ಮಗುವಿನ ತಾಯಿಗೆ ಮುಂದೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆಕೆಯ ಗಂಡ ಕೂಡ ಅಂಗವಿಕಲ ಹಾಗೂ ಬುದ್ದಿ ಭ್ರಮಣೆಯಿಂದ ನರಳುತ್ತಿದ್ದಾರೆ. ಚಿಕಿತ್ಸೆ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಪ್ರಕರಣ ಪೊಲೀಸ್ ಇಲಾಖೆಯಲ್ಲಿ ಕೇಸು ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತದೆ. ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದ ಮಗುವನ್ನು ಇಲಿ ಹೆಗ್ಗಣಗಳು ತಿಂದು ಹಾಕಿದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮಕ್ಕಳ ಮಾರಾಟ: ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಮಾಡುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆಯು ನಿಗಾವಹಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜೈನಹಳ್ಳಿ ರಶ್ಮಿ, ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ನವೀನ್ ಕುಮಾರ್, ಕರವೇಯ ಸತೀಶ್ ಪಾಟೀಲ್, ಆಮ್ ಆದ್ಮಿ ಪಕ್ಷದ ಅಕ್ಮಲ್, ಪದಾಧಿಕಾರಿಗಳು ಇದ್ದರು.
ಜೆಡಿಎಸ್ ಮುಖಂಡ ಟಿ. ಮಲ್ಲೇಶ್ ನಿಧನ
ಹೊಳೆನರಸೀಪುರ: ತಾಲೂಕು ಜೆಡಿಎಸ್ನ ಪ್ರಭಾವಿ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿದ್ದ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರೂ ಆದ ಟಿ.ಮಲ್ಲೇಶ್ (75) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರಿಯರು, ಪುತ್ರ, ಸಹೋದರರು, ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕಳೆದ ನಾಲ್ಕು ದಶಕಗಳಿಗೂ ಮಿಗಿಲಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರಮಾಪ್ತರಾಗಿದ್ದ ಟಿ.ಮಲ್ಲೇಶ್ ಅವರು ಪಟ್ಟಣದಲ್ಲಿನ ತಮ್ಮ ನಿವಾಸದಲ್ಲಿ ಕಳೆದ 20 ದಿನಗಳ ಹಿಂದೆ ಬಿದ್ದು ತಲೆಗೆ ಪೆಟ್ಟಾಗಿದ್ದ ಕಾರಣದಿಂದಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಲ್ಲೇಶ್ ಅವರು ಮೂರು ಬಾರಿ ಇಲ್ಲಿನ ಪುರಸಭೆಗೆ ಆಯ್ಕೆಯಾಗಿದ್ದು, ಒಮ್ಮೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಹಾಸನ ಜಿಲ್ಲಾ ಆರ್ಯ ಈಡಿಗ ಸಮುದಾಯದ ಹಾಗೂ ತಾಲೂಕು ಆರ್ಯ ಈಡಿಗ ಸಮುದಾಯದ ಅಧ್ಯಕ್ಷರಾಗಿದ್ದ ಇವರು, ಪಟ್ಟಣದ ಜೈ ವೀರ ಹನುಮಾನ್ ದೊಡ್ಡ ಗರಡಿಯ ಅಧ್ಯಕ್ಷರಾಗಿಯೂ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಚನ್ನಮ್ಮದೇವೇಗೌಡ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಭವಾನಿ ರೇವಣ್ಣ, ಕಾಂಗ್ರೆಸ್ ನಾಯಕಿ ಅನುಪಮ ಎಚ್.ಕೆ.ಜವರೇಗೌಡ ಮತ್ತಿತರರು ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.
ವಿದ್ಯಾರ್ಥಿ ಒಕ್ಕೂಟ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಲಿ
ಹಾಸನ: ಶಾಲಾ-ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿ ಒಕ್ಕೂಟಗಳು ಕೇವಲ ಚುನಾವಣೆ, ಪದಗ್ರಣಗಳಿಗೆ ಸೀಮಿತವಾಗದೆ ಅಲ್ಲಿನ ಎಲ್ಲಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹಾಸನದ ಹಿಮ್ಸ್ನ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ಸಿ. ಎನ್. ಜಗದೀಶ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟದ ಪದಗ್ರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದಲ್ಲಿ ಶೈಕ್ಷಣಿಕ ವಿಭಾಗದ ಡೀನ್ ಡಾ. ಕೆ.ಜೆ.ಮಲ್ಲಿಕಾ, ಆಡಳಿತ ವಿಭಾಗದ ಡೀನ್ ಡಾ. ಟಿ.ಬಿ ತ್ರಿಪಾಠಿ, ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕ ಡಾ. ಮುರಲೀದರ್ ಪೂಜಾರ್, ಕಳೆದ ಸಾಲಿನ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಡಾ. ಶ್ರೀಹರ್ಷ ಇದ್ದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್ ಮಾತನಾಡಿದರು. ಗಾಯಿತ್ರಿ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟದ ಸಲಹೆಗಾರ್ತಿ ಡಾ. ಅಜಂತಾ ಸ್ವಾಗತಿಸಿದರು. ಡಾ. ನಿವೇದಿತಾ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ. ಪ್ರಕಾಶ್ ಹೆಗಡೆ ವಂದಿಸಿದರು.
