ಹಾಸನ

'ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಕಷ್ಟು ತೊಂದರೆ'

Published On :

ಹಾಸನ: ಮಹಿಳೆ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆಯುವಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾಳೆ ಎಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ. ಕವಿತಾ ರೈ ಅಭಿಪ್ರಾಯಪಟ್ಟರು.
ಹಾಸನಾಂಬ ಕಲಾಕ್ಷೇತ್ರದ ಕೆ.ಸಣ್ಣೇಗೌಡ ವೇದಿಕೆಯಲ್ಲಿ ಶನಿವಾರ ನಡೆದ 14ನೇ ಜಿಲ್ಲಾ  ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಮಹಿಳಾ ಗೋಷ್ಠಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಮಹಿಳೆ ತಾನು ಅಭಿವ್ಯಕ್ತಿಗೊಳ್ಳುವ ಪ್ರತಿ ಹಂತದಲ್ಲೂ ಪುರುಷರಿಂದ ಬೆದರಿಕೆಗೆ ಒಳಗಾಗುತ್ತಿದ್ದಾಳೆ. ಮಹಿಳೆ ತನ್ನ ತನವನ್ನು ಅಭಿವ್ಯಕ್ತಿಗೊಳಿಸುವ ಸಮಾಜ ನಿರ್ಮಾಣವಾಗಬೇಕಾದ ಅವಶ್ಯಕತೆ ಇದೆ ಎಂದರು. ಸಮಾಜದಲ್ಲಿ ಮಹಿಳೆಯರಿಗೆ ಕಾನೂನಿ ಬೆಂಬಲವಿಲ್ಲದಿದ್ದರಿ ಆಕೆಯ ಜೀವನ ದುಸ್ಥರವಾಗುತ್ತಿತ್ತು. ಜೊತೆಗೆ ಕಾನೂನು ಬೆಂಬಲ ಇಲ್ಲದಿದ್ದರೆ ಮಹಿಳೆಗೆ ಸಮಾಜದಲ್ಲಿ ಬದುಕುವ ಅವಕಾಶವೇ ಇರುತ್ತಿರಲಿಲ್ಲ ಎಂದ ಅವರು, ಸಮಾಜದಲ್ಲಿ ಸ್ತ್ರೀ ವಾದದಿಂದ ಯಾವುದೇ ಯುದ್ಧಗಳಾಗಲಿ, ಸಾಮೂಹಿಕ ಕೊಲೆಗಳಾಗಲಿ ನಡೆದಿಲ್ಲ, ಬದಲಾಗಿ ಸ್ತ್ರೀ ಮತದಾನದ ಹಕ್ಕು, ಶೈಕ್ಷಣಿಕ ಅವಕಾಶ, ಭದ್ರತೆ ಪಡೆದು ಕೊಂಡಿದ್ದಾಳೆ ಎಂದರು. ವಿಜಯಾ ವಿದ್ಯಾಸಂಸ್ಥೆ ಕಾರ್ಯದರ್ಶಿ ತಾರಾ ಸ್ವಾಮಿ ಮಾತನಾಡಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ಧಾರವಾಹಿಗಳಿಂದಾಗಿ ಮಹಿಳೆಯರನ್ನು ಇಂದು ಕೀಳರಿಮೆ  ಭಾವನೆಯಿಂದ ನೋಡುವಂತಾಗಿದೆ. ಈ ಧಾರವಾಹಿಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ ಎಂದರು. ಮಹಿಳೆಯರ ಮೇಲೆ ಇಂದು ಮಾನಸಿಕ ಮತ್ತು ದೈಹಿಕ ಒತ್ತಡ ಹೆಚ್ಚಾಗುತ್ತಿದ್ದು, ಮಹಿಳೆಯರ ಬಗ್ಗೆ ಪುರುಷರಲ್ಲಿ ಗೌರವ ಭಾವನೆ ಮೂಡಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ಅಕಾಡಮಿ ಸದಸ್ಯ ಪಿ. ಚಂದ್ರಿಕಾ ಮಾತನಾಡಿ, ಜಾಗತೀಕರಣದಿಂದ ಸ್ತ್ರೀಯರ ಮೇಲಿನ ಕ್ರೌರ್ಯ ಹೆಚ್ಚಾಗುತ್ತಿದ್ದು, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆ. ಮಹಿಳೆ ದೈಹಿಕವಾಗಿ ಕುಗ್ಗಿದ್ದು, ಪುರುಷರನ್ನು ಎದುರಿಸಿ ಕಾನೂನು ಸಮರ ಸಾಧಿಸಬೇಕಾದ ಅಗತ್ಯತೆ ಇದೆ ಎಂದು ಒತ್ತಿ ನುಡಿದರು.
ಸಾಹಿತಿ ಪ್ರಭಾಮಣಿ ನಾಗರಾಜು 'ವರ್ತಮಾನದ ಸವಾಲುಗಳು' ಕುರಿತು ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.