ಹಾಸನ

ಮಹಾಶಿವರಾತ್ರಿ ಸುಂದರ ಸಂಜೆ: ಜನಮನ ರಂಜಿಸಿದ ಗಾನಸುಧೆ

Published On :

ಅರಕಲಗೂಡು: ಮಹಾಶಿವರಾತ್ರಿ ಸುಂದರ ಸಂಜೆಯಲ್ಲಿ ನಡೆದ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ನಿವೇದಿತಾ ವಿದ್ಯಾಶಾಲೆ ಆಯೋಜಿಸಿದ್ದ ಗಾನಸುಧೆ ಕಾರ್ಯಕ್ರಮ ಶಿವಾಲಯಕ್ಕೆ ಬಂದಿದ್ದ ಜನರ ಮನಸ್ಸುಗಳನ್ನು ರಂಜಿಸಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ತಮ್ಮ ಮಧುರ ಕಂಠಗಳಿಂದ ಹಾಡುತ್ತಾ ಜನಮನಗಳನ್ನು ಸೂರೆಗೊಳಿಸಿದವರುಗಳಲ್ಲಿ ಖ್ಯಾತ ಸಂಗೀತ ಕಲಾವಿದೆ ವಿಧುಷಿ ಜಂಬೆ ಎಸ್.ವಿದ್ಯಾರಾಣಿ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಎಸ್.ಎನ್. ನಾಗಮಣಿ, ಕು. ಅನುಕೌಶಿಕ್ ಜೊತೆಗೆ ಪುಟ್ಟ ಬಾಲಕಿ ಅಕ್ಷಯ ತಮ್ಮ ಮಧುರ ಗೀತೆಗಳನ್ನು ಹಾಡುವ ಮೂಲಕ ಕಲಾ ರಸಿಕರ ಮನ ಸೂರೆಗೊಳಿಸಿದರು.
ಇದೇ ವೇದಿಕೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಭರತನಾಟ್ಯ ಕಲಾವಿದೆ ಭೂಮಿಕಾ ಆಕರ್ಷಕ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಜನಮನ ಗೆದ್ದದ್ದು ವಿಶೇಷವಾಗಿತ್ತು.


ಆಶ್ರಮದಲ್ಲಿ 5 ಕೋಟಿ ವೆಚ್ಚದಲ್ಲಿ ದೇವಾಲಯಗಳ ಸಮುಚ್ಚಯ


ಅರಸೀಕೆರೆ: ಪಟ್ಟಣದ ಮೈಸೂರು ರಸ್ತೆ ಎಡಭಾಗದ ವಿದ್ಯಾನಗರದ ಬಡಾವಣೆಯಲ್ಲಿರುವ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ 5 ಕೋಟಿ ವೆಚ್ಚದಲ್ಲಿ ದೇವಾಲಯಗಳ ಸಮುಚ್ಚಯದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ಆದಿತ್ಯ, ಅಂಬಿಕಾ, ಗಣನಾಥ, ಮಹೇಶ್ವರ ದೇವಾಲಯಗಳು ವಿಷ್ಣು ಪಂಚಾಯಿತಿ ರೀತಿಯಲ್ಲಿ ಶಾಸ್ತ್ರೋಕ್ತವಾಗಿ ನಿರ್ಮಾಣವಾಗುತ್ತಿದ್ದು, ಈಗಾಗಲೇ 4 ಕಲ್ಲಿನ ಕೆತ್ತನೆಯ ದೇವಾಲಯಗಳು ಅಂತಿಮ ಹಂತದಲ್ಲಿದೆ ಎಂದು ಮಾರುತಿ ಸಚ್ಚಿದಾನಂದ ಆಶ್ರಮದ ಸತೀಶ್ ಶರ್ಮಾ ಗುರೂಜಿ ತಿಳಿಸಿದರು. ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ದೇವಾಲಯವಲ್ಲದೆ ಔದುಂಬರ ಮರದ ಕೆಳಗೆ ನಾಗಬನ ನಿರ್ಮಾಣವಾಗಿ ಭಕ್ತರ ಯಶಸ್ಸಿಗೆ ಕಾರಣವಾಗಿದ್ದು, ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ನಿತ್ಯ ದಾಸೋಹಕ್ಕಾಗಿ ಪ್ರಸಾದ ನಿಲಯ ನಿರ್ಮಿಸಲಾಗುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.