ಮತ್ತೊಂದು ಸಂಶೋಧನಾ ಕೇಂದ್ರದ ಅಗತ್ಯವಿಲ್ಲ: ಸ್ಪಷ್ಟನೆ
ಹಾಸನ: ಆಲೂಗಡ್ಡೆ ದೃಢೀಕೃತ ಬಿತ್ತನೆ ಬೀಜ ವಿತರಣೆ ಮತ್ತು ತಳಿ ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಅಗತ್ಯವಿಲ್ಲ ಎಂದು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಉತ್ತರಿಸಿದರು.
ಆಲೂಗಡ್ಡೆ ಬೆಳೆಯ ಅಂಗಮಾರಿ ರೋಗಕ್ಕೆ ಸೂಕ್ತ ಪರಿಹಾರ ಒದಗಿಸಲು ಮತ್ತು ಈ ಬೆಳೆಗೆ ಬರುವಂತಹ ರೋಗಗಳ ಸಂಪೂರ್ಣ ತಡೆಗೆ ಸಮಗ್ರ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಲು ಕ್ರೀಯಾ ಯೋಜನೆಯನ್ನು ರೂಪಿಸಿಲ್ಲವಾದ್ದರಿಂದ ಆಲೂಗಡ್ಡೆ ಬಿತ್ತನೆ ತಳಿ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಮತ್ತು ಸರ್ಟಿಫೈಡ್ ಬಿತ್ತನೆ ಬೀಜ ವಿತರಿಸಲು ಅನುದಾನ ಕಲ್ಪಿಸುವ ವಿಚಾರದ ಬಗ್ಗೆ ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ ವಿಧಾನ ಪರಿಷತ್ನಲ್ಲಿ ಕೇಳಲಾದ ಪ್ರಶ್ನೆಗೆ ಈ ರೀತಿ ಸಚಿವರು ಉತ್ತರಿಸಿದರು.
ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯ ಬಗ್ಗೆ ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ ವತಿಯಿಂದ ಒಂದು ಪ್ರಾದೇಶಿಕ ಆಲೂಗಡ್ಡೆ ಕೇಂದ್ರ ಸ್ಥಾಪಿಸಲು ಉಜಠ್ಡಡಿಣ ಉ್ಝ್ಠಜ್ಛಡ್ಟ್ಠಿ ಎಜಟಿಜ್ಠಛಟ (ಏ್ಟ್ಠಡ್ಝ್ಛ್ಡಿಟಡ್ಡ್ಠಿಜ), ಐಟಿಜ್ಝಛಟಿ ಈ್ಟ್ಡಟ್ಛ್ಝಿಟ ್ಟಜಿ ಆ್ಜ್ಠ್ಝ್ಛ್ಡಟಡ್ಡ್ಠಿಜ ಖಜಡಜಝ್ಠ್ಛ,ಃಜಢಿ ಉಜಝ್ಝ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಇವರು ಆಟಟ ಐಟಿಜ್ಝಛ ಈ್ಟ್ಟ್ಠಜ್ಝಟಿಛಡಿಜಜ ಖಜಡಜಝ್ಠ್ಛ ಕ್ಠ್ಟಿಞಜ್ಛಡ್ಟಿಟಿ ಕ್ಟಿಡಿಛಡ್ಟಿ ಅಡಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಈ ಕೇಂದ್ರಗಳು ಸ್ಥಳ ಹಾಗೂ ಕಾಲಕ್ಕನುಗುಣವಾಗುವಂತಹ ತಳಿಗಳನ್ನು ಗುರುತಿಸಿ, ಹಾಸನ ಹಾಗೂ ಸಂರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಮತ್ತೊಂದು ಸಂಶೋಧನಾ ಕೆಂದ್ರ ಸ್ಥಾಪಿಸಲು ಅಗತ್ಯವಿರುವುದಿಲ್ಲ ಎಂದು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರು ತಿಳಿಸಿದರು.
ಬಿತ್ತನೆ: ರಾಜ್ಯದಲ್ಲಿ ಆಲೂಗಡ್ಡೆಯನ್ನು ಹಾಸನ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದ್ದು, ಹಾಸನ ಜಿಲ್ಲೆಯು ರಾಜ್ಯದಲ್ಲಿ ಅತ್ಯಂತ ಹೆಚ್ಚು ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುವ ಜಿಲ್ಲೆಯಾಗಿದ್ದು, ಪ್ರತಿ ವರ್ಷ ಋತುಮಾನದ ಸೂಕ್ತತೆ ಅನುಗುಣವಾಗಿ ಸುಮಾರು 20,000 -30,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಮುಖ್ಯವಾಗಿ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುವ ಆಲೂಗಡ್ಡೆ, ಹವಾಮಾನ ವೈಪರೀತ್ಯದಿಂದಾಗಿ, ಅಂಗಮಾರಿ ರೋಗದಿಂದಾಗಿ ಬೆಳೆ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಂಶೋಧನೆಗಳ ಪ್ರಕಾರ ಪಂಜಾಬಿನ ಜಲಂಧರ್ ಪ್ರದೇಶವು ನಿಗದಿತ ಅವಧಿಯೊಳಗೆ ಬೀಜ ಉತ್ಪಾದನೆ ಮಾಡಲು ಸೂಕ್ತವಾಗಿದ್ದು, ಕರ್ನಾಟಕದಲ್ಲಿ ಬೀಜ ಉತ್ಪಾದನೆಗೆ ಪೂರಕವಾದ ಹವಾಮಾನ ಇಲ್ಲ. ಈ ಬಗ್ಗೆ ಸಂಶೋಧನೆ ಮುಂದುವರೆದಿದ್ದು, ಯಾವುದಾದರೂ ಪ್ರದೇಶದಲ್ಲಿ ಸೂಕ್ತತೆ ಕಂಡು ಬಂದಲ್ಲಿ ಮಾತ್ರ ಬೀಜೋತ್ಪಾದನೆ ಕೈಗೊಳ್ಳಬಹುದಾಗಿರುತ್ತದೆ ಎಂದರು.
ಪಂಜಾಬಿನಿಂದ ಸರಬರಾಜಾಗುವ ಆಲೂಗಡ್ಡೆ ದೃಢೀಕೃತ ಬೀಜವಾಗಿರುವುದಿಲ್ಲ ಎಂದ ಸಚಿವರು, ಪಂಜಾಬ್ನಿಂದ ಬರುವ ಆಲೂಗಡ್ಡೆ ಬೀಜಗಳು, ಬಹುತೇಕ ಕುಫ್ರಿ ಜ್ಯೋತಿ ತಳಿಯದಾಗಿರುತ್ತದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ, ದೃಢೀಕೃತ ಬಿತ್ತನೆ ಬೀಜ ಸರಬರಾಜು ಮಾಡುವ ಪ್ರಯತ್ನವೂ ಸಹ ವಿಫಲವಾಗಿರುತ್ತದೆ ಎಂದ ಸಚಿವರು, ರಾಷ್ಟ್ರೀಯ ಬೀಜ ನಿಗಮದಿಂದ ಒಟ್ಟು 496 ಮೆ. ಟನ್ನಷ್ಟು ದೃಢೀಕೃತ ಬಿತ್ತನೆ ಆಲೂಗಡ್ಡೆಯನ್ನು ಹಾಸನ ಜಿಲ್ಲೆಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೇವಲ 221 ಮೆ. ಟನ್ನ ದೃಢೀಕೃತ ಆಲೂಗಡ್ಡೆ ಮಾರಾಟವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

