ಹಾಸನ

'ಸ್ತ್ರೀಯರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲಿ'

Published On :

ಹಾಸನ: ಸಮಾಜವನ್ನು ಬದಲಾಯಿಸುವಂತಹ ಶಕ್ತಿ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಿದ್ದು, ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳಬೇಕಾಗಿದೆ ಎಂದು ಸಾಹಿತಿ ಸುಬ್ಬು ಹೊಲೆಯಾರ್ ಅಭಿಪ್ರಾಯಪಟ್ಟರು.
ನಗರದ ಹಾಸನಾಂಬ ಕಲಾಕ್ಷೇತ್ರದ ಕೆ.ಸಣ್ಣೇಗೌಡ ವೇದಿಕೆಯಲ್ಲಿ ನಡೆದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾವ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರು ಆತ್ಮ ವಿಶ್ವಾಸದಿಂದ ಬರೆಯುವುದನ್ನು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದ ಅವರು, ಸಮಾಜದಲ್ಲಿರುವ ಜಾತೀಯತೆಯನ್ನು ಹೊಗಲಾಡಿಸುವ ಶಕ್ತಿ ಕೇವಲ ಸಾಹಿತ್ಯಕ್ಕೆ ಮಾತ್ರ ಇದೆ ಎಂದು ಹೇಳಿದರು.
ಪ್ರಸ್ತುತ ಸಮಾಜವು ಜಾತಿ, ಧರ್ಮದ ಹೆಸರಿನಲ್ಲಿ ಕಳೆದು ಹೋಗುತ್ತಿದ್ದು, ಬುದ್ಧ, ಪಂಪ, ಗಾಂಧಿ, ಕುವೆಂಪು ಹಾಗೂ ಅಂಬೇಡ್ಕರ್ ನೀಡಿದ ಸಂದೇಶಗಳನ್ನು ನಾವು ಮರೆತ್ತಿದ್ದೇವೆ.
 ಅವರು ಹಾಕಿಕೊಟ್ಟ ನೆಲಗಟ್ಟಿನ ಮೇಲೆ ನಾವೆಲ್ಲರೂ ನಡೆಯಬೇಕಾದ ಅಗತ್ಯತೆ ಇದ್ದು, ಇವರೆಲ್ಲರ ಉದ್ದೇಶ ಮನುಷ್ಯ ಪರಸ್ಪರ ಪ್ರೀತಿ ಹಾಗೂ ವಿಶ್ವಾಸದಿಂದ ಜೀವಿಸಬೇಕೆಂಬುದಾಗಿ ಎಂದರು.
ಸಾಮಾಜಿಕ ಬದ್ಧತೆ ಮರೆಯದಿರಿ: ಉದಯೋನ್ಮುಖ ಯುವ ಕವಿಗಳು ಸಾಮಾಜಿಕ ಬದ್ಧತೆಯನ್ನು ಮರೆತು ಸಾಹಿತ್ಯದಲ್ಲಿ ತೊಡಗಿದ್ದಾರೆ. ಸಾಹಿತ್ಯದ ಬಗ್ಗೆ ಪ್ರತಿಯೊಬ್ಬರಲ್ಲೂ ಕಾಳಜಿ, ಪ್ರೀತಿ ಮೂಡಿದಾಗ ಮಾತ್ರ ನಮ್ಮ ಕನ್ನಡ ಸಂಸ್ಕೃತಿ ಉಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.