ರಾಜಿ ಸಂಧಾನದಿಂದ ಪ್ರಕರಣಗಳನ್ನು ಬಗೆಹರಿಸಿ
ನುಗ್ಗೇಹಳ್ಳಿ: ಸಾರ್ವಜನಿಕರ ಪ್ರೀತಿ ವಿಶ್ವಾಸ ಗಳಿಸಿದರೆ ಸಮಸ್ಯೆಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಹಾಗೂ ಅಪರಾಧಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಹೇಳಿದರು. ಅವರು ನುಗ್ಗೇಹಳ್ಳಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲಾ ಜಾತಿ ಜನಾಂಗದವರಿಗೂ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು. ಜಿಲ್ಲಾಪಂಚಾಯ್ತಿ ಸದಸ್ಯ ಎಂ.ಎ. ರಂಗಸ್ವಾಮಿ ಮಾತನಾಡಿ, ಜಗದೀಶ್ ಅವರು ಪಕ್ಷ ಭೇದ, ಬಡವ ಶ್ರೀಮಂತ ಎಂದು ತಾರತಮ್ಯ ಮಾಡದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು. ವೃತ್ತ ನಿರೀಕ್ಷಕ ಶೈಲೇಂದ್ರ ಅಧ್ಯಕ್ಷತೆ ವಹಿಸಿದ್ದರು. ಎನ್.ಪಿ. ಪುಟ್ಟಸ್ವಾಮಿ, ಆರ್.ಎಂ.ಸಿ. ನಿರ್ದೇಶಕ ಬಿ.ಆರ್. ದೊರೆಸ್ವಾಮಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಲಕ್ಷ್ಮಣ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜಣ್ಣ, ಸಿ.ಬಿ. ಶಂಕರ್, ಅಶೋಕ್, ಗ್ರಾಪಂ ಸದಸ್ಯ ಎನ್.ಆರ್. ಮಹೇಶ್, ಮಂಜುನಾಥ್, ನೇರಲೆಕೆರೆ ಮಂಜುನಾಥ್, ಎಎಸ್ಐ ಪುಟ್ಟರಾಜಯ್ಯ ಉಪಸ್ಥಿತರಿದ್ದರು.
ರಕ್ತದಾನ ಶಿಬಿರ
ಚನ್ನರಾಯಪಟ್ಟಣ: ರೆಡ್ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳು ಹಾಗೂ ತಾಲೂಕು ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮ ವಿಶೇಷವಾಗಿ ಪಟ್ಟಣದಲ್ಲಿ ಜರುಗಿತು. ರೆಡ್ಕ್ರಾಸ್ ಸಂಸ್ಥೆ ಜನತೆ ರಕ್ತದಾನ ನೀಡಲು ಆಸ್ಪತ್ರೆ ಅಥವಾ ಶಿಬಿರಗಳು ಇದ್ದ ಸ್ಥಳಕ್ಕೆ ಹೋಗಬೇಕೆಂಬುದನ್ನು ಜನತೆಯಿಂದ ಮರೆಸಿ ಜನತೆಯ ಬಳಿಯೇ ಹೋಗಿ ರಕ್ತವನ್ನು ದಾನವಾಗಿ ಪಡೆಯಲು ಮುಂದಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ 200ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವಲ್ಲಿ ಮುಂದಾದರು. ರಕ್ತದಾನ ಪಡೆಯಲು ರೆಡ್ಕ್ರಾಸ್ಸ್ಂಸ್ಥೆ ಸುಸಜ್ಜಿತವಾದ ಎಸಿ ಸೌಲಭ್ಯ ಹಾಗೂ ರಕ್ತ ಪಡೆಯಲು ಅಗತ್ಯ ಸಲಕರಣೆಗಳನ್ನು ಹೊಂದಿರುವ ಬಸ್ ಪಟ್ಟಣದ ಹೊಸಬಸ್ ನಿಲ್ದಾಣ, ಕೆ.ಆರ್. ಸರ್ಕಲ್ ಹಾಗೂ ಆಸ್ಪತ್ರೆ ಆವರಣ ಸೇರಿದಂತೆ ಪಟ್ಟಣದಲ್ಲಿ ಸಂಚರಿಸಿ ರಕ್ತದಾನ ಕುರಿತು ಪ್ರಚಾರ ನಡೆತು.
ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ
ಮೈಸೂರು: ಜೆಡಿಎಸ್ ಮುಖಂಡ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ, ನಗರ ಕಾನೂನು ಘಟಕದ ಅಧ್ಯಕ್ಷ ಎನ್.ಆರ್.ರವಿಚಂದ್ರೇಗೌಡ ನಂಜನಗೂಡಿನಲ್ಲಿ ಶ್ರೀಕಂಠೇಶ್ವರನ ದರ್ಶನ ಪಡೆದರು. ನಂಜನಗೂಡಿನ ಹಿರಿಯ ವಕೀಲ ಹಾಗೂ ಮಾಜಿ ಧರ್ಮದರ್ಶಿಗಳಾದ ಶ್ರೀಕಂಠಪ್ರಸಾದ್ ಅವರು ವಕೀಲರ ಪರವಾಗಿ ಚಂದ್ರಶೇಖರಯ್ಯ ಅವರನ್ನು ಸನ್ಮಾನಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಕಳಲೆ ಕೇಶವಮೂರ್ತಿ ಇದ್ದರು.
ಸಿಇಟಿ ತರಬೇತಿ
ಮೈಸೂರು: ಚಾಮರಾಜ ಮೊಹಲ್ಲಾದಲ್ಲಿರುವ ಜ್ಞಾನದೀಪ್ತಿ ಟ್ರಸ್ಟ್ನಲ್ಲಿ ಎಸ್ಬಿಐ, ಐಬಿಪಿಎಸ್ನ ಕ್ಲರಿಕಲ್, ಪಿಒ ಪರೀಕ್ಷೆಗಳಿಗೆ ಜೂ.27 ರಿಂದ ತರಬೇತಿ ನೀಡಲಿದ್ದು, ಮೊ. 98440 99674 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

